“ವಾಯು” ಜೀರೋ ಕಮಿಷನನಲ್ಲಿ ಆಹಾರ ಪೂರೈಕೆ ಮಾಡುವ ದೇಶದ ಏಕೈಕ ಅಪ್ಲಿಕೇಶನ್..

ವಾಯು” ಜೀರೋ ಕಮಿಷನನಲ್ಲಿ ಆಹಾರ ಪೂರೈಕೆ ಮಾಡುವ ದೇಶದ ಏಕೈಕ ಅಪ್ಲಿಕೇಶನ್..

ವಾಯು ಮೆಟ್ರೋಗಳನ್ನು ಮೀರಿ ವಿಸ್ತರಣೆಯ ಪ್ರಕಟಣೆ..

ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಹಾದಿಯಲ್ಲಿ ವಾಯು..

ಬೆಳಗಾವಿ : ಭಾರತದ ಪ್ರಥಮ ಹಾಗೂ ಏಕೈಕ ಶೂನ್ಯ ಕಮೀಷನ್ ಫುಡ್ ಡೆಲಿವರಿ ಆ್ಯಪ್ ಆಗಿರುವ `ವಾಯು’, ತನ್ನ ಕಾರ್ಯವ್ಯಾಪ್ತಿಯನ್ನು ಟೈಯರ್-2 ನಗರಗಳಿಗೂ ವಿಸ್ತರಿಸುವುದಾಗಿ ಪ್ರಕಟಿಸಿದೆ.

ಬೆಳಗಾವಿ ಪೈ ರೆಸಾರ್ಟ್ ನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಈ ವಿಷಯ ಪ್ರಕಟಿಸಲಾಯಿತು.

ಈ ಹೊಸ ಕ್ರಮವು ಸ್ಥಳೀಯ ರೆಸ್ಟೋರೆಂಟ್ ಗಳಿಗೆ ವೆಚ್ಚ-ಉಳಿಸುವ, ತಂತ್ರಜ್ಞಾನ-ಪ್ರೇರಿತ ಪರಿಹಾರಗಳ ಮೂಲಕ ಹಣಕಾಸು ಹೊರೆ ಇಲ್ಲದೆ ಸುಸ್ಥಿರ ಪ್ರಗತಿಯನ್ನು ನೀಡುವ ಗುರಿ ಹೊಂದಿದೆ.
ವಾಯು’ವಿನ ಸಹ- ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮಂದರ್ ಲಾಂಡೆ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ-ಸಂಸ್ಥಾಪಕರಾದ ಅನಿರುಧಾ ಕೋಟ್ಗಿರೆ, ಬೆಳಗಾವಿ ಹೊಟೆಲ್ ಮಾಲಿಕರ ಸಂಘದ ಅಧ್ಯಕ್ಷ ಅಜಯ್ ಪೈ ಹಾಗೂ ಬೆಳಗಾವಿ ನಗರದ `ವಾಯು’ ಫ್ರಾಂಚೈಸಿ ಮತ್ತು ನಮಸ್ತೆ ಡೆಲಿವರಿ ಮಾಲಿಕರಾದ ಪ್ರಶಾದ್ ವಾಂಟಮೌರಿ ಅಧಿಕೃತವಾಗಿ ಈ ವಿಷಯವನ್ನು ಪ್ರಕಟಿಸಿದರು.

ಮಾತನಾಡಿದ ಮಂದಾರ್ ಲಾಂಡೆ ಮತ್ತು ಅನಿರುಧಾ ಕೋಟ್ಗಿರೆ ಅವರು, 2ನೇ ಶ್ರೇಣಿಯ ನಗರಗಳಲ್ಲಿ ಆಹಾರ ವಿತರಣಾ ವ್ಯವಸ್ಥೆಯ ಬದಲಾವಣೆಗೆ `ವಾಯು’ವಿನ ಬದ್ಧತೆಯನ್ನು ಒತ್ತಿ ಹೇಳಿದರು.

ಸಣ್ಣ ಮಾರುಕಟ್ಟೆಗಳಲ್ಲಿ ವಿತರಣಾ ಸಹಭಾಗಿಗಳ ಕೊರತೆಯನ್ನು ಗಮನಿಸಿ ಸುಸಂಘಟಿತ ಹಾಗೂ ಪರಿಣಾಮಕಾರಿ ಕಾರ್ಯಜಾಲದ ಮೂಲಕ ಹೋಟೆಲ್ ಮತ್ತು ಇ- ಕಾಮರ್ಸ್ ವೇದಿಕೆಗಳೂ ಸೇರಿದಂತೆ ಸ್ಥಳೀಯ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ನೀಡಲು `ವಾಯು’ ಉದ್ದೇಶಿಸಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚುವರಿಯಾಗಿ ಶೇ.2 ರಷ್ಟು ಕಮೀಷನ್ ದರ ಏರಿಸಿರುವ ಸ್ವಿಗ್ಗಿ ಮತ್ತು ಝೊಮಾಟೋ ಗಳಿಂದಾಗಿ ಹೋಟೆಲ್ ಉದ್ಯಮಿಗಳ ಆರ್ಥಿಕ ಹೊರೆಯು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ನಮ್ಮ ನಗರಗಳಲ್ಲಿ ವಾಯು’ವಿನ ಕಾರ್ಯಾರಂಭದಿಂದ , ನಮಗೆ ಅತ್ಯಗತ್ಯವಾಗಿದ್ದ ಪರ್ಯಾಯ ವ್ಯವಸ್ಥೆ ಲಭಿಸಿದಂತಾಗಿದೆ. ಒಎನ್ ಡಿಸಿ ಜೊತೆ ಶೂನ್ಯ ಕಮೀಷನ್ ಪಾಲುದಾರಿಕೆ ಮೂಲಕ, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಹಾಗೂ ಸಂಪಾದನೆಯ ಹೆಚ್ಚಿನ ಭಾಗವನ್ನು ಉಳಿಸಿಕೊಳ್ಳುವ ಅವಕಾಶವನ್ನುವಾಯು’ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ ಹೊಟೆಲ್ ಮಾಲಿಕರ ಸಂಘದ ಅಧ್ಯಕ್ಷ ಅಜಯ್ ಪೈ, `ವಾಯು’ ಜೊತೆ ಕೈಜೋಡಿಸಿ, ತಮ್ಮ ಉದ್ಯಮವನ್ನು ತಮ್ಮ ಕೈಯಲ್ಲೇ ಹಿಡಿದಿಟ್ಟುಕೊಳ್ಳುವ ಅವಕಾಶವನ್ನು ಪಡೆದುಕೊಳ್ಳುವಂತೆ ಹೊಟೆಲ್ ಉದ್ಯಮಿಗಳಿಗೆ ಕರೆ ನೀಡಿದರು.

ವೆಚ್ಚ ನಿರ್ವಹಣೆ ಮತ್ತು ತಂತ್ರಜ್ಞಾನ ಆಧಾರಿತ ಮಾರ್ಗೋಪಾಯಗಳೊಂದಿಗೆ ಸ್ಥಳೀಯ ರೆಸ್ಟೋರೆಂಟ್ ಗಳನ್ನು ಸದೃಢಗೊಳಿಸುವುದರ ಜೊತೆಗೆ ಯಾವುದೇ ಆರ್ಥಿಕ ಹೊರೆ ಇಲ್ಲದೆ ನಿರಂತರ ಬೆಳವಣಿಗೆಯನ್ನು ಖಾತ್ರಿಗೊಳಿಸುವ ಉದ್ದೇಶದಿಂದ ಈ ಹೊಸ ಉಪಕ್ರಮ ಕೈಗೊಳ್ಳಲಾಗಿದೆ.