ಜಿಲ್ಲಾ ಹೂಗಾರ ಸಮಾಜದ ವತಿಯಿಂದ ಗೌರವೀಯ ಸನ್ಮಾನ.
ಬೆಳಗಾವಿ : ದಿನಾಂಕ 11/01/2026 ರಂದು ಬೆಳಗಾವಿ ನಗರದ ಲಿಂಗಾಯತ ಭವನದಲ್ಲಿ ಬೆಳಗಾವಿ ಜಿಲ್ಲಾ ಹೂಗಾರ. ಗುರವ .ಜೀರ ಮತ್ತು ಪೂಜಾರ ಸಮಾಜದ ವತಿಯಿಂದ ಸಮಾಜದ ರಾಜ್ಯ ಕಾರ್ಯಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಪ್ರಭು ಮ ಹೂಗಾರ ಇವರನ್ನು ಸತ್ಕರಿಸಿ ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಶಿವಾನಂದ ಹೂಗಾರ ಜಿಲ್ಲಾದ್ಯಕ್ಷರು, ಬಿ ಎಮ್ ಹೂಗಾರ ರಾಜ್ಯ ಸಲಹೆಗಾರರು, ರವಿ ಗುರವ ರಾಜ್ಯ ಸಲಹೆಗಾರರು, ಶಿವಾನಂದ ಹೂಗಾರ ಸವದತ್ತಿ ರಾಜ್ಯ ಸಲಹೆಗಾರರು, ಮೋಹನ ಹೂಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಾರುತಿ ಗುರವ ಜಿಲ್ಲಾ ಕಾರ್ಯದರ್ಶಿ, ಬಸವರಾಜ ಹೂಗಾರ ಜಿಲ್ಲಾ ಖಜಾಂಚಿಗಳು, ಸಮಾಜದ ಜಿಲ್ಲಾ ನಿರ್ದೇಶಕರಗಳು ಮತ್ತು ಸಮಾಜದ ವಿವಿದ ತಾಲೂಕಿನ ಅಧ್ಯಕ್ಷರಗಳು ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.
ಸನ್ಮಾನ ಸ್ವೀಕರಿಸಿದ ಪ್ರಭು ಹೂಗಾರ ಮಾತನಾಡಿ ಸಂಘಟನೆಯನ್ನು ಬಲಪಡಿಸಿ ಸಮಾಜದ ಕೊನೆಯ ವ್ಯಕ್ತಿಗೂ ಸೌಲಭ್ಯ ಸಿಗುವಲ್ಲಿ ಪಾತ್ರವಹಿಸುತ್ತೆನೆ ಎಂದು ಹೇಳಿದರು.