ರಜೆ ದಿನವೂ ಶಿಸ್ತಿನ ಕಾರ್ಯ ನಿರ್ವಹಿಸಿದ ಪಾಲಿಕೆಯ ಕಂದಾಯ ಸಿಬ್ಬಂದಿ..

ರಜೆ ದಿನವೂ ಶಿಸ್ತಿನ ಕಾರ್ಯ ನಿರ್ವಹಿಸಿದ ಪಾಲಿಕೆಯ ಕಂದಾಯ ಸಿಬ್ಬಂದಿ..

ಪಾಲಿಕೆಯ ತೆರಿಗೆ ಸಂಗ್ರಹದ ಗುರಿ ಮುಟ್ಟಲು ಸಿಬ್ಬಂದಿಗಳ ಶರವೇಗದ ಕೆಲಸ..

ಕಂದಾಯ ಉಪಆಯುಕ್ತೆ ರೇಷ್ಮಾ ತಾಳಿಕೋಟೆ ತಂಡದ ಒಗ್ಗಟ್ಟಿನ ಪ್ರದರ್ಶನ..

ಬೆಳಗಾವಿ : ಶನಿವಾರ ಹಾಗೂ ರವಿವಾರ ವಾರಾಂತ್ಯದ ರಜಾ ದಿನಗಳು ಇದ್ದರೂ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಸಿಬ್ಬಂದಿಗಳು ಕರ್ತವ್ಯದಲ್ಲಿ ಭಾಗಿಯಾಗಿ, ತೆರಿಗೆ ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದು, ಪಾಲಿಕೆಯ ಆರ್ಥಿಕತೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ..

ರವಿವಾರ ಬೆಳಿಗ್ಗೆನೇ ಕಂದಾಯ ವಿಭಾಗದ ಕಂದಾಯ ನಿರೀಕ್ಷಕರು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ಪಿಲ್ಡಿಗಿಳಿದು ತೆರಿಗೆ ತುಂಬಬೇಕಾದ ನಗರವಾಸಿಗಳ ಬಳಿ ತೆರಳಿ, ತೆರಿಗೆ ಚಲನ ನೀಡಿ, ಕೆಲವರಿಗೆ ನೋಟಿಸ್ ನೀಡಿ, ಒಂದು ವೇಳೆ ತೆರಿಗೆ ತುಂಬುವ ವಿಷಯದಲ್ಲಿ ವಿಳಂಬ ಮಾಡಿದರೆ ಆಗುವ ಪರಿಣಾಮದ ಕುರಿತಾಗಿ ಸಾರ್ವಜನಿಕರಿಗೆ ತಿಳಿ ಹೇಳಿದ್ದಾರೆ..

ಈ ಹಿಂದೆ ಪಾಲಿಕೆಯ ಕಂದಾಯ ಉಪ ಆಯುಕ್ತರಾದ ರೇಷ್ಮಾ ತಾಳಿಕೋಟೆ ಅವರು ನೀಡಿದ ಕಟ್ಟುನಿಟ್ಟಾದ ಸೂಚನೆ ಹಾಗೂ ಶಿಸ್ತಿನ ಮಾರ್ಗದರ್ಶನದ ಅನುಸಾರವಾಗಿ ಕಳೆದ ಕೆಲ ತಿಂಗಳಿನಿಂದ ಕಂದಾಯ ಸಿಬ್ಬಂದಿಗಳು ವ್ಯವಸ್ಥಿತವಾಗಿ ತೆರಿಗೆ ಸಂಗ್ರಹ ಕಾರ್ಯ ಮಾಡುತ್ತಿದ್ದು, ಈ ವರ್ಷ ಅಂದುಕೊಂಡ ಗುರಿ ಮುಟ್ಟುವ ಸಾಧ್ಯತೆಯಿದೆ ಎಂಬ ಮಾಹಿತಿಯಿದೆ..

ಇಂದು ಬೆಳಗಾವಿ ಉತ್ತರ ಹಾಗೂ ದಕ್ಷಿಣ ವಲಯದ ಕಂದಾಯ ಸಿಬ್ಬಂದಿಗಳು ನಗರದ ವಿವಿಧ ಕಡೆಗೆ ಬೇಟಿ ನೀಡಿದ್ದು, ಮಹಾಂತೇಶ ನಗರ, ಖಡೆ ಬಜಾರಿನ ರವಿವಾರ ಪೇಟೆ, ಮಜಗಾವಿ, ಶಿವಬಸವ ನಗರ, ನೆಹರು ನಗರ, ಬೆಳಗಾವಿ ಮಾರ್ಕೆಟ್ ಯಾರ್ಡ್ ಮತ್ತಿತರ ಸ್ಥಳಗಳಿಗೆ ಬೇಟಿ ನೀಡಿ ತಮ್ಮ ಕಾರ್ಯ ಮಾಡಿದ್ದಾರೆ.

ಪಾಲಿಕೆ ಸಿಬ್ಬಂದಿಗಳ ಈ ಕಾರ್ಯ ತೆರಿಗೆ ತುಂಬುವ ಸಾರ್ವಜನಿಕರಿಗೂ ಸಂತಸ ತಂದಿದ್ದು, ಸಿಬ್ಬಂದಿಗಳೇ ನಮ್ಮ ಕಡೆಗೆ ಬಂದು ಮಾಹಿತಿ ನೀಡಿದಾಗ ನಾವು ತೆರಿಗೆ ತುಂಬದೆ ಇರಲು ಹೇಗೆ ಸಾಧ್ಯ ಎಂದಿದ್ದಾರೆ, ಕಂದಾಯ ಸಿಬ್ಬಂದಿ ಜನರ ಹತ್ತಿರ ಬಂದಿರುವುದರಿಂದ ಜನರಿಗಿರುವ ಸಣ್ಣ ಪುಟ್ಟ ಸಮಸ್ಯೆಗಳು ದೂರವಾಗಿ, ತೆರಿಗೆ ಭರಣ ಮಾಡಲು ಮತ್ತಷ್ಟು ಸುಲಭವಾಗುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕರು ನೀಡಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..