ರೈತರ ಆಸ್ತಿ ದಾಖಲೆಗಳಲ್ಲಿನ ವಕ್ಪ ಹೆಸರು ಕಡಿಮೆ ಆಗಬೇಕು..

ಮುಸ್ಲಿಂ ಓಲೈಕೆ ಹಾಗೂ ಮಾತಬ್ಯಾಂಕಗಾಗಿ ಅಧಿಕಾರ ದುರ್ಬಳಕೆ ಸರಿಯಲ್ಲ..

ತಿದ್ದಿಕೊಳ್ಳದಿದ್ದರೆ ರಾಜ್ಯದ ಜನ ಬಂಡಾಯ ಎದ್ದು ಸಿಎಂ ಹಾಗೂ ಸಚಿವರು ರಾಜೀನಾಮೆ ಪಡೆಯಬೇಕಾಗುತ್ತೆ..

ಎಫ್ ಎಸ್ ಸಿದ್ದನಗೌಡರ.

ಬೈಲಹೊಂಗಲ : ಅನಾವೃಷ್ಟಿ ಮತ್ತು ಅತಿವೃಷ್ಟಿಯಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲಿ ಅವರಿಗೆ ಪರಿಹಾರ ನೀಡುವದನ್ನು ಬಿಟ್ಟು ವಕ್ಪ್ ಹೆಸರಿನಲ್ಲಿ ರೈತರ ಜಮೀನು ಕಸಿದುಕೊಳ್ಳುವ ಲ್ಯಾಂಡ್ ಜಿಹಾದ್ ದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ವಕ್ಪ್ ಖಾತೆ ಸಚಿವ ಜಮೀರ ಅಹ್ಮದ ಮರ್ಯಾದೆಯಿಂದ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಇಲ್ಲದಿದ್ದರೆ ರಾಜ್ಯದ ಜನತೆಯೆ ಬಂಡಾಯವೆದ್ದು ರಾಜಿನಾಮೆ ಪಡೆಯಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಆಗ್ರಹಿಸಿದರು.

ಸೋಮವಾರ ಬಿಜೆಪಿ ಪದಾಧಿಕಾರಿಗಳು ಹಾಗೂ ರಾಜ್ಯ ರೈತ ಸಂಘಟನೆಯ ಒಕ್ಕೂಟದ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ತಮ್ಮ ಹಗರಣಗಳನ್ನು ಮುಚ್ಚಿಹಾಕಲು ರಾಜ್ಯದ ಜನತೆಯಲ್ಲಿ ಗೊಂದಲದ ವಿಷಯಗಳನ್ನು ಮಂತ್ರಿಗಳು ಹೇಳುವ‌ ಮೂಲಕ ಸಾಮರಸ್ಯದ ರಾಜ್ಯದಲ್ಲಿ ಶಾಂತಿ ಕೆಡಿಸುತಿದ್ದರೆ.

ಮುಖ್ಯಮಂತ್ರಿಗಳು ವೀರಾವೇಶದಲ್ಲಿ ಅಧಿಕಾರಿಗಳು, ರೈತರಿಗೆ ಕೊಟ್ಟಿರುವ ನೋಟಿಸ್ ಹಿಂಪಡೆಯಿರಿ ಎಂದು ಹೇಳಿದರೆ ಸಮಸ್ಯೆ ಬಗೆಹರಿಯುವದಿಲ್ಲ. ವಕ್ಫ್ ಖಾತೆ ಸಚಿವರು ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತಂದೆ ರೈತರ ಜಮೀನಿಗಳಿಗೆ ವಕ್ಪ್ ಹೆಸರು ದಾಖಲಿಸಲು ಕ್ರಮ ಕೈಗೊಂಡಿದ್ದಾಗಿ ಹೇಳಿದ್ದಾರೆ. ಆದರೆ ಸರ್ಕಾರದ ನಿರ್ಧಾರದಂತೆ ಕೇವಲ ನೋಟಿಸ್ ಹಿಂಪಡೆದರೆ ಸಾಲದು ವಕ್ಫ್ ಹೆಸರು ದಾಖಲಿರುವ ರೈತರ ಆಸ್ತಿಗಳಿಂದ ವಕ್ಪ್ ಹೆಸರು ಕಡಿಮೆಗೊಳಿಸಬೇಕು.

ರಾಜ್ಯದಲ್ಲಿ ಮಠ, ಮಂದಿರಗಳು, ರೈತರ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಿದ್ದು ಕಾನೂನುಬಾಹಿರವಾಗಿದ್ದು ತಕ್ಷಣ ಈ ಆದೇಶ ಹಿಂಪಡೆಯಬೇಕು,
ಸನ್1974ರ ವಕ್ಫ್ ಆಸ್ತಿ ಕುರಿತ ಇರುವ ಗಜೆಟ್ ಅಧಿಸೂಚನೆ ಹಿಂಪಡೆದು ರೈತರ ಹೆಸರಿಗೆ ಆಸ್ತಿ ಬಿಟ್ಟುಕೊಡಬೇಕು.
ಕರ್ನಾಟಕದ ವಕ್ಫ್ ನಲ್ಲಿ ನಡೆದಿರುವ ಖೊಟ್ಟಿ (ನಕಲಿ) ದಾಖಲೆಗಳ ಸೃಷ್ಟಿಸಿ, ಆ ಮೂಲಕ ಮಾಡಿಕೊಂಡಿರುವ ಲಾಭದ ಕುರಿತು ಇ.ಡಿ. (ಜಾರಿ ನಿರ್ದೇಶಲಯ) ತನಿಖೆಯಾಗಬೇಕು.

50 ವರ್ಷದ ಹಿಂದಿನ ಗೆಜೆಟನ ನೆಪ ಒಡ್ಡಿ 50 ವರ್ಷ ಯಾವುದೇ ಕ್ರಮ ಕೈಗೊಳ್ಳದೇ, ಈಗ ಅಲ್ಪಸಂಖ್ಯಾತರ ಮತ ಬ್ಯಾಂಕ್ ರಾಜಕಾರಣಕ್ಕಾಗಿ, ಅಲ್ಪಖ್ಯಾತರ ತುಷ್ಟೀಕರಣಕ್ಕಾಗಿ, ಕರ್ನಾಟಕ ವಕ್ಫ್ ಬೋರ್ಡ್ ಮೂಲಕ ಮಾಡಿರುವ ಬೃಹತ್ ದಾಖಲೆಯ ಸೃಷ್ಟಿಯ ಎಲ್ಲಾ ವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು.
ರಾಜ್ಯದಲ್ಲಿ ಇಂದು ವಕ್ಫ್ ಕಾಯ್ದೆಯ ದುರ್ಬಳಕೆಯ ಕಾರಣಕ್ಕಾಗಿ ರೈತರು ಮಠಮಾನ್ಯಗಳು, ಹಿಂದೂ ದೇವಾಲಯಗಳು ಎಲ್ಲರೂ ಸೇರಿದಂತೆ ಆತಂಕದಲ್ಲಿದ್ದಾರೆ.

ಹಿಂದೆ ಕಾಂಗ್ರೆಸ್ ನವರು ರೂಪಿಸಿರುವ ವಕ್ಫ್ ಕಾಯ್ದೆ ಮುಸ್ಲಿಂ ತುಷ್ಟೀಕರಣಕ್ಕಾಗಿ ಮತಗಳಿಕೆಯ ಆಸೆಯೊಂದಿಗೆ ರಚಿಸಿರುವ ಕಾಯ್ದೆಯಾಗಿದೆ. ಇಂತಹ ಕಾಯ್ದೆಯ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರಿಗಳನ್ನು ದುರಪಯೊಗ ಪಡೆದುಕೊಳ್ಳುತ್ತಿದೆ.
ರೈತರು ವಿಭಿನ್ನ ತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಸ್ತಿ ಕಳೆದುಕೊಳ್ಳುವ ಭೀತಿ ನಿರ್ಮಾಣವಾಗಿದೆ.

ಈ ಸಂಬಂಧ ಕೇವಲ ನೋಟಿಸ್ ಹಿಂಪಡೆದರೆ ಸಾಲದು. ರೈತರ ಆಸ್ತಿಗಳಲ್ಲಿ ರೈತರ ಹೆಸರನ್ನು ನಮೂದಿಸಬೇಕು. ಅಲ್ಲದೆ, 1974ರ ವಕ್ಫ್ ಆಸ್ತಿ ಕುರಿತ ಗಜೆಟ್ ಅಧಿಸೂಚನೆ ಹಿಂಪಡೆಯಬೇಕು.
ಮೊದಲು ರಾಜ್ಯದಲ್ಲಿರುವ ಸರ್ಕಾರಿ ಆಸ್ತಿಯನ್ನು ಸರ್ವೇ ಮಾಡಿಸಿ ಸರ್ಕಾರ ವಶಪಡಿಸಿಕೊಳ್ಳಬೇಕು. ರಾಜ್ಯದಲ್ಲಿ ರೈತರ ಜಮೀನುಗಳಿಗೆ ಸರಿಯಾದ ರಸ್ತೆಗಳಿಲ್ಲ. ಇದನ್ನು ಸರಿ ಪಡಿಸಬೇಕಾದ ಸರ್ಕಾರ ವಕ್ಪ್ ಮೂಲಕ ರೈತರ ಮೇಲೆ ಮಾಡುವ ದೌರ್ಜನ್ಯ ನಿಲ್ಲಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾದಿತು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಉದ್ಯಮಿ ವಿಜಯ ಮೆಟಗುಡ್ಡ, ರೈತ ಸಂಘಟನೆಯ ರಾಜ್ಯಾಧ್ಯಕ್ಷ ಮಹಾಂತೇಶ ಕಮತ, ಘೂಳಪ್ಪ ಹೊಳಿ, ಶಂಕರ ಭೀರಪ್ಪ ದೇಶನೂರ, ಬಸವರಾಜ ಮೊಕಾಶಿ, ಈರಪ್ಪ ಅಂಗಡಿ, ಬಸನಗೌಡ ಪಾಟೀಲ, ಮಂಡಲ ಅಧ್ಯಕ್ಷ ಸುಭಾಸ ತುರಮರಿ, ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಲಕ್ಕಪ್ಪ ಕಾರಗಿ, ವಿಶಾಲ ಬೋಗುರ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಅಜ್ಜಪ್ಪ ಹೊಸೂರ, ಬಸವರಾಜ ದುಗ್ಗಾಣಿ, ಆನಂದ ಮೂಗಿ,ಸಂಜೀವ ಮುರಗೋಡ, ಶಿವಯೋಗಿ ಹುಲ್ಲನ್ನೆವರ, ನಾಗಪ್ಪ ಸಂಗೊಳ್ಳಿ, ಗೌಡಪ್ಪ ಹೊಸಮನಿ, ರವಿ ತುರಮರಿ, ಸದಾಶಿವ ಪಾಟೀಲ, ಸುನೀಲ್ ಮಾಳೋದೆ,
ರಾಯಣ್ಣನ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ತಹಶೀಲ್ದಾರ್ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ಮೂಲಕ ಕಛೇರಿಗೆ ಮುತ್ತಿಗೆ ಹಾಕಿ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು..

ವರದಿ ಪ್ರಕಾಶ ಬಸಪ್ಪ ಕುರಗುಂದ..