ಲೋಕಸಭಾ ಚುನಾವಣೋತ್ತರ ಸಮೀಕ್ಷೆ..
ರಾಷ್ಟ್ರ ಮತ್ತು ರಾಜ್ಯದಲ್ಲಿ ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿಗೆ ಬಹುಮತ..
ಕೇಸರಿ ಪಡೆಯ ಹರ್ಷದೊಂದಿಗೆ, ಕಮಲ ಕಿಲಕಿಲ..
ಬೆಳಗಾವಿ : 2024ರ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಅಂದರೆ ಶನಿವಾರ 7ನೇ ಹಂತದ ಮತದಾನ ಮುಗಿದ ನಂತರ, ಪಲಿತಾಂಶ ಏನಾಗಬಹುದು ಎಂದು ಎಲ್ಲರ ಚಿತ್ತ, ಲೆಕ್ಕಾಚಾರ ಬರುವ ಪಲಿತಾಂಶದ ಕಡೆಗೆ ಇರುವಾಗ, ಎಂದಿನಂತೆ ಈ ಚುನಾವಣೆಗೂ ಕೂಡಾ, ಹಲವು ಸಮೀಕ್ಷಾ ತಂಡ ಹಾಗೂ ಸಂಸ್ಥೆಗಳು ಚುನಾವಣಾ ನಂತರದ ಸಮೀಕ್ಷೆಯನ್ನು ನಡೆಸಿವೆ..
ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಯಾವ ಪಕ್ಷಗಳಿಗೆ ಮತದಾರರ ಒಲವಿದೆ ಎಂದು ತಮ್ಮ ತಮ್ಮ ಸಮೀಕ್ಷೆಗಳ ಮೂಲಕ ಅಧ್ಯಯನ ಮಾಡಿ ಅಂದಾಜಿಸಲಾಗುತ್ತದೆ, 2024ರ ಚುನಾವಣಾ ನಂತರದ ಸಮೀಕ್ಷೆಯನ್ನು ಕೆಲ ಸಂಸ್ಥೆಗಳು ನಡೆಸಿದ್ದು, ಪ್ರಮುಖವಾಗಿ ಝೀ ನಿವ್ಸ್, ರಿಪಬ್ಲಿಕ್ ನಿವ್ಸ್, ಜನ ಕಿ ಬಾತ್, ಲೋಕ್ ಪೋಲ್, ಡೈನಾಮಿಕ್ಸ್, ಇಂಡಿಯಾ ಟುಡೇ, ಎಬಿಪಿ ನಿವ್ಸ್, ಇಂಡಿಯಾ ಟಿವಿ, ಸಿ ವೋಟರ್ಸ್, ಸಿಎನ್ಎನ್ ನಿವ್ಸ್ 18, ಸಿಎನ್ಎಕ್ಸ್, ಹೀಗೆ ಹಲವಾರು ಸಂಸ್ಥೆಗಳು ಸಮೀಕ್ಷೆ ನಡೆಸಿವೆ..
ಬಹುತೇಕ ಸಮೀಕ್ಷೆಗಳಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ 350 ಸ್ಥಾನಗಳಿಂದ 380 ಸ್ಥಾನಗಳನ್ನು ಗೆಲ್ಲಬಹುದೆಂದು ಅಂದಾಜಿಸಗಿದ್ದು, ಇಂಡಿಯಾ ಮೈತ್ರಿಕೂಟಕ್ಕೆ 125 ಸ್ಥಾನಗಳಿಂದ 165 ಸ್ಥಾನ ಗೆಲ್ಲಬಹುದೆಂದು ಅಂದಾಜಿಸಾಗಿದೆ, ಇತರ ಪಕ್ಷದವರು 25 ರಿಂದ 65 ಸ್ಥಾನ ಪಡೆಯಬಹುದೆಂದು ಊಹೆ ಮಾಡಲಾಗಿದೆ..
ಬಹುಮತಕ್ಕೆ 272 ಸ್ಥಾನಗಳ ಅವಶ್ಯಕತೆ ಇದ್ದಿದ್ದು, ಬಿಜೆಪಿ ಕನಿಷ್ಠ 350 ಸ್ಥಾನ ಹೇಳಬಹುದು ಎಂಬ ಅಂದಾಜಿಗೆ ಬರಲಾಗಿದ್ದು, ಕೇಸರಿ ಪಾಳಯದಲ್ಲಿ ಸಹಜವಾಗಿಯೇ ಖುಷಿಯ, ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ..
ಇನ್ನು ಕರ್ನಾಟಕ ರಾಜ್ಯದ ವಿಷಯಕ್ಕೆ ಬಂದರೆ, ಬಿಜೆಪಿಯು 18 ರಿಂದ 25, ಸ್ಥಾನಗಳನ್ನು ಪಡೆಯುವ ಪರಿಸ್ಥಿತಿ ಇದ್ದರೆ, ಕಾಂಗ್ರೆಸ್ ಪಕ್ಷವು 3 ರಿಂದ 8 ಸ್ಥಾನಗಳನ್ನು ಗೆಲ್ಲಬಹುದೆಂದು ಸಮೀಕ್ಷೆಗಳ ಊಹೆಯಾಗಿದೆ, ಇನ್ನು ಜೆಡಿಎಸ್ ಪಕ್ಷ, 0 ರಿಂದ 3 ಸ್ಥಾನ ಪಡೆಯುವ ನಿರೀಕ್ಷೆಯಿದೆ ಎಂಬ ಮಾಹಿತಿ ಇದೆ..
ಒಟ್ಟಿನಲ್ಲಿ ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಭರ್ಜರಿ ಗೆಲುವು ದೊರೆಯುವ ಸಂಭವ ಇದ್ದು, ಈ ವಿಷಯದಿಂದ ಬಿಜೆಪಿ ಪಾಳಯದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದರೆ, ಕಾಂಗ್ರೆಸ್ಸಿನಲ್ಲಿ ಚಿಂತೆ ಶುರುವಾಗಿದೆ..
ವರದಿ ಪ್ರಕಾಶ ಬಸಪ್ಪ ಕುರಗುಂದ….