ಯುವ ಸಂಘಟಕ ಹಾಗೂ ಹೋರಾಟಗಾರರಿಗೆ ಸದಾವಕಾಶ..
ಬೆಳಗಾವಿ : ಸಮಾಜದ ಯಾವುದೇ ಸಮುದಾಯದ ಸಮಾನತೆಗಾಗಿ, ಅದರ ಹಕ್ಕಿಗಾಗಿ ಆ ಸಮುದಾಯದ ಯುವಸಮುಹ ಸಂಘಟನೆ ಮತ್ತು ಹೋರಾಟದಲ್ಲಿ ತೊಡಗುವುದು ತುಂಬಾ ಅವಶ್ಯಕ ಆಗಿರುತ್ತದೆ, ಅದೇ ರೀತಿ ಮಾದಿಗ ಸಮುದಾಯದ ಬೆಳಗಾವಿಯ ಯುವ ಸಮೂಹಕ್ಕೂ ಒಂದು ಉತ್ತಮ ಅವಕಾಶ ದೊರಕಿದೆ..
ನಗರದ ಸರ್ಕ್ಯುಟ್ ಹೌಸ್ ನಲ್ಲಿ ಇದೇ ರವಿವಾರ ದಿನಾಂಕ 13/08/2023 ರಂದು, ಮಧ್ಯಾಹ್ನ 3 ಗಂಟೆಗೆ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆ ಜರುಗಲಿದೆ.

ಈ ಸಭೆಯಲ್ಲಿ ಜಿಲ್ಲಾ ಮಟ್ಟದ (MRHS) ಮಾದಿಗ ಮೀಸಲಾತಿ ಹೋರಾಟ ಸಮಿತಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಜಿಲ್ಲೆಯ ಮಾದಿಗ ಸಮುದಾಯದ ಕ್ರಿಯಾಶೀಲ ಯುವಕರು ಇದರಲ್ಲಿ ಭಾಗಿಯಾಗಿ, ಸಂಘಟನೆಯ ಪದಾಧಿಕಾರಿಯಾಗಿ, ಸಮುದಾಯದ ಶ್ರೇಯಸ್ಸಿಗಾಗಿ ನಮ್ಮ ಜೊತೆ ಕೈ ಜೋಡಿಸಬೇಕು ಎಂದು ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷರಾದ ಬಸವರಾಜ ಅರವಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
ವರದಿ ಪ್ರಕಾಶ ಕುರಗುಂದ..