ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಿಗೆ MRHS ಕಡೆಯಿಂದ ಅಭಿನಂದನೆ..
ಬೆಳಗಾವಿ : ಬುಧವಾರ ದಿನಾಂಕ 08/11/2023 ರಂದು, ನಗರದ ಪ್ರವಾಸಿ ಮಂದಿರದಲ್ಲಿ, ಬೆಳಗಾವಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಗಣ್ಯರನ್ನು ಸನ್ಮಾನ ಮಾಡಲಾಗಿದ್ದು, ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಬಸವರಾಜ್ ಅರವಳ್ಳಿ ಅವರು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿ, ಮಾನ್ಯರನ್ನು ಸತ್ಕರಿಸಿದರು..

ಹಿಂದುಳಿದ, ಶೋಷಿತ ಸಮುದಾಯಗಳ ಏಳಿಗೆಗಾಗಿ, ಅವರ ಹಕ್ಕು ಹಾಗೂ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲೆ ಹಾಗೂ ರಾಜ್ಯಾದ್ಯಂತ ಹೋರಾಟ ಮಾಡುತ್ತಾ, ಸಮಾಜ ಸೇವೆ ಮಾಡುವ ಮೂಲಕ, ದೀನ ದಲಿತರ ಸಂಕಷ್ಟ ಕಡಿಮೆ ಮಾಡಿದ ಸಮುದಾಯದ ಕೆಲ ಮುಖಂಡರಿಗೆ, ನವೆಂಬರ್ ಒಂದರಂದು, ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತಿದೆ..
ಸಮುದಾಯದ ಈ ಸಾಧಕರ ಸಾಧನೆಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಬೆಳಗಾವಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯು ಒಂದು ಆತ್ಮೀಯ ಅಭಿಮಾನದ ಸರ್ಕಾರವನ್ನು ಹಮ್ಮಿಕೊಂಡು, ಅಚ್ಚುಕಟ್ಟಾಗಿ ನಡೆಸಿಕೊಟ್ಟಿದೆ..

ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಬಸವರಾಜ್ ಅರವಳ್ಳಿ ಅವರು ಎಂದಿನಂತೆ, ಸಮಾಜದಲ್ಲಿ ಯಾರೇ ಉತ್ತಮ ಕಾರ್ಯ ಮಾಡಿದರೂ ಅವರನ್ನು ಕರೆದು ಸತ್ಕರಿಸುವ ಸಂಪ್ರದಾಯ ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದು, ಸಮುದಾಯದ ಆತ್ಮೀಯತೆಗೆ, ಸಂಘಟನೆಗೆ ನಾಂದಿಯಾಗಿದೆ..
ಈ ಸಂಧರ್ಭದಲ್ಲಿ ಬೆಳಗಾವಿ ವಿಭಾಗದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಲ್ಲೇಶ ಚೌಗಲೆ, ರಾಷ್ಟ್ರೀಯ ನಾಯಕರು ದಲಿತ ಸಂಘರ್ಷ ಸಮಿತಿಯ ಯಲ್ಲಪ್ಪ ಹುದಲಿ M R H S ಮುಖಂಡರು, ಸಮುದಾಯ ಮತ್ತು ಕನ್ನಡ ಪರ ಹೋರಾಟಗಾರರಾದ ಬಾವಕನ್ನ ಬಂಗ್ಯಾಗೋಳ, ಈರಪ್ಪ ಜಡಗಿ, ಸುರೇಶ್ ಗವನ್ನವರ ಈ ಎಲ್ಲ ಕನ್ನಡಿಗರಿಗೆ ಬೆಳಗಾವಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಸಂಸ್ಥಾಪಕ)MRHS ವತಿಯಿಂದ, “ಅಭಿನಂದನಾ” ಸಮಾರಂಭವನ್ನು ನೆರವೇರಿಸಿದ್ದು ಅರ್ಥಪೂರ್ಣವಾಗಿತ್ತು.

ಈ ವೇಳೆ ಎಲ್ಲಾ MRHS ಪದಾಧಿಕಾರಿಗಳು, ಸರ್ವ ಸದಸ್ಯರು ಮುಖಂಡರು, ಭಾಗಿಯಿದ್ದು, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ, ಗೌರವಿಸಿದ್ದು ವಿಶೇಷವಾಗಿತ್ತು..
ವರದಿ ಪ್ರಕಾಶ ಕುರಗುಂದ…