ರೈತರ ಪರ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲಿ..
ಡಿಸಿಎಂ ಡಿ ಕೆ ಶಿವಕುಮಾರ..
ಬೆಳಗಾವಿ : ಇನ್ನೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇಂದು ರಾಜ್ಯ ಬಿಜೆಪಿಯವರು ರೈತರ ವಿವಿಧ ಬೇಡಿಕೆಗಾಗಿ ಹೋರಾಟ ಮಾಡುತ್ತಿದ್ದಾರೆ, ಆದರೆ ರೈತರ ಸಮಸ್ಯೆಗಳ ಬಗ್ಗೆ ಕೇಂದ್ರ ಸರಕಾರ ಮೋಸ ಮಾಡುತ್ತಿದೆ, ಕೇಂದ್ರ ಸರ್ಕಾರದ ವಿರುದ್ದ ಬಿಜೆಪಿಯವರು ಹೋರಾಟ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಮುಂದೆ ಹೇಳಿದ್ದಾರೆ.
ಕೇಂದ್ರ ಸರಕಾರ ರೈತರ ಬೆಳೆಗಳನ್ನ ಖರೀದಿ ಮಾಡುತ್ತಿಲ್ಲ, ರೈತರ ಬಗ್ಗೆ ಕಾಳಜಿ ಇದ್ದರೆ,
ವಿರೋದ ಪಕ್ಷದವರು ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಬೇಕು.
ಕೆಂದ್ರ ಸರಕಾರದಿಂದ ರಾಜ್ಯಕ್ಕೆ ಬರುವ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದರು.
ಬಿಜೆಪಿ ಪ್ರತಿಭಟನೆ ವಿಚಾರ
ನಾವು ನಮ್ಮ ಸರ್ಕಾರ ರೈತರ ಪರವಾಗಿ ಇದ್ದೆವೆ, ಕಬ್ಬು, ಮೆಕ್ಕೆಜೋಳ, ಖರೀದಿಯನ್ನು ರಾಜ್ಯ ಸರಕಾರ ಈಗಾಗಲೇ ಆರಂಭ ಮಾಡಿದೆ,
ನಾವು ಇಂತಿಷ್ಟು ಖರೀದಿ ಮಾಡಬೇಕು ಎಂದು ಆದೇಶ ಮಾಡಿದ್ದೆವೆ..
ಎಂ ಆರ್ ಪಿ ಬೆಲೆ ಪಿಕ್ಸ್ ಮಾಡಬೇಕಾದವರು ಕೇಂದ್ರ ಸರಕಾರ, ಈಗ ಹೋರಾಟ ಮಾಡಬೇಕಾಗಿದ್ದು ಕೇಂದ್ರ ಸರಕಾರದ ವಿರುದ್ದ,
ಸುಖಾ ಸುಮ್ಮಾನೆ ಬಿಜೆಪಿ ಅವರು ಮಾತನಾಡುತ್ತಾರೆ.
ಕೇಂದ್ರ ಸರಕಾರದ ವಿರುದ್ದ ಹೋರಾಟ ಮಾಡಲಿ, ನಮ್ಮ ವಿರುದ್ದ ಹೋರಾಟ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ..