ರಾಜ್ಯದ ನೆಲ ಜಲದ ಪರವಾಗಿ ಸೇವೆಗೈದ ಶಿವರಾಜ್ ಪಾಟೀಲರಿಗೆ ಗೌರವೀಯ ಸನ್ಮಾನ..
ಬೆಂಗಳೂರು : ರಾಜ್ಯ ಗಡಿ ಹಾಗೂ ಜಲ ಸಂರಕ್ಷಣಾ ಆಯೋಗದ
ಅಧ್ಯಕ್ಷರಾಗಿ ಮೂರು ವರ್ಷಗಳಿಂದ ಸೇವೆ ಸಲ್ಲಿಸಿರುವ ಸರ್ವೋನ್ನತ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ
ಶಿವರಾಜ ಪಾಟೀಲ ಅವರನ್ನು ಮಂಗಳವಾರ ದಿನಾಂಕ 30/12/2025ರ
ಮುಂಜಾನೆ ಬೆಂಗಳೂರಿನ ಅವರ ಸದಾಶಿವ ನಗರದ
ನಿವಾಸದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.
ಈ ವೇಳೆ ಬೆಳಗಾವಿ ಜಿಲ್ಲಾ ಕನ್ನಡಪರ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಅಶೋಕ ಚಂದರಗಿ, ಹಿರಿಯರು ಹಾಗೂ ಉಪಾಧ್ಯಕ್ಷರಾದ ಮೈನೋದ್ದಿನ ಮಕಾನದಾರ ಹಾಗೂ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧಕ್ಷ ಬಲರಾಮ ಮಾಸೇನಟ್ಟಿ
ಉಪಸ್ಥಿತರಿದ್ದರು.