ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಲ್ಲರಕ್ಕಿಂತ ಮೊದಲು ಜಗದೀಶ ಶೆಟ್ಟರ ಕಚೇರಿಯಲ್ಲಿ ಇರುತ್ತಾರೆ…

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಲ್ಲರಕ್ಕಿಂತ ಮೊದಲು ಜಗದೀಶ ಶೆಟ್ಟರ ಕಚೇರಿಯಲ್ಲಿ ಇರುತ್ತಾರೆ..

ಮುರುಗೇಶ ನಿರಾಣಿ ಭವಿಷ್ಯ..

ಬೆಳಗಾವಿ : ಬೆಳಗಾವಿ ಲೋಕಸಭಾ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ಮತದಾರರನ್ನು ಸೆಳೆಯಲು ತಮ್ಮ ರಣತಂತ್ರದ ಮೂಲಕ ವಿಭಿನ್ನ ಪಯತ್ನ ಮಾಡುತ್ತಾ, ಕೊನೆಗೆ ವೈಯಕ್ತಿಕ ಟೀಕೆ ಟಿಪ್ಪಣಿ ಮಾಡುವ ಹೇಳಿಕೆಗಳನ್ನು ನೀಡುತ್ತಾ ಬರುತ್ತಿವೆ..

ಅದೇ ಹಾದಿಯಲ್ಲಿ ಕೆಲ ದಿನಗಳ ಹಿಂದೆ ಬೆಳಗಾವಿಯ ಬಿಜೆಪಿಯ ಕಚೇರಿಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ನೂರಕ್ಕೆ ನೂರರಷ್ಟು ಗೆದ್ದು, ಸಚಿವರಾಗಿ ಆಯ್ಕೆ ಆಗುತ್ತಾರೆ, ಈಗ ಶೆಟ್ಟರ್ ಅಡ್ರೆಸ್ ಕೇಳುವ ಇದೆ ಲಕ್ಷ್ಮಿ ಹೆಬ್ಬಾಳಕರ ಅವರು ಎಲ್ಲರಿಗಿಂತ ಮೊದಲ ಶೆಟ್ಟರ್ ಕಚೇರಿಯಲ್ಲಿ ಇರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ..

ಈ ಮೊದಲು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ, ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದಾಗ, ಇದೇ ಲಕ್ಷ್ಮಿ ಹೆಬ್ಬಾಳಕರ ಅವರು ಬಿಜೆಪಿ ಮಂತ್ರಿಗಳ ಕಚೇರಿಗೆ ಬಂದು, ಯಾವ ಬಿಜೆಪಿ ಶಾಸಕ, ಸಚಿವರೂ ಪಡೆಯಲಾರದಷ್ಟು ಅನುದಾನ ಪಡೆದುಕೊಂಡಿದ್ದಾರೆ, ಆಗ ಇವರಿಗೆ ಬಿಜೆಪಿಯವರ ಅಡ್ರೆಸ್ ಗೊತ್ತಿರಲಿಲ್ಲವಾ?? ಶೆಟ್ಟರ್ ಅಡ್ರೆಸ್ ಈಗ ಕೇಳುವವರು ಆಗ ಅನುದಾನ ಪಡೆಯುವಾಗ ಏಕೆ ಕೇಳಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ..

ಬೆಳಗಾವಿಯ ಜನ ಬಹಳ ಪ್ರಜ್ಞಾವಂತರಿದ್ದಾರೆ, ಯಾರನ್ನು ಆರಿಸಬೇಕೆಂದು ಅವರಿಗೆ ಗೊತ್ತಿದೆ, ಶೆಟ್ಟರ್ ಅವರು ನೂರಕ್ಕೆ ನೂರರಷ್ಟು ಕೇಂದ್ರದ ಮಂತ್ರಿ ಆಗುತ್ತಾರೆ, ಆಗ ಇದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅವರ ಕಚೇರಿಗೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ..

ವರದಿ ಪ್ರಕಾಶ್ ಕುರಗುಂದ..