ವಾರ್ಡ 9ರ ನಗರವಾಸಿಗಳನ್ನು ಅನಾರೋಗ್ಯಕ್ಕೆ ತಳ್ಳುತ್ತಿರುವ ಬೆಳಗಾವಿ ಪಾಲಿಕೆ..

ನಗರವಾಸಿಗಳನ್ನು ಅನಾರೋಗ್ಯಕ್ಕೆ ತಳ್ಳುತ್ತಿರುವ ಬೆಳಗಾವಿ ಪಾಲಿಕೆ..

ಬೆಟ್ಟದಷ್ಟು ಖರ್ಚು ತೋರಿಸಿ ಕಣ್ಮುಚ್ಚಿ ಕುಳಿತ ಆರೋಗ್ಯ ವಿಭಾಗ..

ಮಹಾಪೌರರೆ, ನಗರ ಸೇವಕರೆ, ಆಯುಕ್ತರೆ ಸ್ವಲ್ಪ ಸಮಯ ಇಲ್ಲಿ ಬಂದು ಇದ್ದು ನೋಡಿ..

ನಾಂದ್ರೆ, ಕಲಾದಗಿ, ಅಭಿಷೇಕ ಮುಗ್ದ ಜನರ ಶಾಪ ಸಾಮಾನ್ಯ ಇರೋಲ್ಲ..

ಬೆಳಗಾವಿ : ನಾವು ಉತ್ತಮ, ಅಭಿವೃದ್ಧಿಪರ ಆಡಳಿತ ನಡೆಸುತ್ತಿದ್ದೇವೆ ಎಂದು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯ ನಿಜ ಸ್ವರೂಪ ನಗರದ ಜನವಸತಿ ಪ್ರದೇಶದಲ್ಲಿ ಬೇರೇನೇ ಇರುತ್ತದೆ.

ಬೆಳಗಾವಿ ನಗರದ ಕೆಂದ್ರಸ್ಥಾನದಲ್ಲಿ ಇರುವ ವಾರ್ಡ ಸಂಖ್ಯೆ 9ರ ಪೂಲಬಾಗಲ್ಲಿಯ, ಮಾಜಿ ನಗರ ಸೇವಕಿಯವರಾದ ಚೋಪಡೆ ಅವರ ಮನೆಯ ಹಿಂಭಾಗದ ಜನವಸತಿ ಪ್ರದೇಶದಲ್ಲಿನ ಜನರ ಜೀವನ ನಿತ್ಯ ನರಕವಾಗಿದೆ, ಕೆಲ ದಿನಗಳಿಂದ ಓಣಿಯ ಎರಡೂ ಬದಿಯ ಚರಂಡಿಗಳು ತುಂಬಿದ್ದು, ಅಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್, ಘಣ ತ್ಯಾಜ್ಯಗಳು ತುಂಬಿಕೊಂಡು ಆ ಓಣಿಯೆಲ್ಲಾ ಗಬ್ಬು ವಾಸನೆ ಹರಡುತ್ತಿದ್ದರೂ, ಯಾವ ನಗರ ಸೇವಕರೂ ಪಾಲಿಕೆ ಸಿಬ್ಬಂದಿಗಳೂ ಅತ್ತ ಗಮನ ಹರಿಸಿಲ್ಲ.

ಎರಡೂ ಬದಿಯ ಚರಂಡಿಗಳು ಘನ ತ್ಯಾಜ್ಯಗಳಿಂದ ತುಂಬಿದ್ದು, ಗಟ್ಟಿಯಾಗಿ ಬಂದಾಗಿ ಬಿಟ್ಟಿವೆ, ಇದರಿಂದ ಅಕ್ಕಪಕ್ಕದ ಮನೆಗಳಲ್ಲಿ ಹಾಗೂ ಅಲ್ಲಿ ಸಂಚರಿಸುವ ಸಾರ್ವಜನಿಕರು ಈ ತುಂಬಿದ ಅನಾರೋಗ್ಯಕರ ಚರಂಡಿಯ ಕೆಟ್ಟ ವಾಸನೆಯಿಂದ ನಿತ್ಯ ನರಕ ಅನುಭವಿಸುತ್ತಿದ್ದಾರೆ, ಅಲ್ಲಿ ನಿಲ್ಲಲೂ ಕೂಡಾ ಆಗದ ವಾಸನೆ ಒಂದು ಕಡೆಯಾದರೆ, ಅದರಿಂದ ಸೊಳ್ಳೆಗಳು, ಇತರ ಕ್ರಿಮಿಗಳು ಹೆಚ್ಚಾಗಿ ಅಲ್ಲಿರುವ ಸಣ್ಣ ಮಕ್ಕಳ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುವಂತ ಪರಿಸ್ಥಿತಿ ನಿರ್ಮಾಣವಾಗಿದೆ..

ಇಷ್ಟಾದರೂ ಕೂಡಾ ಅಲ್ಲಿ ಸಂಬಂಧಪಟ್ಟ ನಗರ ಸೇವಕನಾಗಲಿ, ಆರೋಗ್ಯ ಅಧಿಕಾರಿಯಾಗಲಿ ಬಂದು ಜನರ ಸಮಸ್ಯೆ ಬಗೆಹರಿಸುವ ಯೋಚನೆ ಕೂಡಾ ಮಾಡಿಲ್ಲ, ಒಂದು ವೇಳೆ ಅವರು ಇಲ್ಲಿ ಬಂದರೆ, ಈ ಸ್ಥಳದಲ್ಲಿ ಬಹಳ ಸಮಯ ನಿಲ್ಲುವುದೇ ಇಲ್ಲಾ, ಅಂತಹ ಅನಾರೋಗ್ಯಕರ ಸ್ಥಿತಿ ಇಲ್ಲಿದೆ, ಜನರಿಂದ ಎಲ್ಲಾ ಪಡೆದು, ಜನತೆಗೆ ಕನಿಷ್ಠ ಮೂಲಭೂತ ಸೌಲಭ್ಯ ನೀಡದ ಈ ಪಾಲಿಕೆಯ ಆಡಳಿತಕ್ಕೆ ಏನು ಹೇಳಬೇಕು? ಇಂತಹ ಅನಾರೋಗ್ಯ ಸ್ಥಿತಿಗೆ ಕಾರಣರಾದ ಪಾಲಿಕೆ ಸಿಬ್ಬಂದಿಗಳ ಮನೆ, ಅವರು ವಾಸಿಸುವ ಸ್ಥಳ ಹೀಗೆ ಇವೆಯಾ? ಇಂತಹ ಅಧಿಕಾರಿಗಳಿಗೆ ಬಡ, ಮದ್ಯಮ ವರ್ಗದ ಜನರ ಶಾಪ ತಟ್ಟದೇ ಇರುತ್ತದೆಯೇ?

ಕೆಟ್ಟ ವಾಸನೆಯ ಕಲುಷಿತ ಈ ಸ್ಥಳಕ್ಕೆ ಪಾಲಿಕೆಯ ಮಹಾಪೌರರು, ನಗರ ಸೇವಕರು, ಆಯುಕ್ತರು, ಅಧಿಕಾರಿಗಳು ಇಲ್ಲಿಗೆ ಬಂದು ಒಂದೆರಡು ಗಂಟೆ ನಿಲ್ಲಬೇಕು, ಆಗ ಸಾಮಾನ್ಯ ನಗರವಾಸಿಗಳ ಕಷ್ಟ ಏನು ಹಾಗೂ ತಮ್ಮ ಪಾಲಿಕೆ ಹೇಗೆ ಕೆಲಸ ಮಾಡುತ್ತಿದೆ ಎಂದು ತಮಗೆ ಸರಿಯಾಗಿ ತಿಳಿಯುತ್ತದೆ.

ಮಹಾನಗರ ಜನತೆಯ ಆರೋಗ್ಯದ ದೃಷ್ಟಿಯಿಂದ, ನಗರದ ಸ್ವಚ್ಛತೆಯ ಸಲುವಾಗಿ ಪ್ರತಿ ತಿಂಗಳು ಹತ್ತಾರು ಲಕ್ಷ ಅನುದಾನ ಬಳಕೆ ಮಾಡುತ್ತಿರಲ್ಲಾ, ಎಲ್ಲಿ ಇದೆ ಸ್ವಚ್ಛತೆ? ಎಲ್ಲಿ ನಿಮ್ಮ ಪೌರ ಕಾರ್ಮಿಕರು? ಇಲ್ಲಿಯ ವಾತಾವರಣ ನೋಡಿದರೆ ಪಾಲಿಕೆಯ ಇಂತಹ ಬೇಜವಾಬ್ದಾರಿಯುತ ದುರಾಡಳಿತದಿಂದಲೇ ಜನರಿಗೆ ಆರೋಗ್ಯ ಸಮಸ್ಯ ಆಗುತ್ತಿದೆಯಾ?ಎಂಬ ಪ್ರಶ್ನೆ ಮೂಡುತ್ತಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..