ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಮೋದ ಮುತಾಲಿಕ್..

ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಮೋದ ಮುತಾಲಿಕ್..

ಬೆಳಗಾವಿ : ಮಂಗಳವಾರ ನಗರದ ಖಾಸಗಿ ಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮಸೇನೆ ಮುಖ್ಯಸ್ಥರಾದ ಪ್ರಮೋದ ಮುತಾಲಿಕ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ
ಮುಜರಾಯಿ ಇಲಾಖೆ ವ್ಯಾಪ್ತಿ ಬರುವ ದೇವಸ್ಥಾನಗಳಲ್ಲಿ ಮೊಬೈಲ್ ಬ್ಯಾನ್ ಮಾಡಿದ್ದು ಸ್ವಾಗತ ಮಾಡ್ತೇನಿ ಎಂದಿದ್ದಾರೆ..

ಇಂದು ಯೋಗ್ಯವಾದ ನಿರ್ಣಯವನ್ನ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿದೆ ಎಂದು ಶ್ಲಾಘನೆಮಾಡಿದ್ದಾರೆ,
ರಾಜ್ಯದಲ್ಲಿ‌ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 36ಸಾವಿರ ದೇವಸ್ತಾನಗಳು ಇದ್ದು, ಅನೇಕ
ಖಾಸಗಿ ದೇವಸ್ಥಾನಗಳೂ ಕೂಡಾ ಇವೆ,
ಅವರಿಗೂ ನಾನು ಅಂತಹ ಖಾಸಗಿ ದೇವಸ್ಥಾನಗಳಲ್ಲಿ ಕೂಡಾ ಮೊಬೈಲ್ ಬ್ಯಾನ್ ಮಾಡಬೇಕು ಎಂದು ಮನವಿ ಮಾಡುವೆ ಎಂದಿದ್ದಾರೆ..

ಈ ಬಗ್ಗೆ ನಮ್ಮ ಕಾರ್ಯಕರ್ತರಲ್ಲಿಯೂ ಮನವಿ‌ ಮಾಡ್ತೇವಿ, ಎಲ್ಲಾ ದೇವಸ್ಥಾನಗಳು ಮೊಬೈಲ್ ನಿಂದಾ ಮುಕ್ತವಾಗಿರಬೇಕು ಎಂದು,
ಕಾಂಗ್ರೆಸ್ ಸರ್ಕಾರದ ಈ ನಿರ್ಧಾರಕ್ಕೆ ನಮ್ಮೆಲ್ಲರ ಸಂಪೂರ್ಣ ಸ್ವಾಗತಾ ಇದೆ ಎಂದ ಮುತಾಲಿಕ್..

ಇನ್ನೂ ಹಿರೇಕೋಡಿ ಜೈನಮುನಿ ಹತ್ಯೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮುತಾಲಿಕ್ ಅವರು,
ಇದು ತಾಲಿಬಾನ್ ಮಾದರಿಯಲ್ಲಿ ನಡೆದ ಹತ್ಯೆಯಾಗಿದೆ, ಜೈನಮುನಿ ದೇಹವನ್ನ ತುಂಡು ತುಂಡು ಮಾಡಿದ್ದಾರೆ, ಇದು ಖಂಡನೀಯ,
ಇದು ತಾಲಿಬಾನಿನ ಮನಸ್ಥಿತಿ ಇರೋರು ಮಾಡಿರುವಂತಹ ಕೃತ್ಯ,

ತಕ್ಷಣವೇ ಆರೋಪಿಗಳನ್ನ ಬಂಧಿಸಿದ ಪೊಲೀಸರಿಗೆ ಧನ್ಯವಾದ ತಿಳಿಸಿದ ಮುತಾಲಿಕ್ ಅವರು ಬಟ್ಟೆಯನ್ನೂ ಹಾಕಿಕೊಳ್ಳದೇ ಜೀವನ ನಡೆಸೋ ದಿಗಂಬರ ಹತ್ಯೆ ಅಕ್ಷಮ್ಯ ಅಪರಾಧ, ಅಂತಾ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದರು..

ಆದರೆ ಜಿಲ್ಲೆಯ ಪೊಲೀಸ್ ಇಲಾಖೆಯವರೇ‌ ಇದನ್ನು ತನಿಖೆ ಮಾಡ್ತಿದ್ದಾರೆ, ಇದು ಸರಿಯಲ್ಲ, ಅದರ ಬದಲಿಗೆ
ನಿವೃತ್ತ ನ್ಯಾಯವಾದಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂಬ ಸಲಹೆ ನೀಡಿದರು..

ಸಿಬಿಐ ತನಿಖೆಗೆ ಕೊಡುವ ಅಗತ್ಯವಿಲ್ಲ, ಆದ್ರೆ ಡಿವೈಎಸ್ಪೀ ನೇತೃತ್ವದಲ್ಲಿ ತನಿಖೆ ಮಾಡುತ್ತಿರೋದು ಸರಿ ಇಲ್ಲ ಎಂದರು, ಜೈನಮುನಿ ಹತ್ಯೆ ಪ್ರಕರಣದಲ್ಲಿ ಕೆಲವೊಂದು ಸಂಘಟನೆಗಳು ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದರು..

ಇದರ ಹಿಂದೆ ಯಾರ್ಯಾರು ಇದ್ದಾರೆ ಅನೋದನ್ನ ಹೊರತೆಗೆದು ತನಿಖೆ ಮಾಡಬೇಕು ಎಂಬ ಮನವಿ ಮಾಡಿದರು.

ಇಬ್ಬರು ತಪ್ಪಿಸ್ಥರಿಗೆ ಪರವಾಗಿ ಯಾರು ವಕಾಲತ್ತು ಹಾಕಬಾರದು ಎಂದು ಮುತಾಲಿಕ್ ಮನವಿ

ಕ್ರೌರ್ಯ ಮೆರೆದ ಆರೋಪಿಗಳ ವಿರುದ್ಧ ವಕಾಲತ್ತು ವಹಿಸಿದಂತೆ ವಕೀಲರ ಸಂಘಕ್ಕೆ ಮುತಾಲಿಕ್ ಮನವಿ ಮಾಡಿದ್ದಾರೆ,
ಆರೋಪಿಗಳ ಪರವಾಗಿ ವಕಾಲತ್ತು ವಹಿಸಿದ್ರೆ ಅಂತವರ ವಿರುದ್ಧ ಹೋರಾಟ ಮಾಡ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಸಮಾನ ನಾಗರಿಕ ಸಂಹಿತೆ ಜಾರಿ ವಿಚಾರಕ್ಕೆ ಸ್ಪಂದಿಸಿದ ಅವರು 50ಲಕ್ಷಕ್ಕೂ ಹೆಚ್ಚು ಜನರು ಸಮಾನ ನಾಗರಿಕ ಸಂಹಿತೆ ಜಾರಿಗೆ ಬೆಂಬಲ ನೀಡಿದ್ದಾರೆ,
ಕೇಂದ್ರ ಸರ್ಕಾರ ಮೀನಾಮೇಷ ಮಾಡದೇ ಕೂಡಲೇ ಜಾರಿ ಮಾಡಬೇಕು ಎಂದರು,
ಶ್ರೀರಾಮಸೇನೆ ಸಂಘಟನೆ‌ ಇವತ್ತಿನಿಂದ 28ರವರೆಗೆ 5ಲಕ್ಷ ಸಹಿ ಸಂಗ್ರಹ ಆಂದೋಲನದ ಆರಂಭ ಮಾಡುತ್ತಿದ್ದು,
ಇಡೀ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಈ ಕಾರ್ಯ ಆರಂಭ ಆಗುತ್ತೆ ಎಂದಿದ್ದಾರೆ,

ಕಳೆದ ಮೂವತ್ತು ವರ್ಷಗಳಿಂದ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಸರ್ಕಾರಗಳಿಗೆ ಹೇಳುತ್ತಿದೆ,
ಪದೇ ಪದೇ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಹೇಳುತ್ತಿದೆ, ಆದ್ರೆ, ಜಾರಿ ಆಗುತ್ತಿಲ್ಲ,
ನೀವು 9ವರ್ಷ ಕಾಯೋ ಅಗತ್ಯ ಇರಲಿಲ್ಲ ಎಂದ ಕೇಂದ್ರ ಸರ್ಕಾರಕ್ಕೆ ಮಾತಿನಲ್ಲೇ ಮಂಗಳಾರತಿ ಮಾಡಿದ ಮುತಾಲಿಕ್..

ಯಸಿಸಿಗೆ ಈಗಾಗಲೇ ಆಪ್ ಮಾಯಾವತಿ ಪಕ್ಷದ ಬೆಂಬಲಿಸಿದೆ,
ಕಾಂಗ್ರೆಸ್‌ನವರು ಇದನ್ನು ವಿರೋಧಿಸುತ್ತಾ, ತುಷ್ಟೀಕರಣ ಮಾಡುತ್ತೆ ಬಂದಿರುವುದು ತಪ್ಪು ಎಂದಿದ್ದಾರೆ,

ಆರು ತಿಂಗಳಲ್ಲಿ ಕಾನೂನು ಜಾರಿಗೆ ತರಬೇಕು,
ಇಲ್ಲವಾದರೆ ಸರ್ಕಾರದ ವಿರುದ್ಧ ಕೋರ್ಟ್ ನಲ್ಲಿ ದಾವೆ ಹೂಡುವ ಎಚ್ಚರಿಕೆ ನೀಡಿದ್ದಾರೆ..

ವರದಿ ಪ್ರಕಾಶ ಕುರಗುಂದ..