ವಾರ್ಡ ಸಂಖ್ಯೆ 2ರಲ್ಲಿಯ ತೆರಿಗೆ ವಂಚನೆಯ ವ್ಯವಹಾರ..

ವಾರ್ಡ ಸಂಖ್ಯೆ 2ರಲ್ಲಿಯ ತೆರಿಗೆ ವಂಚನೆಯ ವ್ಯವಹಾರ..

ಮೂರು ದಿನಗಳ ಕಾಲಮಿತಿ ಇದ್ದರೂ, 19 ದಿನಗಳಾದರೂ ತಣ್ಣಗೆ ಕುಳಿತ ತನಿಖಾ ತಂಡ..

ಉಪ ಆಯುಕ್ತರ (ಕಂದಾಯ) ಆದೇಶಕ್ಕೂ ಬೆಲೆ ಇಲ್ಲವೇ?

ಪರಿಶೀಲನಾ ವರದಿ ನೀಡದಿರುವ ಒಳಮರ್ಮವೇನು??

ಬೆಳಗಾವಿ : ಪಾಲಿಕೆಯ ವ್ಯಾಪ್ತಿಗೆ ಒಳಪಡುವ ವಾರ್ಡ ಸಂಖ್ಯೆ ಎರಡರಲ್ಲಿ, ಒಂದು ವಾಣಿಜ್ಯ ಉದ್ದಿಮೆ ಕಟ್ಟಡದ ತೆರಿಗೆ ಸಂಗ್ರಹದಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸವಾಗಿದ್ದು ಇದರಿಂದ ಪಾಲಿಕೆಗೆ ಸುಮಾರು 70 ಲಕ್ಷದಷ್ಟು (ಆದಾಯ) ತೆರಿಗೆ ನಷ್ಟ ಆಗಿರಬಹುದೆಂದು ನಮ್ಮ “ಸಮಾಜಮುಖಿ” ಸುದ್ದಿಜಾಲದಲ್ಲಿ ದಿನಾಂಕ 13/09/2024 ರಂದು ಸುದ್ದಿ ಪ್ರಕಟ ಮಾಡಲಾಗಿತ್ತು..

ಸುದ್ದಿಗೆ ಸ್ಪಂದನೆ ನೀಡಿದ ಪಾಲಿಕೆಯ ಉಪ ಆಯುಕ್ತರು (ಕಂದಾಯ) ಸದರಿ ಉದ್ದಿಮೆ ಕಟ್ಟಡದಲ್ಲಿ ಸರಿಯಾದ ತೆರಿಗೆ ಸಂಗ್ರಹ ಆಗಿದೆಯೇ? ಪಾಲಿಕೆಗೆ ಬರಬೇಕಾದ ತೆರಿಗೆಯಲ್ಲಿ ವ್ಯತ್ಯಾಸ ನಿಜಕ್ಕೂ ಆಗಿದೆಯೇ? ಎಂದು ತಿಳಿಯಲು, ಕಟ್ಟಡದ ಆಸ್ತಿ ತೆರಿಗೆ ನಿರ್ಧರಣೆಯನ್ನು ಮರು ಪರಿಶೀಲನೆ ಹಾಗೂ ಆಸ್ತಿಯ ಮರು ಅಳತೆ ಮಾಡಿ ಮೂರು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಒಂದು ಪರಿಶೀಲನಾ ತಂಡವನ್ನು 20/09/2024ರಂದು ರಚನೆ ಮಾಡಲಾಗಿತ್ತು..

ಪರಿಶೀಲನಾ ತಂಡದ ಮುಖ್ಯಸ್ಥರನ್ನಾಗಿ ಕಂದಾಯ ಅಧಿಕಾರಿ ಡಿ ಜಿ ಕೋರಿ ಅವರನ್ನು, ಸದಸ್ಯರನ್ನಾಗಿ ಪಿ ಬಿ ಮೇತ್ರಿ, ಯಲ್ಲೇಶ ಬಚ್ಚಲಪುರಿ, ರಮೇಶ ಹಿರೇಮಠ, ಎ ಡಿ ದೇಸಾಯಿ ಅವರನ್ನು ನೇಮಕ ಮಾಡಿದ್ದು, 3 ದಿನಗಳಲ್ಲಿ ನೀಡಬೇಕಾದ ವರದಿಯನ್ನು 19 ದಿನಗಳಾದರೂ ನೀಡಿಲ್ಲ, ಇದು ನಮಗೂ ಹಾಗೂ ಸಾರ್ವಜನಿಕರ ಸಂಶಯಕ್ಕೆ ಮತ್ತಷ್ಟು ದಾರಿಮಾಡಿಕೊಟ್ಟಿದ್ದು, ಪಾಲಿಕೆಗೆ ಬರಬೇಕಾದ ಆದಾಯದಲ್ಲಿ ನಿಜವಾಗಲೂ ನಷ್ಟವಾಗಿದೆ ಎಂಬ ಅನುಮಾನ ಮತ್ತಷ್ಟು ಗಾಢವಾಗಿದೆ.

ಅಷ್ಟಕ್ಕೂ ಈ ಅಧಿಕಾರಿಗಳು ಪರಿಶೀಲನೆ ಮಾಡಿ ವರದಿ ನೀಡುವಲ್ಲಿ ಹಿಂದೇಟು ಹಾಕಿರುವ ಮರ್ಮವೇನು?? ಒಂದು ವೇಳೆ ಈ ಕಂದಾಯ ಸದಸ್ಯರೂ ಯಾರಾದರೂ ಈ ಅವ್ಯವಹಾರದಲ್ಲಿ ಇವರು ಪಾಲುದಾರರೇ ಎಂಬ ಸಂಶಯ ಉಂಟಾಗುತ್ತಿದೆ.

ಕಂದಾಯ ಉಪ ಆಯುಕ್ತರು ಆದೇಶಕ್ಕೂ ಬೆಲೆ ನೀಡದೇ, ಸುದ್ದಿ ಮಾಡಿದ ನಾವೇ ಹೋಗಿ ತಂಡದ ಅಧಿಕಾರಿ ಕೋರಿ ಅವರನ್ನು ಕೇಳಿದಾಗ ಇಂದು ಮಾಡುತ್ತೇವೆ ನಾಳೆ ಮಾಡುತ್ತೇವೆ ಎಂದು ಹೇಳಿ, ಇಲ್ಲಿವರೆಗೂ ಪರಿಶೀಲನೆ ಮಾಡಿ ವರದಿ ನೀಡಿಲ್ಲದಿರುವದು ಇವರ ಬೇಜವಾಬ್ದಾರಿ ಸಾಕ್ಷಿಯಾಗಿದೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..