ರೈತರ ಕುರಿತಾದ ಜೈಕಿಸಾನ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಸಚಿವ ಸತೀಶ ಜಾರಕಿಹೊಳಿ..

ರೈತರ ಕುರಿತಾದ ಜೈಕಿಸಾನ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಸಚಿವ ಸತೀಶ ಜಾರಕಿಹೊಳಿ..

ಟೇಸರ್ ವೀಕ್ಷಿಸಿ, ಚಿತ್ರತಂಡಕ್ಕೆ ಶುಭಕೋರಿದ ಸಚಿವರು.

ಬೆಂಗಳೂರು : ಗುರುವಾರ ದಿನಾಂಕ 22-05-25 ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಅಣ್ಣಾ ಜಾರಕಿಹೋಳಿರವರು ತಮ್ಮ ಬಿಡುವಿಲ್ಲದ ಕಾರ್ಯದಲ್ಲಿ ಸಮಯಾವಕಾಶ ಮಾಡಿಕೊಂಡು “ಜೈಕಿಸಾನ” ಎಂಬ ಕನ್ನಡ ಚಲನಚಿತ್ರದ ಪೋಸ್ಟರ್ ಹಾಗೂ ಟೇಸರ್ ಬಿಡುಗಡೆ ಮಾಡಿದ್ದಾರೆ.

“ಜೈ ಕಿಸಾನ್” ಚಲನಚಿತ್ರ ಹೆಸರೇ ಹೇಳುವಂತೆ ಇದೊಂದು ರೈತರ ಕುರಿತಾದ ಚಲನಚಿತ್ರವಾಗಿದ್ದು, ಇದೇ ಮೇ ತಿಂಗಳು 23ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತದೆ, ಸಚಿವ ಸತೀಶ್ ಜಾರಕಿಹೊಳಿ ಅವರು ಚಿತ್ರದ ಟೀಸರ್ ವೀಕ್ಷಣೆ ಮಾಡಿ, ಚಿತ್ರ ಯಶಸ್ವಿ ಆಗಲೆಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಕುಂಬಾರರ ಯುವಸೈನ್ಯದ ರಾಜ್ಯಾಧ್ಯಕ್ಷರಾದ ಶಂಕರ ಶೆಟ್ಟಿ ಕುಂಬಾರ, ಚಿತ್ರದ ನಿರ್ಮಾಪಕರಾದ ರವಿ ನಾಗಪುರೆ, ಕುಂಬಾರ ಯುವಸೈನ್ಯದ ಬೆಳಗಾವಿ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಕುಂಬಾರ, ಮಾರುತಿ ಕುದರಿ, ಬರಮಣ್ಣ ತೋಳಿ, ಪರಶುರಾಮ ಪೂಜಾರಿ, ಮಂಜು ಕಾಂಬಳೆ ಹಾಗೂ ಚಿತ್ರತಂಡದ ಸದಸ್ಯರು ಭಾಗಿಯಾಗಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..