ಲೋಕಸಭಾ ಅಭ್ಯರ್ಥಿಯ ಆಯ್ಕೆಯಲ್ಲಿ ಗೆಲುವೊಂದೇ ಮಾನದಂಡ…

ಲೋಕಸಭಾ ಅಭ್ಯರ್ಥಿಯ ಆಯ್ಕೆಯಲ್ಲಿ ಗೆಲುವೊಂದೇ ಮಾನದಂಡ..

ಡಿಸೆಂಬರ್ ತಿಂಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆಗುತ್ತದೆ..

ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟನೆ..

ಬೆಳಗಾವಿ : ಸೋಮವಾರ ನಗರದ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯ ರಾಜಕಾರಣದ ಅನೇಕ ವಿಷಯಗಳನ್ನು ಹಂಚಿಕೊಂಡರು..

ಮುಖ್ಯವಾಗಿ ಬರುವ ಲೋಕಸಭಾ ಚುನಾವಣೆ ಬಗ್ಗೆ ಮಾತನಾಡಿದ ಸಚಿವರು, ಜನರಿಗೆ, ಕಾರ್ಯಕರ್ತರಿಗೆ ಹತ್ತಿರವಾಗಿರುವ, ತಮ್ಮ ಸಮುದಾಯದ ವಿಶ್ವಾಸ ಗಳಿಸಿರುವ ಆಕಾಂಕ್ಷಿಗಳಿಗೆ ಟಿಕೆಟ್ ಲಭಿಸುವ ಸಾಧ್ಯತೆ ಇದ್ದು, ಇಲ್ಲಿ ಚುನಾವಣೆಯಲ್ಲಿ ಗೆಲ್ಲುವದೊಂದೆ ಮಾನದಂಡ, ಗೆಲ್ಲುವಂತ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆ ಎಂದಿದ್ದಾರೆ..

ಡಿಸೆಂಬರ್ ತಿಂಗಳಲ್ಲಿ ಬಹುತೇಕ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಬಹುದು, ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆಯಲ್ಲಿ ಅಧಿಕ ಜನಸಂಖ್ಯಾ ಹೊಂದಿದ ಸಮುದಾಯದ ಅಭ್ಯರ್ಥಿಗೆ ಪ್ರಾತಿನಿಧ್ಯ ನೀಡುತ್ತಿದ್ದು, ರಾಜ್ಯದಲ್ಲಿ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸುಮಾರು 20 ಸ್ಥಾನ ಪಡೆಯುವ ವಿಶ್ವಾಸ ವಿದ್ದು, ನಮ್ಮ ಕುಟುಂಬದ ವ್ಯಕ್ತಿಗಳು ಸ್ಪರ್ಧಿಸುವ ಯೋಚನೆ ಇಲ್ಲ ಎಂದರು..

ಇನ್ನು ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ ಸಚಿವರು, ತಮಗೆನೂ ಆಸಕ್ತಿ ಇಲ್ಲಾ, ಆದಷ್ಟೂ ಬೇಗ ಆಯ್ಕೆ ಪ್ರಕ್ರಿಯೆ ಮಾಡಿ ಮುಗಿಸಬೇಕು ಎಂದರು, ಬರ ಪರಿಹಾರದ ಮೊತ್ತ ಕೇಂದ್ರದಿಂದ ಬರುವದು ತಡವಾಗಿದ್ದರ ಕಾರಣ ರೈತರಿಗೆ ಸಾಮಾನ್ಯರಿಗೆ ತೊಂದರೆ ಆಗಿರಬಹುದು ಎಂದ ಅವರು, ಬರ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸೂಕ್ತ ಯೋಜನೆ ಹಾಕಿಕೊಂಡಿದೆ ಎಂದರು..

ಲೋಕೋಪಯೋಗಿ ಇಲಾಖೆಯಿಂದ ಕಾರ್ಯಗಳು ತ್ವರಿತಗತಿಯಲ್ಲಿ ಸಾಗುತ್ತಿದ್ದು, ಉಳಿದ ಕಾರ್ಯಗಳನ್ನು ಕೂಡಾ ಬೇಗ ಮಾಡಲಾಗುತ್ತೆ, ಜಿಲ್ಲೆಯ ವಿಭಜನೆ ಸಧ್ಯಕ್ಕೆ ಇಲ್ಲಾ, ಜಿಲ್ಲೆಯಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ಆದಷ್ಟೂ ಬೇಗ ನಿಯಂತ್ರಿಸಲಾಗುತ್ತದೆ ಎಂದ ಅವರು, ತಾಲೂಕು ಮಟ್ಟದ ಪ್ರವಶಿ ಮಂದಿರ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ಅಲ್ಲಿನ ತಹಶೀಲ್ದಾರ ಅವರು ನಿಯಂತ್ರಿಸಿ ಅಂತವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದರು..

ಈ ಸುದ್ದಿಗೋಷ್ಠಿಯಲ್ಲಿ ಸಚಿವರೊಂದಿಗೆ ವಿನಯ ನಾವಲಗಟ್ಟಿ, ವೀರಕುಮಾರ ಪಾಟೀಲ್, ಕಾಕಾಸಬೇಬ ಪಾಟೀಲ್, ಕಿರಣ ಸಾಧುನವರ ಹಾಗೂ ಮತ್ತಿತರ ಕಾಂಗ್ರೆಸ್ ಪದಾಧಿಕಾರಿಗಳು ಭಾಗಿಯಾಗಿದ್ದರು..

ವರದಿ ಪ್ರಕಾಶ ಕುರಗುಂದ..