ವಾರ್ಡ ಸಂಖ್ಯೆ 15ರಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅಭಯ ಪಾಟೀಲ್..

ವಾರ್ಡ ಸಂಖ್ಯೆ 15ರಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅಭಯ ಪಾಟೀಲ್..

ನಗರ ಸೇವಕಿ ನೇತ್ರಾವತಿ ಭಾಗವತ ಅವರಿಂದ ಮುಂದುವರೆದ ಅಭಿವೃದ್ಧಿ ಕಾರ್ಯ.

ಬೆಳಗಾವಿ : ನಗರದ ವಾರ್ಡ ಸಂಖ್ಯೆ 15 ರ ಮಹಾದ್ವಾರ ರಸ್ತೆಯ ಮೂರನೇ ಕ್ರಾಸ್ ನಲ್ಲಿ ರಸ್ತೆ ಕಾಮಗಾರಿ ಹಾಗೂ ಕಪಿಲೇಶ್ವರ ಕಾಲೋನಿಯ ಮುಖ್ಯ ರಸ್ತೆಯಲ್ಲಿ ಪೆವರ್ಸ್ ಅಳವಡಿಸುವ ಕಾರ್ಯ ಜರುಗಿದ್ದು, ಅದರ ಉದ್ಘಾಟನೆಯನ್ನು ಬೆಳಗಾವಿಯ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ ಅವರು ನೆರವೇರಿಸಿದ್ದಾರೆ.

ವಾರ್ಡ ಸಂಖ್ಯೆ 15ರ ನಗರ ಸೇವಕರಾದ ನೇತ್ರಾವತಿ ಭಾಗವತ ಅವರು ಈಗಾಗಲೇ ತಮ್ಮ ವಾರ್ಡಿನಲ್ಲಿ ಜನಪರವಾದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಜನತೆಯ ಅನುಕೂಲಕ್ಕಾಗಿ ವಿವಿಧ ಕಾಮಗಾರಿಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಮಹಾನಗರ ಪಾಲಿಕೆಯ ವಿಶೇಷ ಅನುದಾನದಲ್ಲಿ ಈ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಚಲನೆಯ ಸಂದರ್ಭದಲ್ಲಿ ಸಮಾಜ ಸೇವಕ ವಿನೋದ ಭಾಗವತ, ಸ್ಥಳೀಯರು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ.