ವಸತಿ ಸೌಲಭ್ಯ ಹಾಗೂ ಶೈಕ್ಷಣಿಕ ಸಾಲಕ್ಕೆ ಪ್ರಾಮುಖ್ಯತೆ ನೀಡುತ್ತೇವೆ..

ವಸತಿ ಸೌಲಭ್ಯ ಹಾಗೂ ಶೈಕ್ಷಣಿಕ ಸಾಲಕ್ಕೆ ಪ್ರಾಮುಖ್ಯತೆ ನೀಡುತ್ತೇವೆ..

ಸೊಸೈಟಿಯ ಸದಸ್ಯ ನೌಕರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ..

ಸಾತಕ್ಕಾ ತಳವಾರ, ಅಧ್ಯಕ್ಷರು, ಪಾಲಿಕೆ ನೌಕರರ ಕೋ ಆಫ್ ಕ್ರೆಡಿಟ್ ಸೊಸೈಟಿ ಬೆಳಗಾವಿ.

ಬೆಳಗಾವಿ : ಮಹಾನಗರ ಪಾಲಿಕೆಯ ನೌಕರರು ಸದಸ್ಯರಾಗಿರುವ ಕೋ ಆಫ್ ಕ್ರೆಡಿಟ್ ಸೊಸೈಟಿಯಲ್ಲಿ ಸದಸ್ಯರ ವಸತಿ ಸೌಲಭ್ಯಕ್ಕಾಗಿ ಹಾಗೂ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಾಲವನ್ನು ನೀಡುವ ಕಡೆಗೆ ಹೆಚ್ಚು ಒತ್ತು ನೀಡುತ್ತೇವೆ ಎಂದು ಸೊಸೈಟಿಯ ನೂತನ ಅಧ್ಯಕ್ಷರಾದ ಸಾತಕ್ಕಾ ತಳವಾರ ಹೇಳಿದ್ದಾರೆ.

ಇದೇ ತಿಂಗಳು 17ರಂದು ನಡೆದ ಸೊಸೈಟಿಯ ಚುನಾವಣೆಯಲ್ಲಿ ತಮ್ಮ ಬಣ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ಮಂಗಳವಾರ ದಿನಾಂಕ 26/08/2025 ರಂದು ಅಧ್ಯಕ್ಷರಾಗಿ ಸಾತಕ್ಕಾ ತಳವಾರ ಹಾಗೂ ಉಪಾಧ್ಯಕ್ಷರಾಗಿ ಆನಂದ ಪಿಂಪರೆ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಅಧ್ಯಕ್ಷತೆ ವಹಿಸಿಕೊಂಡ ನಂತರ ಸೊಸೈಟಿಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡ ಸಾತಕ್ಕ ತಳವಾರ ಅವರು, ವಸತಿರಹಿತ ಸದಸ್ಯರಿಗೆ ವಸತಿಗಳ ನಿರ್ಮಾಣಕ್ಕಾಗಿ ಹಾಗೂ ಸದಸ್ಯರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶೈಕ್ಷಣಿಕ ಸಾಲವನ್ನು ನೀಡುವದು ನಮ್ಮ ಪ್ರಮುಖ ಆದ್ಯತೆ ಆಗಿದ್ದು, ಜೊತೆಗೆ ಬರುವ ದಿನಗಳಲ್ಲಿ ಅತೀ ಕಡಿಮೆ ಬಡ್ಡಿ ದರದಲ್ಲಿ ಸದಸ್ಯರಿಗೆ ಸಾಲ ಸೌಲಭ್ಯ ನೀಡಬೇಕೆಂಬ ಯೋಜನೆಯಿದೆ ಎಂದಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..