ರೈತಪರವಾದ ಗೊರಾಟಕ್ಕೆ ಇಳಿದ ಕರ್ನಾಟಕ ಯುವ ರಕ್ಷಣಾ ವೇದಿಕೆ
ಬೆಳಗಾವಿ : ಸಮೀಪದ ಸುಳೇಭಾವಿ ಗ್ರಾಮದ ರೈಲ್ವೆ ಸೇತುವೆಯ ಕೆಳ ರಸ್ತೆ ದುರಸ್ತಿಯ ವಿರುದ್ಧ ಹಾಗೂ ಅಲ್ಲಿನ 300 ರೈತರ ತುರ್ತು ರಸ್ತೆಯ ತಡೆಗೋಡೆಗಳ ವಿರುದ್ಧ ಕರ್ನಾಟಕ ಯುವ ರಕ್ಷಣಾ ವೇದಿಕೆಯಿಂದ ಬುಧವಾರ ದಿನಾಂಕ 06/11/2024ರಂದು ರೈತರ ಪರವಾದ ಹೋರಾಟವನ್ನು ಮಾಡಲಾಗಿದೆ..

ಈ ಹೋರಾಟದ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸಿದ್ದಬಸವ ಮಣತುರಗಿಮಠ, ಬಸಯ್ಯ ಹಿರೇಮಠ, ಸಂಬಾಜಿ ಬಂಗೆನ್ನವರ್, ಗಣಪತಿ ಬಡಕಿ, ಮಲ್ಲಯ್ಯ ಪೂಜಾರಿ, ಮಹದೇವ ಮನತುರಗಿಮಠ, ಬಾಳಪ್ಪ ಒಂಟಿ, ಬಾಬು ಗೊಳಸು, ದುರ್ಗಪ್ಪ ತಳವಾರ, ಈಶ್ವರ ಅಂಕಲಗಿ, ಕಾಡಪ್ಪ ಬುಡ್ರಿ, ಸತೀಶ್ ಈರಪ್ಪ ಅರಗಾಂವಿ,
ಕರ್ನಾಟಕ ಯುವರಕ್ಷಣಾ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷರಾದ ಸುನೀಲ್. ಎಂ. ಎಸ್, ರಾಜ್ಯ ಉಪಾಧ್ಯಕ್ಷರಾದ ಹಾಗೂ ಬೆಳಗಾವಿ ಉಸ್ತುವಾರಿ ಡಾ. ಮಾಹಾಂತೇಶ ಕೂಲಿನವರು, ರಾಜ್ಯ ಉಪಾಧ್ಯಕ್ಷರಾದ ಶ್ರೀಯುತ ರವಿ, ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಸವರಾಜ ಶಿ. ತುಬಾಕಿ, ಬೆಳಗಾವಿ ನಗರ ಅಧ್ಯಕ್ಷರಾದ ಶಿವಾನಂದ ಅಂಕಲಗಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಅಡೆವೆಪ್ಪ ಬ ಪಾಟೀಲ, ಮೈಸೂರು ಜಿಲ್ಲಾಧ್ಯಕ್ಷರಾದ ಮಧುಸೂದನ್, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಉಮೇಶ ರೊಟ್ಟಿ, ಜಿಲ್ಲಾ ಸಂಘಟನೆ ಕಾರ್ಯದರ್ಶಿಯಾದ ಸಮೀವುಲ್ಲಾ ಪಿರಸಾಬ ಸನದಿ, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ಭಾರತಿ ಪಾಟೀಲ, ಸುಳೇಭಾವಿ ಗ್ರಾಮ ಘಟಕದ ಅಧ್ಯಕ್ಷರಾದ ದೇವೇಂದ್ರ ಗ್ರಾಮ ಘಟಕದ
ಪದಾಧಿಕಾರಿಗಳಾದ ಗುದಗನವರ, ಬಸವರಾಜ ನಾಗನೂರ, ನಾಗರಾಜ ಬೆಳಗಾವಿ, ಸಂತೋಷ ಶಿವಶಿಂಪಿ ಉಪಸ್ಥಿತರಿದ್ದರು.