ರಾಜ್ಯ ಕುಂಬಾರ ಯುವ ಸೈನ್ಯದಿಂದ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಗೌರವಿಯ ಸನ್ಮಾನ..
ಸಮುದಾಯದ ಸಮಸ್ಯೆಗಳಿಗೆ ಸಚಿವರ ಸ್ಪಂದನೆ..
ಬೆಂಗಳೂರು : ದಿನಾಂಕ 11/06/24ರಂದು ಬೆಂಗಳೂರಿನಲ್ಲಿ ಕರ್ನಾಟಕ ಕುಂಬಾರರ ಯುವ ಸೈನ್ಯ (ರಿ)ಬೆಂಗಳೂರು
ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ ಶೆಟ್ಟಿ ಕುಂಬಾರರವರ ನೇತೃತ್ವದಲ್ಲಿ, ರಾಜ್ಯ ಸಮಿತಿಯ ಪದಾಧಿಕಾರಿಗಳು ಹಾಗೂ ಬೆಳಗಾವಿ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬೇಟಿ ಮಾಡಲಾಗಿದೆ.

ಸಚಿವ ಸತೀಶ ಜಾರಕಿಹೋಳಿ ಅವರನ್ನು ಬೆಂಗಳೂರಿನ ಅವರ ಸರಕಾರಿ ನಿವಾಸದಲ್ಲಿ ಬೇಟಿ ಮಾಡಿದ ಪದಾಧಿಕಾರಿಗಳು, ಸಚಿವರು ಮೊದಲಿನಿಂದಲೂ ಕುಂಬಾರ ಸಮುದಾಯದ ಪರವಾಗಿ ಕೆಲಸ ಮಾಡಿದ್ದು, ಸಮುದಾಯದ ಸಂಕಷ್ಟಗಳಲ್ಲಿ ಜೊತೆಗೆ ನಿಂತಿರುವ ಅನೇಕ ನಿದರ್ಶನಗಳಿವೆ ಎಂಬ ಮಾಹಿತಿ ನೀಡಿದ್ದಾರೆ..
ಅದೇ ಕಾರಣಕ್ಕೆ ಸಮುದಾಯದ ಪರವಾಗಿ ಸಚಿವರನ್ನು ಸನ್ಮಾನಿಸಿ, ಗೌರವಿಸಲಾಗಿದೆ, ಇದೇ ವೇಳೆ ಸಮುದಾಯದ ಪ್ರಚಲಿತ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಿಲಾಯಿತ್ತು.

ಈ ಸಂದರ್ಭದಲ್ಲಿ ಕರ್ನಾಟಕ ಕುಂಬಾರ ಯುವ ಸೇನೆ ಸಂಸ್ಥಾಪಕ ರಾಧ್ಯಕ್ಷರಾದ ಶಂಕರ್ ಶೆಟ್ಟಿ ಕುಂಬಾರ್ ಬೆಳಗಾವಿ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಕುಂಬಾರ್ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ರಾಧಾ ಕುಂಬಾರ್ ರಾಘವೇಂದ್ರ ಕುಂಬಾರ್ ಮದನ್ ಪ್ರಜಾಪತಿ ಮುತ್ತುರಾಯಪ್ಪ ಮೂರ್ತಿ ಶೋಭಾ ಮೇಡಂ ಮತ್ತು ಕರ್ನಾಟಕ ಮಾನವ ಬಂದುತ್ವ ವೇದಿಕೆ ರಾಜ್ಯ ಸಂಚಾಲಕರಾದ ಬರ್ಮಣ್ಣ ತೊಳಿ ಹಾಗೂ ಕುಂಬಾರ್ ಸಮಾಜದ ರಾಜ್ಯ ಮುಖಂಡರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..