ರಾಮತೀರ್ಥ ನಗರ ವ್ಯಾಪ್ತಿಯಲ್ಲಿ
ಬಸ್ ನಿಲ್ದಾಣ ತಂಗುದಾನಕ್ಕೆ ಶಂಕುಸ್ಥಾಪನೆ..
ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅನುದಾನದಲ್ಲಿ ಚಾಲನೆ..
ಬೆಳಗಾವಿ : ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ವಿಶೇಷ ಅನುದಾನದಲ್ಲಿ ರಾಮತೀರ್ಥ ನಗರದಲ್ಲಿ ಹೊಸ ಬಸ ತಂಗುದಾನ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಕಾರ್ಯ ನಡೆದಿದ್ದು, ಬಿಜೆಪಿಯ ಸಂಸದರು ಈರಣ್ಣ ಕಡಾಡಿ ಹಾಗೂ ನಗರ ಸೇವಕರಾದ ಹನುಮಂತ ಕೊಂಗಾಲಿ ಅವರ ಕಾರ್ಯಕ್ಕೆ ಸ್ಥಳೀಯರು ಧನ್ಯವಾದ ತಿಳಿಸಿದ್ದಾರೆ.
ಜನರ ಬಹುದಿನದ ಬೇಡಿಕೆ ಹಾಗೂ ಕೋರಿಕೆಯ ಮೇರೆಗೆ ರಾಮತೀರ್ಥ ನಗರದ ನಗರ ಸೇವಕರಾದ ಹಣಮಂತ ಕೊಂಗಾಲಿ ಹಾಗೂ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಬಸವೇಶ್ವರ ಬಡಾವಣೆ ಹಿರಿಯರು ಸೇರಿ ಇಂದು ಈ ಶಂಕುಸ್ಥಾಪನಾ ಕಾರ್ಯದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ರಾಮತೀರ್ಥ ನಗರದಲ್ಲಿ, ದಿನಾಂಕ 10/8/2025 ರಂದು ಮುಂಜಾನೆ ಸಮಯ: 10 ಗಂಟೆಗೆ ಕಾರ್ಯಸಿದ್ಧಿ ಶೀ ಆಂಜನೇಯ ದೇವಸ್ಥಾನ ಹಾಗೂ ಸಮಯ: 11:00 ಗಂಟೆಗೆ ಶೀ ಬಸವೇಶ್ವರ್ ಬಡಾವಣೆ ಕ್ರಾಸ್ (ksrtc buss rood) ರಾಮತೀರ್ಥ ನಗರ ಬೆಳಗಾವಿಯಲ್ಲಿ ಈ ವಿಶೇಷ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ವೇಳೆ ರಾಮತೀರ್ಥ ನಗರದ ಬಹುಪಾಲು ರಾಹವಾಸಿಗಳು ಭಾಗವಹಿಸಿದ್ದರು..