ವರನಟ ಡಾ ರಾಜಕುಮಾರ ಸಮಾಜಕ್ಕೆ ಮಾದರಿಯಾದ ಆದರ್ಶ ನಟರು…

ವರನಟ ಡಾ ರಾಜಕುಮಾರ ಸಮಾಜಕ್ಕೆ ಮಾದರಿಯಾದ ಆದರ್ಶ ನಟರು..

ಗಂಧದ ಗುಡಿ ಯುವಸಮೂಹಕ್ಕೆ, ವನ್ಯಪ್ರೆಮಕ್ಕೆ ಸಾಕ್ಷಿಯಾದ ಚಿತ್ರ..

ಆಂಧ್ರ ಡಿಸಿಎಂ, ಪವರ್ ಸ್ಟಾರ್ ಪವನ್ ಕಲ್ಯಾಣ್ ಹೇಳಿಕೆ.

ಬೆಂಗಳೂರು : ಕನ್ನಡದ ವರನಟ ಡಾ ರಾಜಕುಮಾರ ಅವರು ನಾಡಿಗೆ ನೀಡಿದ ಕೊಡುಗೆಯ ಬಗ್ಗೆ, ರಾಜ್ಯ ಹೊರರಾಜ್ಯದ, ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಹಲವು ಸಂದರ್ಭಗಳಲ್ಲಿ ಹೇಳಿಕೊಂಡು ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದು ಸರ್ವೇಸಾಮಾನ್ಯವಾಗಿದ್ದು, ಈಗ ತೆಳಗು ಚಿತ್ರರಂಗದ ಸ್ಟೈಲಿಶ್ ಹೀರೋ, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಡಾ ರಾಜ್ ಅವರ ಆದರ್ಶ ಮತ್ತು ನೈತಿಕತೆಯ ಬಗ್ಗೆ ಕೊಂಡಾಡಿದ್ದಾರೆ…

ನಿನ್ನೆ ಬೆಂಗಳೂರು ವಿಧಾನಸೌಧಕ್ಕೆ ಬೇಟಿ ನೀಡಿದ ಅವರು, ರಾಜ್ಯದ ಅರಣ್ಯ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು..

ಸರ್ಕಾರದ ಸಂಪತ್ತುಗಳನ್ನು ಅಧಿಕಾರಿಗಳು ಹೇಗೆ ರಕ್ಷಣೆ ಮಾಡಬೇಕು ಎಂದು ಡಾ ರಾಜಕುಮಾರ ಅವರ ಅಭಿನಯದ ಗಂಧದ ಗುಡಿ ಚಿತ್ರದಲ್ಲಿ ತೋರಿಸಿದ್ದಾರೆ, ಆ ಚಿತ್ರ, ಅವರ ಅಭಿನಯ ನೋಡಿದರೆ, ಪ್ರತಿಯೊಬ್ಬರೂ ಸಮರ್ಥ ನಿಷ್ಠಾವಂತ ಅಧಿಕಾರಿ ಆಗಬೇಕು ಎಂಬ ಸ್ಪೂರ್ತಿ ಮೂಡುತ್ತದೆ, ನಾಡಿನ ಅರಣ್ಯ ಸಂಪತ್ತನ್ನು ರಕ್ಷಿಸಲೇಬೇಕೆಂಬ ದೃಢಸಂಕಲ್ಪ ಅಧಿಕಾರಿಗಳಲ್ಲಿ ಅಷ್ಟೇ ಅಲ್ಲದೇ ಸಾಮಾನ್ಯ ಜನರಲ್ಲಿಯೂ ಮೂಡುತ್ತದೆ ಎಂದಿದ್ದಾರೆ.

ಅಂತಹ ಸಾಮಾಜಿಕ ಕಳಕಳಿಯ, ಜನರಿಗೆ ಉತ್ತಮ ಸಂದೇಶ ಸಾರುವ, ಸರ್ಕಾರದ ಆಸ್ತಿಗಳನ್ನು ರಕ್ಷಿಸಿ, ಮಾದರಿಯಾಗುವಂತಹ ಚಿತ್ರಗಳನ್ನು ಮಾಡಿ ಇಂದಿಗೂ, ಎಂದಿಗೂ ರಾಜಕುಮಾರ ಅವರು ಹಾಗೂ ಗಂಧದಗುಡಿ ಅಂತಹ ಚಿತ್ರಗಳು ನಮಗೆ ಆದರ್ಶ ಆಗುತ್ತವೆ ಎಂದಿದ್ದಾರೆ..

ನಾಯಕರೆಂದರೆ ರಾಜಕುಮಾರರಂತೆ ಇರಬೇಕು ಎಂದು ಹೇಳಿದ ಅವರು ಇಂದಿನ ಚಿತ್ರಗಳು, ಚಿತ್ರಗಳ ನಾಯಕರು, ಹಾಗೂ ಅವರು ನೀಡುವಂತ ಸಾಮಾಜಿಕ ಸಂದೇಶಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಅರಣ್ಯ ಸಂಪತ್ತನ್ನು ಲೂಟಿ ಮಾಡಿ, ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ನಾಯಕರು ಬೆಳೆದಿದ್ದಾರೆ, ಇವರು ಯುವಸಮುಹಕ್ಕೆ, ಸಮಾಜಕ್ಕೆ ಯಾವ ಸಂದೇಶ ಕೊಡುತ್ತಾರೆ? ಕಾನೂನುಬಾಹಿರ, ಅಕ್ರಮ ಕೆಲಸ ಮಾಡುವವನನ್ನು ನಾಯಕ ಎಂದುಕೊಂಡರೆ, ಅದನ್ನು ಅನುಸರಿಸಿದರೆ ನಮ್ಮ ಸಮಾಜ ಎತ್ತ ಸಾಗುತ್ತದೆ? ಎಂಬ ಪ್ರಶ್ನೆ ಮಾಡಿದರು..

ಸಿನಿಮಾ ಮನರಂಜನೆಗೆ ಮಾಡುತ್ತಾರೆ ಸರಿ, ಆದರೆ ಅದಕ್ಕೊಂದು ಸಾಮಾಜಿಕ ಜವಾಬ್ದಾರಿ ಇರಬೇಕಾಗುತ್ತದೆ, ಸಮಾಜಕ್ಕೆ ಇಷ್ಟೊಂದು ತಪ್ಪು ಸಂದೇಶ ನೀಡುವಷ್ಟು ಚಿತ್ರ ಸಂಸ್ಕೃತಿ ಬದಲಾಗಬಾರದು ಎಂದು ಕಿವಿಮಾತು ಹೇಳಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..