ರಾಮ್ ತೀರ್ಥನಗರ ವಾರ್ಡ್ ಸಂಖ್ಯೆ 46 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನ..
ನಗರ ಸೇವಕ ಹನುಮಂತ ಕೊಂಗಾಲಿ ಅವರೊಂದಿಗೆ ಸ್ಥಳೀಯ ಪ್ರಮುಖರು ಭಾಗಿ..
ಬೆಳಗಾವಿ : ರಾಮತೀರ್ಥ ನಗರದ ವಿವಿಧ ಬಡಾವಣೆಗಳಲ್ಲಿ ಗಾರ್ಡನ್ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ನಡೆದಿದ್ದು, ಕುಲಕರ್ಣಿ ಲೇಔಟ್ ಗಾರ್ಡನ್ (18,ಲಕ್ಷ )ಕಾಮಗಾರಿ ಉದ್ಘಾಟನೆ ಹಾಗೂ ರೇವನೂ ಕಾಲನಿ (20 ಲಕ್ಷ) ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಮಹಾನಗರ ಪಾಲಿಕೆಯ ನಗರ ಸೇವಕರಾದ ಹಣಮಂತ ಕೊಂಗಾಲಿ ಅವರ ನೇತೃತ್ವದಲ್ಲಿ 38 ಲಕ್ಷ ಅನುದಾನದಲ್ಲಿ ಗಾರ್ಡನ್ ಅಭಿವೃದ್ಧಿ ಕಾಮಗಾರಿಯ ಪೂಜೆಯನ್ನು ನೆರವೇರಿಸಲಾಯಿತು.

ನಗರ ಸೇವಕ ಹಣಮಂತ ಕೊಂಗಾಲಿ ಅವರೊಂದಿಗೆ ಕುಲಕರ್ಣಿ ಲೇಔಟ್ ಹಿರಿಯರಾದ ಗಾಣಿಗಿ, ಜವಳಿ, ಈರಣ್ಣ ದಯನ್ನವರ್, ನಾಗನಗೌಡ್ ಪಾಟೀಲ್, ಬಿ, ಎಸ್ ವಾಗವಡೆ, GG ತಳವಾರ್ ನಿವೃತ್ತ ತಹಸಿಲ್ದಾರ್, ಪ್ರವೀಣ್ ನಿಲ್ಲನ್ನವರ್, ರಾಜು ಹಿರೇಮಠ್, ತವರಕೇರಿ, ಮಲ್ಲಿಕಾರ್ಜುನ್ ರಾಗಿ, ಮಹಿಳಾ ಪ್ರಮುಖರಾದ ಹುಲ್ಯಾಲ, ಕುಲಕರ್ಣಿ, ಕಬ್ಬೂರ ಮತ್ತು ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ನೂತನ ಕಾಮಗಾರಿಗೆ ಚಾಲನೆ ನೀಡಲಾಯಿತು.
ವರದಿ ಪ್ರಕಾಶ್ ಬಸಪ್ಪ ಕುರಗುಂದ.