ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ..
ವಿಧಾನಸಭಾ ಚುನಾವಣೆ ಸೋಲನ್ನು ಸವಾಲಾಗಿ ಸ್ವೀಕರಿಸಿದ ಕೇಸರಿ ಪಡೆ..
ಬೆಳಗಾವಿ : ಬರುವ 2024ರ ಲೊಕಸಭಾ ಚುನಾವಣೆಗೆ ಬೆಳಗಾವಿ ಜಿಲ್ಲೆಯಲ್ಲಿ ಬರುವ 10 ವಿಧಾನಸಭಾ ಕ್ಷೇತ್ರಗಳಿಗೆ ಲೊಕಸಭಾ ಚುನಾವಣಾ ನಿಮತ್ಯ ಪ್ರಭಾರಿ ಹಾಗೂ ಸಂಚಾಲಕರನ್ನು ನೇಮಕ ಮಾಡುವ ಮೂಲಕ ಭರ್ಜರಿ ತಯಾರಿ ನಡೆಸಿದ್ದು ಆ ಪ್ರಕ್ರಿಯೆಯಲ್ಲಿ ಮುಂದುವರೆದಂತೆ ಹಲವು ಪದಾಧಿಕಾರಿಗಳ ಆಯ್ಕೆ ಕೂಡಾ ನಡೆದಿದೆ..
ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲನ್ನು ಬಿಜೆಪಿ ಪಕ್ಷ ಸವಾಲಾಗಿ ಸ್ವಿಕರಿದ್ದು, ಈ ಸಲದ ಚುನಾವಣೆಯಲ್ಲಿ ಪಕ್ಷಕ್ಕೆ ಯಾವುದೇ ರೀತಿಯ ಹಿನ್ನೆಡೆ ಆಗದಂತೆ, ಪೂರ್ಣ ತಯಾರಿ ಹಾಗೂ ಪ್ರಯತ್ನ ಮಾಡುತ್ತಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ ಅವರು ರಾಜ್ಯಾಧ್ಯಕ್ಷರ ನಿರ್ದೇಶನದಂತೆ ಬೆಳಗಾವಿ ಹಾಗೂ ಕೆನರಾ ಲೋಕಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ10ವಿಧಾನಸಭಾ ಕ್ಷೇತ್ರಗಳಿಗೆ ಪ್ರಭಾರಿ ಹಾಗೂ ಸಂಚಾಲಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಅದರ ಮಾಹಿತಿ ಈ ಕೆಳಗಿನಂತೆ ಇದೆ..
ಬೆಳಗಾವಿ ಉತ್ತರ ಮಲ್ಲಿಕಾರ್ಜುನ ಮಾದಮ್ಮನವರ, ಬೆಳಗಾವಿ ದಕ್ಷಿಣ ನಿತಿನ್ ಚೌಗುಳೆ, ಅರಭಾವಿ ವಿಜಯ ಗುಡದಾರಿ, ಗೋಕಾಕ್ ಮುತ್ತಪ್ಪ ಮನ್ನಾಪೂರ್, ಬೆಳಗಾವಿ ಗ್ರಾಮೀಣ, ದಾದಾಗೌಡ್ ಬಿರಾದಾರ, ಖಾನಾಪುರ, ಮಹೇಶ್ ಮೋಹಿತೆ, ಕಿತ್ತೂರು, ಮಂಜುನಾಥ್ ಪಮ್ಮಾರ, ಬೈಲಹೊಂಗಲ, ಪ್ರಮೋದ್ ಕೋಚೆರಿ, ಸವದತ್ತಿ, ಎಫ ಎಸ್ ಸಿದ್ದನಗೌಡರ, ರಾಮದುರ್ಗ, ಈರಣ್ಣ ಅಂಗಡಿ, ಇವರನ್ನು ವಿಧಾನಸಭಾ ಕ್ಷೇತ್ರ ಪ್ರಭರಿಗಳಾಗಿ ನೇಮಿಸಲಾಗಿದೆ..

ವರದಿ ಪ್ರಕಾಶ ಕುರಗುಂದ..