ರಾಮಮಂದಿರ ಹಾಗೂ ಕರ್ನಾಟಕದ ಭಾಂದವ್ಯ ಅತೀ ಮಹತ್ವದ್ದಾಗಿದೆ..

ನಮ್ಮ ರಾಮ ನಮ್ಮ ಹೆಮ್ಮೆ,
ರಾಮಮಂದಿರ ಹಾಗೂ ಕರ್ನಾಟಕದ ಭಾಂದವ್ಯ ಅತೀ ಮಹತ್ವದ್ದಾಗಿದೆ..

ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಅನಿಲ್ ಬೇನಕೆ ಹೇಳಿಕೆ..

ಬೆಳಗಾವಿ : ರವಿವಾರ ದಿನಾಂಕ 21/01/2024ರಂದು ಸದಾಶಿವ ನಗರದಲ್ಲಿ ಇರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಅನಿಲ್ ಬೇನಕೆ ಅವರು, ಆಯೋಧ್ಯೇಯ ರಾಮ ಮಂದಿರ ಹಾಗೂ ಕರ್ನಾಟಕ ರಾಜ್ಯದ ನಂಟು, ಭಾಂದವ್ಯದ ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ..

1992ರಲ್ಲಿ ಅತಿ ಹೆಚ್ಚು ಕರ ಸೇವಕರು ಕರ್ನಾಟಕದ ಮೂಲೆ ಮೂಲೆಗಳಿಂದ ಹೊಗಿದ್ದರು ಅದರಲ್ಲಿ ಬೆಳಗಾವಿ ಜಿಲ್ಲೆಯಿಂದ ಪಾಲ್ಗೊಂಡಿರುವದು ಹೆಮ್ಮೆ,
ರಾಮಮಂದಿರ ನಿರ್ಮಾಣದ ಕಾರ್ಯದ ಪ್ರಮುಖ ಸ್ಥಾನದಲ್ಲಿ ನಮ್ಮ ರಾಜ್ಯದವರೆ. ಅದರಲ್ಲಿ ಬೆಳಗಾವಿಯ ಗೋಪಾಲಜಿ ಅನ್ನುವದು ನಮ್ಮ ಜಿಲ್ಲೆಯ ಗೌರವ.

ಬಾಲ ರಾಮನ ಮೂರ್ತಿಗೆ ಉಪಯೋಗಿಸಿರುವ ಶಿಲೆ ಕರ್ನಾಟಕದ ಹೆಗ್ಗಣ ದೇವನ ಕೋಟೆದ್ದು ಎನ್ನುವದು ಕನ್ನಡಿಗರದ್ದು.

ಬಾಲ ರಾಮನ ಮೂರ್ತಿ ತಯಾರಿಸಿದ ಶಿಲ್ಪಿ ನಮ್ಮ ರಾಜ್ಯದ ಮೈಸೂರಿನ ಅರುಣ ಯೋಗರಾಜ್ ಎಮ್ನವದು ಕರ್ನಾಟಕದ ಹೆಮ್ಮೆಯ ಜೋತೆಗೆ ಮಂದಿರ ನಿರ್ಮಾಣದಲ್ಲಿ ಕರ್ನಾಟಕದ 6ಜನ ಶಿಲ್ಪಿಗಳು ಕಾರ್ಯ ಮಾಡುತ್ತಿರುವದು ರಾಜ್ಯದ ಹೆಮ್ಮೆಯ ವಿಷಯ..

ರಾಮ ಮಂದಿರ ಟ್ರಸ್ಟ್ ನಲ್ಲಿ ನಮ್ಮ ರಾಜ್ಯದ ಉಡಪಿ ಪೇಜಾವರ ಶ್ರೀಗಳು ಇರುವದು ನಮ್ಮೆಲ್ಲರ ಭಾಗ್ಯವಾಗಿದ್ದು,
ರಾಜ್ಯದ ಶ್ರೀಗಂಧದ ಕಟ್ಟಿಗೆ ಮತ್ತು ಗಂಧದ ಎಣ್ಣೆ ಉಪಯೋಗಿಸುತ್ತಿರುವದು ನಾಡಿನ ಕಂಪ ರಾಮಮಂದಿರದಲ್ಲಿದೆ.

ರಾಮಮಂದಿರ ಸಿಡಿಲು ಮತ್ತು ಭೂಕಂಪದಿಂದ ಸಾವಿರಾರು ವರ್ಷ ರಕ್ಷಣೆ ಪಡೆಯಲಿದ್ದು ಈ ತಂತ್ರಜ್ಞಾನ ಕರ್ನಾಟಕದ ಜೆಈಎಫ್ ಕಂಪನಿ ಒದಗಿಸಿದ್ದು ರಾಜ್ಯದ ತಂತ್ರಜ್ಞಾನದ ವಿಜ್ಞಾನ ಬಳಕೆಯಾಗಿದೆ.
ಕರ್ನಾಟಕದ ಸಾದರಹಳ್ಳಿಯಿಂದ 800ಟನ್ ಶಿಲೆ ರಾಮ ಮಂದಿರ ನಿರ್ಮಾಣಕ್ಕೆ ಬಳಕೆಯಾಗಿದೆ.

ಇನ್ನೋರ್ವ ಶಿಲ್ಪಿ ಉತ್ತರಕನ್ನಡದ ಕೆಕ್ಕೆರಿಯ ವಿನಾಯಕಗೌಡ ಅವರಿಂದ ವಿನಾಯಕ ಮೂರ್ತಿ ಅರಳಿದೆ. ಇಡಗುಂಜಿಯ ಗಣೇಶ ಬಟ್ ಅವರಿಂದ ಬಲರಾಮ ಮೂರ್ತಿ ಕೆತ್ತನೆ ಮಾಡುವದರೊಂದಿಗೆ ರಾಜ್ಯದ ಶಿಲ್ಪಕಲೆ ರಾಮಮಂದಿರದಲ್ಲಿ ಹಾಸುಹೊಕ್ಕಾಗುದೆ.

ರಾಜ್ಯದ ರಾಜೇಶ ಶೆಟ್ಟಿ ಮಂದಿರದ ವಿದ್ಯುತ್ ವ್ಯವಸ್ಥೆಯ ಸಂಪೂರ್ಣವಾಗಿ ಜವಾಬ್ದಾರಿ ಹೊತ್ತವರು.

ಕೊಪ್ಪಳದ ರಾಮಮೂರ್ತಿ ಸ್ವಾಮಿಗಳು ರಾಮಮಂದಿರದ ದ್ವಾರಭಾಗಿಲು ಕೆತ್ತನೆ ಮಾಡುವದರೊಂದಿಗೆ ರಾಮಂದಿರ ನಿರ್ಮಾಣಕ್ಕೆ ಕರ್ನಾಟಕದ ಅನನ್ಯ ಸೇವೆ ಸಲ್ಲಿಸಿದೆ.

ಅಯೊಧ್ಯಯ ರೈಲ್ವೆ ನಿಲ್ದಾಣಕ್ಕೆ ವಿದ್ಯುತ್ ಡಿಜೈನಿಂಗ್ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಮೂಡಬಿದರೆಯ ರೋನಾಲ್ಡ್ ಸಿಲ್ಟ್ ನ್ ಡಿಸೋಜಾ ನೆಕ್ಸಾ ಲೈಟಿಂಗ ಕಂಪನಿ.

ಇವೆಲ್ಲ ಕರ್ನಾಟಕ ಮತ್ತು ಅಯೊದ್ಯಯ ನಡುವಿನ ಬಾಂಧವ್ಯವನ್ನ ಬಿಂಬಿಸಲಿವೆ ಎಂಬ ಮಾಹಿತಿ ನೀಡಿದ್ದಾರೆ..

ರಾಜ್ಯಾ ಉಪಾಧ್ಯಕ್ಷ ಅನೀಲ ಬೆನಕೆ, ಸಂಸದರಾದ ಮಂಗಲ‌ ಅಂಗಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ ಮಹಾನಗರ ಅಧ್ಯಕ್ಷ ಗೀತಾ ಸುತಾರ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ ದೇಶಪಾಂಡೆ, ಮುರಘೇಂದ್ರ ಪಾಟೀಲ, ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಶರದ ಪಾಟೀಲ, ಉಜ್ವಲಾ ಬಡವನಾಚೆ, ಸಂತೋಷ ದೇಶನೂರ ಇನ್ನು ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು…

ವರದಿ ಪ್ರಕಾಶ ಕುರಗುಂದ..