ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಕಣ್ಮರೆಯಾಗಿದೆ..

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಕಣ್ಮರೆಯಾಗಿದೆ.

ಗಲಬೆಕೊರ ಕಿಡಗೆಡಿಗಳನ್ನು ಕಾಯುತ್ತಿರುವ ಕಾಂಗ್ರೆಸ್ ಸರ್ಕಾರ..

187 ಕೋಟಿ, ಪರಿಶಿಷ್ಟ ಪಂಗಡ ನಿಗಮದ ಹಗರಣವನ್ನು ಸಿಬಿಐಗೆ ವಹಿಸಬೇಕು..

ಸುಭಾಸ ಪಾಟೀಲ..

ಬೆಳಗಾವಿ : ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು, ಸಚಿವ ಸಂಪುಟ ವಿಸ್ತರಣೆ ಆಗಿ ಒಂದು ವರ್ಷ ಆಯಿತು, ಈ ಒಂದು ವರ್ಷದಲ್ಲಿ ಭ್ರಷ್ಟಾಚಾರ, ದುರಾಡಳಿತ, ದೌರ್ಜನ್ಯ, ಕೊಲೆಗಳು ನಡೆದಿವೆ, ಅಭಿವೃದ್ಧಿಯಂತು ಕೇಳುವ ಹಾಗಿಲ್ಲ, ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದುರಾಡಳಿತದಿಂದ ವೈಫಲ್ಯ ಹೊಂದಿದೆ ಎಂದು ಬೆಳಗಾವಿ ಬಿಜೆಪಿಯ ಗ್ರಾಮೀಣ ಜಿಲ್ಲಾಧ್ಯಕ್ಷರಾದ ಸುಭಾಸ ಪಾಟೀಲ ಅವರು ಆರೋಪಿಸಿದ್ದಾರೆ..

ನಗರದ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪೊಲೀಸ್ ಠಾಣೆಗಳಿಗೆ ರಕ್ಷಣೆಯಿಲ್ಲ, ಸರ್ಕಾರದ ಆಸ್ತಿ ಹಾನಿ ಮಾಡಲಾಗಿದೆ, ಪೊಲೀಸರ ಮೇಲೆ ಹಲ್ಲೆಯಾಗಿದೆ, ಸರ್ಕಾರಿ ವಾಹನಗಳು ಜಖಂ ಆಗಿವೆ, ಈ ರೀತಿಯ ಗೂಂಡಾ ವರ್ತನೆ ಮಾಡಿದವರ ಮೇಲೆ ಕಾಂಗ್ರೆಸ್ ಸರ್ಕಾರ ಕ್ರಮ ಜರುಗಿಸಿಲ್ಲ..

ಬದಲಿಗೆ ಪೊಲೀಸರ ಮೇಲೆ ಕ್ರಮ ತಗೆದುಕೊಂಡು, ಅವರನ್ನು ಅಮಾನತ್ತು ಮಾಡಿದ ಸರ್ಕಾರದ ನೀತಿ ಖಂಡನೀಯ, ಗಲಬೇಕೊರರ ಪರವಾಗಿ ನಿಂತಿದ್ದು ನಾಚಿಕೆಗೇಡು ಎಂದಿದ್ದಾರೆ.

ಗೃಹಮಂತ್ರಿಗಳ ಅಸಮರ್ಥತೆಯಿಂದ ದಂಗೇಕೊರ ಕಿಡಿಗೇಡಿಗಳು ಬಚಾವ ಆಗಿ, ಪೊಲೀಸರ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ, ಸರ್ಕಾರಿ ಆಸ್ತಿಗಳನ್ನು ಹಾನಿ ಮಾಡಿದ ಕಿಡಿಗೇಡಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು..

ರೈತರ ಆತ್ಮಹತ್ಯೆ ಜೊತೆಗೆ ಅಧಿಕಾರಿಗಳ ಆತ್ಮಹತ್ಯೆ ಆಗುತ್ತಿದ್ದು, ಈ ಸರ್ಕಾರ ಜನತೆಗೆ ಸಾವು ಭಾಗ್ಯ ನೀಡಿದೆ, ಪರಿಶಿಷ್ಠ ವರ್ಗಗಳ ಅಭಿವೃದ್ಧಿ ನಿಗಮದ ಲೆಕ್ಕ ಮೇಲ್ವಿಚಾರಕ ಚಂದ್ರಶೇಕರ ಅವರು ಡೆತ್ ನೋಟ್ ಬರೆದಿಟ್ಟು, ನನ್ನ ಆತ್ಮಹತ್ಯೆಗೆ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಕಾರಣ ಎಂದು ಉಲ್ಲೇಖಿಸಿದ್ದು ಅವರೆಲ್ಲರ ಮೇಲೆ ಕ್ರಮ ಜರುಗಿಸಬೇಕು ಎಂದಿದ್ದಾರೆ..

ಸರ್ಕಾರಿ ಅಧಿಕಾರಿಯ ಆತ್ಮಹತ್ಯೆ ಹಿಂದಿರುವ ಉನ್ನತ ಅಧಿಕಾರಿಗಳು ಹಾಗೂ ಸಚಿವರ ತಲೆದಂಡ ಆಗಬೇಕು, ಹೆಣ್ಣುಮಕ್ಕಳ ಕೊಲೆ ಕೂಡಾ ಸಹಜವಾಗಿಯೇ ನಡೆಯುತ್ತಿದ್ದು ಈ ಸರ್ಕಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿ ಹೋಗಿದ್ದು, ಅಭಿವೃದ್ದಿ ಶೂನ್ಯ ಹಾಗೂ ಪಾಪದಿಂದ ಕೂಡಿದ ಈ ಕಾಂಗ್ರೆಸ್ ಸರ್ಕಾರ ಕೊನೆಯಾಗಬೇಕು ಎಂದರು..

ಸರ್ಕಾರ ನೀಡಿರುವ ಬಿಟ್ಟಿ ಭಾಗ್ಯಗಳು ಕೂಡಾ ತಮ್ಮ ಸತ್ವ ಹಾಗೂ ಆಯಸ್ಸು ಕಳೆದುಕೊಂಡಿವೆ, ಪರಿಶಿಷ್ಠ ಪಂಗಡದ ನಿಗಮದ 187 ಕೋಟಿ ಮೌಲ್ಯದ ಹಗರಣವನ್ನು ತಕ್ಷಣ ಸಿಬಿಐ ತನಿಖೆಗೆ ನೀಡಬೇಕು ಮತ್ತು ಸಚಿವ ಬಿ ನಾಗೇಂದ್ರ ಅವರು ರಾಜೀನಾಮೆ ನೀಡಬೇಕು ಎಂದರು..

ರಾಜ್ಯ ಮಾದ್ಯಮ ಸಂಚಾಲಕರಾದ ಎಫ್ ಎಸ್ ಸಿದ್ದನಗೌಡರ್ ಮಲ್ಲಿಕಾರ್ಜುನ ಮಾದಮ್ಮನವರ, ಎಸ್ಸಿ ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ಯಲ್ಲಪ್ಪ, ಗ್ರಾಮೀಣ ಬಿಜೆಪಿ ಮಾಧ್ಯಮ ಪ್ರಮುಖ ಸಚಿನ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ.