ರಾಜ್ಯಕ್ಕೆ ಮಾದರಿಯಾದ ಪೂರ್ವ ಸಿದ್ಧತಾ ಪರೀಕ್ಷೆಗಳು..

ರಾಜ್ಯಕ್ಕೆ ಮಾದರಿಯಾದ ಪೂರ್ವ ಸಿದ್ಧತಾ ಪರೀಕ್ಷೆಗಳು..

ಬೆಳಗಾವಿ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜಿಲ್ಲೆಯ ಎಲ್ಲ ಸರಕಾರಿ ಕಾಲೇಜುಗಳಲ್ಲಿ ಶುಕ್ರವಾರ ಚಿಕ್ಕೋಡಿ ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಗಳ ಸರಕಾರಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಸಿಇಟಿ, ಜೆಇಇ, ಎನ್ಇಇಟಿ ಸಂಬಂಧಿಸಿದಂತೆ ಉಚಿತ ಪೂರ್ವ ಸಿದ್ಧತೆಗಾಗಿ ಪರೀಕ್ಷೆಗಳನ್ನು ನಡೆಸುವ ಮೂಲಕ ಮಾದರಿ‌ಯಾಗಿದೆ.

ಜಿಪಂ ಸಿಇಒ ರಾಹುಲ್ ಶಿಂಧೆ ಅವರು, ಇದು ಪದವಿ ಪೂರ್ವ ಕಾಲೇಜು ಹಾಗೂ ಅಪೆಕ್ಸ್ ವೆಲ್ಫೇರ್ ಶಿಕ್ಷಣ ಸಂಸ್ಥೆಯಿಂದ ಸಾಧ್ಯವಾಗಿದೆ. ಒಟ್ಟು ಮೂರು ಹಂತಗಳಲ್ಲಿ ಪೂರ್ವ ಸಿದ್ಧತೆ ಪರೀಕ್ಷೆಗಳನ್ನು ಜಿಲ್ಲೆಯಾದ್ಯಂತ ತೆಗೆದುಕೊಳ್ಳಲಾಗಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಪರೀಕ್ಷೆಗಾಗಿ ಭಾಗವಹಿಸಿದ ಸಾವಿರಾರು ವಿದ್ಯಾರ್ಥಿಗಳಿಗೆ ಅಪೆಕ್ಸ್ ವೆಲ್ಫೇರ್ ಶಿಕ್ಷಣ ಸಂಸ್ಥೆ ಮುಂದೆ ಬಂದು ಉಚಿತವಾಗಿ ಪ್ರಶ್ನೆ ಪತ್ರಿಕೆ ಹಾಗೂ ಒ.ಎಂ.ಆರ್. ಶೀಟ್ ನೀಡಿರುವುದು ಅನುಕೂಲವಾಗಿವೆ. ಸರಕಾರಿ ಪದವಿ ಪೂರ್ವ ವಿದ್ಯಾರ್ಥಿಗಳು ನೀಟ್ ಮತ್ತು ಸಿಇಟಿ ಹಾಗೂ ಜೆಇಇ ಅಂತಹ ಪರಿಕ್ಷೆಗಳಲ್ಲಿ ಪೂರ್ವ ತಯಾರಿ ಹಾಗೂ ಹಿಂಜರಿಕೆಯಿಂದ ಫಲಿತಾಂಶ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಅದ್ದರಿಂದ ಪರೀಕ್ಷೆಗಳಲ್ಲಿ ಕಂಡು ಬರುವ ಪ್ರಶ್ನೆಗಳ ಶೈಲಿ ಮತ್ತು ಕಠಿಣತೆ ಅರಿಯುವಂತೆ ಮಾಡುವುದು. ಸಮಯ ಪ್ರಜ್ಞೆ ಮೈಗೂಡಿಸಿ ಯಾವ ಪ್ರಶ್ನೆ ಎಷ್ಟು ಸಮಯ ನೀಡಬೇಕು. ಪ್ರಶ್ನೆ ಪತ್ರಿಕೆಯ ಮಾದರಿ ಯಾವ ರೀತಿಯಾಗಿ ಇರುತ್ತದೆ. ಯಾವ ವಿಷಯದ ಕುರಿತು ಹೆಚ್ಚಿನ ಪ್ರಶ್ನೆಗಳು ಬರುತ್ತವೆ. ಪ್ರಶ್ನೆಗಳಿಗೆ ಎಷ್ಟು ಉತ್ತರ ನೀಡಬೇಕು ಎಂಬ ಮಾಹಿತಿಯನ್ನು ಪೂರ್ವ ತಯಾರಿಕೆಯಲ್ಲಿ ಮಕ್ಕಳಿಗೆ ತಿಳಿಸುವುದರ ಮೂಲಕ ಮುಂಬರುವ ಸಿಇಟಿ, ಜೆಇಇ, ನೀಟ್ ಸಿದ್ಧತೆ ಮಾಡಿಕೊಳ್ಳಲು ಮಕ್ಕಳಿಗೆ ತುಂಬಾ ಅನುಕೂಲವಾಗಿದೆ. ಪೂರ್ವ ಪರಿಕ್ಷೆಯಲ್ಲಿ ಕಂಡು ಬಂದ ನ್ಯೂನ್ಯತೆಗಳು ಹಾಗೂ ಸರಿಪಡಿಸಿಕೊಂಡು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಇದರಿಂದ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಹಾಗೂ ಭೌದ್ಧಿಕವಾಗಿ ತಯಾರಾಗಲೂ ಬಹಳಷ್ಟು ಸಹಾಯಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಡಿಡಿಪಿಯುಗಳಾದ ಎಂ.ಎಂ.ಕಾಂಬಳೆ, ಪಿ.ಐ. ಭಂಡಾರಿ, ಅಪೆಕ್ಸ್ ವೆಲ್ಫೇರ್ ಮತ್ತು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ ತೊರವಿ ಅವರು ಪರೀಕ್ಷೆಗಳ ಜವಾಬ್ದಾರಿ ವಹಿಸಿ ಯಶಸ್ಸಿಗೊಳಿಸಿದ್ದಾರೆ.

ವರದಿ ಪ್ರಕಾಶ್ ಕುರಗುಂದ..