ರಂಗೇರಿದ ಬೆಳಗಾವಿ ಪಾಲಿಕೆಯ ನೌಕರರ ಕೋ ಆಫ್ ಕ್ರೆಡಿಟ್ ಸೊಸೈಟಿಯ ಚುನಾವಣೆ..

ರಂಗೇರಿದ ಬೆಳಗಾವಿ ಪಾಲಿಕೆಯ ನೌಕರರ ಕೋ ಆಫ್ ಕ್ರೆಡಿಟ್ ಸೊಸೈಟಿಯ ಚುನಾವಣೆ..

ಚುನಾವಣಾ ಕಣದಲ್ಲಿ 11 ಸ್ಥಾನಗಳಿಗೆ 26 ಸ್ಪರ್ಧಿಗಳ ಪೈಪೋಟಿ..

ಬೆಳಗಾವಿ : ದಿ ಬೆಳಗಾವಿ ಸಿಟಿ ಕಾರ್ಪೊರೇಷನ್ ಎಂಪ್ಲಾಯೀಜ ಕೋ ಆಫ್ ಕ್ರೆಡಿಟ್ ಸೊಸೈಟಿಯ ಮುಂದಿನ ಐದು ವರ್ಷಗಳ ಆಡಳಿತ ಅವಧಿಗಾಗಿ ಇದೇ ರವಿವಾರ ದಿನಾಂಕ 17/08/2025ರಂದು ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ನಡೆಯುತ್ತಿದ್ದು, ಸ್ಪರ್ಧಿಗಳ ತೀವ್ರ ಪೈಪೋಟಿಯಿಂದ ಚುನಾವಣೆ ರಂಗೇರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.

ಹನ್ನೆರಡು ಸದಸ್ಯರು ಇರುವ ಆಡಳಿತ ಮಂಡಳಿಯ ನಿರ್ದೇಶಕರ ತಂಡಕ್ಕೆ ಈಗಾಗಲೇ ಪರಿಶಿಷ್ಟ ಜಾತಿಯ ವಿಭಾಗದಲ್ಲಿ ಮುಖ್ಯವಾದ ಅಭ್ಯರ್ಥಿ (ಸ್ಪರ್ಧಿ) ತನ್ನ ನಾಮಪತ್ರ ಹಿಂಪಡೆದ ಕಾರಣ, ಮತ್ತೊಬ್ಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆ ಆಗಿದ್ದು, ಉಳಿದ 11 ಸ್ಥಾನಗಳಿಗಾಗಿ 26 ಸ್ಪರ್ಧಿಗಳು ಚುನಾವಣಾ ಕಣದಲ್ಲಿ ಪೈಪೋಟಿಯಲ್ಲಿ ಇದ್ದಾರೆ ಎಂಬ ಮಾಹಿತಿಯಿದೆ.

ಸಾಮಾನ್ಯ ವರ್ಗದಲ್ಲಿ ಒಟ್ಟು ಆರು ಸ್ಥಾನಗಳಿಗೆ 15 ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದರೆ, ಮಹಿಳಾ ವರ್ಗದಲ್ಲಿ ಎರಡು ಸ್ಥಾನಗಳಿಗೆ ನಾಲ್ಕು ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದಾರೆ, ಹಿಂದುಳಿದ ಪ್ರವರ್ಗ ಒಂದರಲ್ಲಿ ಒಂದು ಸ್ಥಾನಕ್ಕೆ ಎರಡು ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದರೆ, ಹಿಂದುಳಿದ ಬ ವರ್ಗದಲ್ಲಿಯೂ ಒಂದು ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನು ಪರಿಶಿಷ್ಟ ವರ್ಗಗಳ ವಿಭಾಗದಲ್ಲಿ ಒಂದು ಸ್ಥಾನಕ್ಕೆ ಮೂರು ಅಭ್ಯರ್ಥಿಗಳು ಸ್ಪರ್ಧೆ ನಡೆಸುತ್ತಿದ್ದು ಈ ಸಲದ ಚುನಾವಣೆ ಅತೀ ಕುತೂಹಲದಿಂದ ಕೂಡಿದೆ ಎನ್ನಬಹುದಾಗಿದೆ.

ಈ ಕೋ ಆಫ್ ಕ್ರೆಡಿಟ್ ಸೊಸೈಟಿಯ ಚುನಾವಣೆಯಲ್ಲಿ ಎರಡು (ತಂಡ) ಗುಂಪುಗಳಿದ್ದು, ತಮ್ಮ ತಮ್ಮ ಪೇನಲ್ ಬಹುಮತವನ್ನು ಪಡೆಯಬೇಕೆಂದು ಎಲ್ಲರೂ ತಮ್ಮ ತಮ್ಮ ಹಂತದಲ್ಲಿ ಚುನಾವಣಾ ತಂತ್ರಗಳನ್ನು ಮಾಡುತ್ತಿದ್ದು, ಯಾವ ಪೇನಲ್ ಬಹುಮತವನ್ನು (7 ಸದಸ್ಯರ ಆಯ್ಕೆ) ಪಡೆದು ಆಡಳಿತದ ಚುಕ್ಕಾಣಿಯನ್ನು ಹಿಡಿಯುವದೆಂಬುದನ್ನು ಕಾದು ನೋಡಬೇಕು.

ಪಾಲಿಕೆ ನೌಕರರ ಕೋ ಆಫ್ ಕ್ರೆಡಿಟ್ ಸೊಸೈಟಿಯಲ್ಲಿ ಒಟ್ಟು 272 ಮತದಾರರಿದ್ದು, ಮತದಾರರು ನೀಡಿದ ಪಲಿತಾಂಶದಂತೆ ರವಿವಾರ ಸಂಜೆ ವಿಜಯೋತ್ಸವದ ಕಹಳೆ ಮೊಳಗುವದೆಂಬ ಮಾತಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..