ಲೋಕಸಭಾ ಚುನಾವಣೆ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಚುನಾವಣಾಧಿಕಾರಿಗಳಿಂದ ಸುದ್ದಿಗೋಷ್ಠಿ..
ಬೆಳಗಾವಿ : ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆಗಳಿಗೆ ಅಧಿಸೂಚನೆ ಹೊರಡಿಸಿದ ಹಿನ್ನಲೆ ಜಿಲ್ಲೆಯಲ್ಲಿ ಮಾರ್ಚ್ 16 ರಿಂದ ಜೂನ್ 6 ವರಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರುತ್ತದೆ, ಅದರಂತೆ
ಬೆಳಗಾವಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿಯೂ ಸಹ ಕಟ್ಟು ನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದೇವೆ ಎಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿ ಶಕೀಲ ಅಹಮ್ಮದ್ ಅವರು ಹೇಳಿದರು.
ಮಂಗಳವಾರ ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ
ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 294 ಮತಗಟ್ಟೆ ಇದ್ದು,ಅದರಲ್ಲಿ 31 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದರು.ಗ್ರಾಮೀಣ ವಿಧಾನಸಭಾ ಮತಕ್ಷೇತ್ರದಲ್ಲಿ ಪುರುಷ ಮತದಾರರು 131813 ಮಹಿಳಾ 130766 ಹಾಗೂ ತೃತೀಯಲಿಂಗಿ 10 ಸೇರಿದಂತೆ ಒಟ್ಟು 262589 ಮತದಾರರಿದ್ದರೆ.
ಸೇವಾ ಪುರುಷ 2183 ಮಹಿಳಾ 52 ಒಟ್ಟು 2235 ಸೇವಾ ಮತದಾರರಿದ್ದಾರೆ.
ಮಾದರಿ ನೀತಿ ಸಂಹಿತೆ ಪಾಲನೆ ಕುರಿತು ಒಟ್ಟು 25 ಸೆಕ್ಟರ್ ಅಧಿಕಾರಿಗಳು 4 ಎಪ್. ಎಸ್. ಟಿ ತಂಡಗಳು 2 ವ್ಹಿ.ಎಸ್.ಟಿ ತಂಡಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ನಿಯೋಜಿಸಿ ಆದೇಶಿಸಲಾಗಿದೆ. ಬಾಚಿ, ಬೆಕ್ಕಿನಕೇರಿ ಹಾಗೂ ರಾಕ್ಕಸಕೊಪ್ಪ ಸೇರಿದಂತೆ 3 ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
85 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ವಿಕಲಚೇತನರ ಮತದಾರರ ಮನೆಗೆ ಹೋಗಿ ಅಂಚೆ ಮತಪತ್ರದ ಮೂಲಕ ಮತದಾನ ಪ್ರಕ್ರಿಯೆ ಜರುಗಿಸಲಾಗುವುದು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ C vigil app ತಂತ್ರಾಂಶದ ಮೂಲಕ ದೂರು ದಾಖಲಿಸಬಹುದಾಗಿದೆ. ರಾಜಕೀಯ ಸಭೆಯ ಸಮಾರಂಭಗಳು ನಡೆಯುವ 48 ಗಂಟೆಗಳ ಮುಂಚಿತವಾಗಿ ಸುವಿದಾ ಆನ್ ಲೈನ್ ವ್ಯವಸ್ಥೆಯಲ್ಲಿ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದಾಗಿದೆ ಹಾಗೂ ಯಾವುದೇ ದೂರು ಹಾಗೂ ಸಲಹೆಗಳು ಇದ್ದಲ್ಲಿ ದೂರವಾಣಿ ಸಂಖ್ಯೆ 0831-2407286 ಗೆ ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ಚುನಾವಣೆ ಅಧಿಕಾರಿ ಶಕೀಲ ಅಹಮ್ಮದ್ ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿ ಶಕೀಲ ಅಹಮ್ಮದ್,ತಹಶೀಲ್ದಾರ್ ಸಿದ್ದರಾಯಿ ಬೋಸಗಿ ಸೇರಿದಂತೆ ಇತರರು ಇದ್ದರು.
ವರದಿ ಪ್ರಕಾಶ ಕುರಗುಂದ..