ಲೋಕೋಪಯೋಗಿ ಸಚಿವರನ್ನು ಬೇಟಿ ಮಾಡಿದ ವಿಟಿಯು ಕುಲಪತಿಗಳಾದ ವಿದ್ಯಾಶಂಕರ ಎಸ್..
ಬೆಳಗಾವಿ : ನಗರದ ಕುವೆಂಪು ನಗರದಲ್ಲಿ ರಾಜ್ಯದ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೋಳಿ ಅವರನ್ನು, ಬೆಳಗಾವಿಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ವಿದ್ಯಾಶಂಕರ ಎಸ್ ಹಾಗೂ ಅವರ ಸಿಬ್ಬಂದಿಗಳು ಬೇಟಿ ಮಾಡಿದ್ದಾರೆ..
ಈ ವೇಳೆ ಮಾಹಿತಿ ನೀಡಿದ ಕುಲಪತಿಗಳು, ಇದೊಂದು ಸಹಜವಾದ ಭೇಟಿಯಾಗಿದ್ದು, ಸಚಿವರಿಗೆ ಶುಭಾಶಯ ತಿಳಿಸಿ, ಸತ್ಕರಿಸಿ, ಅಭಿನಂದಿಸಿ ಹೋಗಬೇಕೆಂದು ಬಂದಿದ್ದೇವೆ ಎಂದ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಸೇರಿ ಸಚಿವರಿಗೆ ಆತ್ಮೀಯವಾದ ಸತ್ಕಾರವನ್ನು ನೆರವೇರಿಸಿದರು..

ಇದರ ಜೊತೆಗೆ ತಮ್ಮ ವಿತಾವಿ ದಲ್ಲಿ ಇನ್ನೂ ಆಗಬೇಕಾದ ಕೆಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಿ, ರಿಂಗ ರಸ್ತೆಯ ಕೆಲಸವೂ ಬೇಗ ಆದರೆ ಎಲ್ಲರಿಗೂ ಅನುಕೂಲ ಆಗುತ್ತೆ ಎಂಬ ಪ್ರಸ್ತಾವನೆಯನ್ನು ಸಚಿವರ ಗಮನಕ್ಕೆ ತಂದಿರುವದಾಗಿ ಹೇಳಿದರು..
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಸತೀಶ ಜಾರಕಿಹೊಳಿ ಅವರು, ಆದಷ್ಟೂ ಬೇಗ ತಮ್ಮ ಲೋಕೋಪಯೋಗಿ ಇಲಾಖೆಯ ಕಡೆಯಿಂದ, ವಿತಾವಿ ಯಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ, ಶಿಕ್ಷಣ ಪ್ರೇಮಿ ಆದ ಸಚಿವರು ವಿಧ್ಯಾರ್ಥಿಗಳ ಅಭಿವೃದ್ಧಿ ದೃಷ್ಟಿಯಿಂದ ಅನೇಕ ವಿಷಯಗಳನ್ನು ಚರ್ಚಿಸಿದ್ದಾರೆ ಎಂಬ ಮಾಹಿತಿ ನೀಡಿದರು..
ವರದಿ ಪ್ರಕಾಶ ಕುರಗುಂದ..