ರಾಷ್ಟ್ರ ಮಟ್ಟದಲ್ಲಿ ಎನ್ ಎಸ್ ಪೈ ಶಾಲಾ ವಿದ್ಯಾರ್ಥಿಯ ಸಾಧನೆ..
ಪ್ಯಾರಾ ಯೋಗಾಸನದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗೆ ಶಾಲೆಯಿಂದ ಅಭಿನಂದನಾ ಸನ್ಮಾನ..
ಬೆಳಗಾವಿ : ನ್ಯೂನ್ಯತೆಯನ್ನು ಮೆಟ್ಟಿ ನಿಂತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ, ಇತರ ವಿದ್ಯಾರ್ಥಿಗಳಿಗೆ ಮಾದರಿಯಾದ ಎನ್ ಎಸ್ ಪೈ ಶಾಲೆಯ ವಿದ್ಯಾರ್ಥಿಯನ್ನು ಗೌರವ ಪೂರ್ವಕವಾಗಿ ಸನ್ಮಾನವನ್ನು ಮಾಡಲಾಗಿದೆ.
ರಾಷ್ಟ್ರ ಮಟ್ಟದಲ್ಲಿ ಪ್ಯಾರಾ ಯೋಗಾಸನ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೋಮ್ಮಿದ ಮಗುವಿನ ಅಭಿನಂದನಾ ಸಮಾರಂಭವನ್ನು ಆತ ಓದುತ್ತಿರುವ ಶಾಲೆಯಲ್ಲಿ, ಸಮಾಜದ ಗಣ್ಯರ ಹಾಗೂ ಆತನ ಶಿಕ್ಷಕ ವೃಂದದ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ..

ಮಂಗಳವಾರ ದಿನಾಂಕ 14/10/2025ರಂದು ನಗರದ ಕ್ಯಾಂಪ್ ವಲಯದಲ್ಲಿ ಇರುವ ಎನ್ ಎಸ್ ಪೈ ಶಾಲೆಯ 7 ನೆ ತರಗತಿ ವಿದ್ಯಾರ್ಥಿ ರಾಜವೀರ ಶಂಕರಗೌಡ ಎಂಬ ವಿದ್ಯಾರ್ಥಿ ಇತ್ತೀಚೆಗೆ ದೆಹಲಿ ಯಲ್ಲಿ ನಡೆದ ಪ್ರಥಮ ಪ್ಯಾರಾ ಯೋಗಾಸನ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದರಿಂದಶಾಲಾ ವತಿಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭಕೆ ಮಾಜಿ ಶಾಸಕ ಸಂಜಯ ಪಾಟೀಲ ಮುಖ್ಯ ಅತಿಥಿಗಳಾಗಿ, ಮಾಜಿ ಸಂಸದೆ ಮಂಗಳಾ ಅಂಗಡಿ ಅವರು ಗೌರವ ಅತಿಥಿಗಳಾಗಿ, ಶ್ರೀನಿವಾಸ ಶಿವಣಗಿ ಅವರು ಸಭಾ ಅಧ್ಯಕ್ಷರಾಗಿ ಭಾಗಿಯಾಗಿ ಮಗುವಿನ ಸಾಧನೆ ಮೆಚ್ಚಿ ಶುಭ ಹಾರೈಸಿದರು.

ಶಾಲಾ ಮುಖ್ಯ ಶಿಕ್ಷಕಿಯಾದ ರಾಧಿಕಾ ನಾಯಿಕ ಅವರು ಕಾರ್ಯಕ್ರಮದಲ್ಲಿ ಸ್ವಾಗತ ಮಾಡಿದರೆ,
ಹರ್ಷಾ ಕುಲಕರ್ಣಿ ನಿರೂಪಿಸಿದರು, ರಜನಿ ಜೋಶಿ ವಂದಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿ ಅಂತ್ಯ ಮಾಡಿದರು..