ರಾಮ ಕಂಪ್ಯೂಟರ್ಸನ ಮಾಲೀಕರದ ಅಣ್ಣಾಸಾಹೇಬ ಬಂಗಾರೆ ಅವರಿಗೆ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ..

ರಾಮ ಕಂಪ್ಯೂಟರ್ಸನ ಮಾಲೀಕರದ ಅಣ್ಣಾಸಾಹೇಬ ಬಂಗಾರೆ ಅವರಿಗೆ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ..

ಬೆಳಗಾವಿ : ನಗರದ ಶ್ರೀಮತಿ ರತ್ನಾಬಾಯಿ ಹಾಗೂ ಶ್ರೀ ಕಲ್ಲಪ್ಪ ಉದಗಟ್ಟಿ ಪ್ರತಿಷ್ಠಾನದ ವತಿಯಿಂದ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ನಿಮಿತ್ತವಾಗಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರತಿವರ್ಷ ನೀಡುವ, ಸೇವಾರತ್ನ ಪ್ರಶಸ್ತಿಯನ್ನು ನಗರದ ಉದ್ಯಮಿ ಹಾಗೂ ರಾಮ ಕಂಪ್ಯೂಟರ್ಸನ ಮಾಲೀಕರಾದ ಅಣ್ಣಾಸಾಹೇಬ ಬಂಗಾರೆ ಅವರಿಗೆ ನೀಡಲಾಗಿದೆ.

ರವಿವಾರ ದಿನಾಂಕ 25/01/2026ರಂದು ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜರುಗಿದ, ವಿಶ್ವದ ದೊಡ್ಡಣ್ಣ ಹಾಗೂ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಉದ್ಯಮಿ ವಿಜಯ ಸಂಕೇಶ್ವರ ಇವರಿಬ್ಬರು 75 ನೇ ವರ್ಷದ ಹುಟ್ಟುಹಬ್ಬದ ನಿಮಿತ್ತವಾಗಿ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬೆಳಗಾವಿ ನಗರದ ಸಮಾಜ ಸೇವಕರು, ಶಿಕ್ಷಣ ಪ್ರೇಮಿಗಳು, ಉದ್ಯಮಿಗಳು, ದಾನಿಗಳು, ಸಾವಿರಾರು ಜನರಿಗೆ ಉದ್ಯೋಗವಕಾಶ ಕಲ್ಪಿಸಿಕೊಟ್ಟ ಹಾಗೂ ರಾಮ ಕಂಪ್ಯೂಟರ್ಸನ ಮಾಲೀಕರಾದ ಅಣ್ಣಾಸಾಹೇಬ ಬಂಗಾರೆ ಅವರು ಮಾಡಿದ ಸಾಮಾಜಿಕ ಸಾಧನೆಯನ್ನು ಪರಿಗಣಿಸಿ ಅವರಿಗೆ “ಸಾಮಾಜಿಕ ಸೇವಾ ರತ್ನ” ಪ್ರಶಸ್ತಿಯನ್ನು ಆದಿತ್ಯ ಮಿಲ್ಕ ಬೆಳಗಾವಿ ಮತ್ತು ಶ್ರೀಮತಿ ರತ್ನಾಬಾಯಿ ಹಾಗೂ ಶ್ರೀ ಕಲ್ಲಪ್ಪ ಉದಗಟ್ಟಿ ಸಾಮಾಜಿಕ ಪ್ರತಿಷ್ಠಾನ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ವರದಿ ಪ್ರಕಾಶ ಬಿ ಕೆ..

Leave a Reply

Your email address will not be published. Required fields are marked *