ವಾಲ್ಮಿ, ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯಿಂದ ರೈತೋಪಕಾರಿ ಅನ್ವೇಷಣೆ…

ವಾಲ್ಮಿ, ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯಿಂದ ರೈತೋಪಕಾರಿ ಅನ್ವೇಷಣೆ..

ಸೂಕ್ಷ್ಮ ನೀರಾವರಿ ಪದ್ಧತಿ, ಭವಿಷ್ಯದ ದಿಕ್ಸೂಚಿ..

ರಾಜೇಶ್ ಅಮ್ಮನಭಾವಿ ಸ್ಪಷ್ಟನೆ..

ಬೆಳಗಾವಿ : ಸೋಮವಾರ ನೆಹರು ನಗರದ ಜೆಎನ್ಎಂಸಿ ಜಿರಗೆ ಸಭಾಭವನದಲ್ಲಿ ಎರಡು ದಿನಗಳ ಕಾಲ ನಡೆದ ಸಿವಿಲ್ ಇಂಜಿನಿಯರಿಂಗ್ ರಾಷ್ಟ್ರೀಯ ಸಮಾವೇಶದಲ್ಲಿ, ನೀರಿನ ಉಳಿಕೆ ಹಾಗೂ ಸದ್ಬಳಕೆ ವಿಷಯದ ಕುರಿತಾಗಿ, ಸುದ್ದಿಗೋಷ್ಟಿ ನಡೆಸಿದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ(ವಾಲ್ಮಿ) ನಿರ್ದೇಶಕರು ಸಂಸ್ಥೆಯ ನವೀನ ಆವಿಷ್ಕಾರದ ಬಗ್ಗೆ ಮಾಹಿತಿ ನೀಡಿದರು..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಲ್ಮಿ ಸಂಸ್ಥೆಯ ನಿರ್ದೇಶಕರಾದ ರಾಜೇಶ್ ಅಮ್ಮನಭಾವಿ ಅವರು, ಧಾರವಾಡದ ಜಲ ಮತ್ತು ನೆಲ ನಿರ್ವಹಣೆಯ ಸಂಸ್ಥೆ ವಾಲ್ಮಿ ಎಂಬುವದು ರಾಜ್ಯ ರೈತರಿಗೆ ತಮ್ಮ ಕೃಷಿ ಕಾರ್ಯಕ್ಕೆ ಅನುಕೂಲ ಆಗುವ ಆಧುನಿಕ ತಂತ್ರಜ್ಞಾನ ಅಳವಡಿಸಿದ ಹೊಸ ಸೂಕ್ಷ್ಮ ನೀರಾವರಿ ಪದ್ಧತಿಯ ಆವಿಷ್ಕಾರ ಮಾಡಿದ್ದು ಈ ರಾಷ್ಟ್ರೀಯ ಎಂಜಿನಿಯರ್ಸ್ ಸಮಾವೇಶದಲ್ಲಿ ಅದನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ರೈತರು ಆ ಯಂತ್ರದ ಪ್ರಯೋಜನೆಯನ್ನು ಪಡೆಯಬೇಕು ಎಂಬ ಮನವಿ ಮಾಡಿದರು..

ಧಾರವಾಡದಲ್ಲಿ ಇರುವ ವಾಲ್ಮಿ ಸಂಸ್ಥೆಯು ಈಗಾಗಲೇ ಸುಮಾರು 1ಲಕ್ಷಕ್ಕಿಂತ ಅಧಿಕ ರೈತರಿಗೆ ಆಧುನಿಕ ಕೃಷಿಯ ಬಗ್ಗೆ ಮಾಹಿತಿ ನೀಡಿದ್ದು, ರೈತಾಪಿ ವರ್ಗಕ್ಕೆ ಅನುಕೂಲ ಆಗುವಂತೆ ಹತ್ತು ಹಲವು ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಹಾಕಿಕೊಂಡಿದೆ ಎಂದರು..
ಇಂದು ನೀರಿನ ಸರಬರಾಜು ಹಾಗೂ ಬೇಡಿಕೆಗಳ ಸ್ಥಿತಿಗತಿಗಳು ಬದಲಾಗಿದೆ, ಇಂತಹ ಸಮಯದಲ್ಲಿ ನೂತನ ತಂತ್ರಜ್ಞಾನ ಬೇಕೆ ಬೇಕಾಗಿದೆ,

ಇನ್ನು ಪ್ರದರ್ಶನಕ್ಕೆ ಇಟ್ಟಿರುವ ಸೂಕ್ಷ್ಮ ನೀರಾವರಿ ಪದ್ಧತಿಯು ವಾಲ್ಮಿ ಸಂಸ್ಥೆಯ ಪ್ರಾಂಗಣದಲ್ಲಿ ಏರ್ಪಡಿಸಲಾದ ನೀರಾವರಿ ಯೋಜನೆಯಾಗಿದ್ದು. ಇದರ ಅಡಿಯಲ್ಲಿ ಮುಂಗಾರಿನಲ್ಲಿ ವಿವಿಧ ಬಗೆಯ ಬೆಳೆಗಳ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು,

ಹತ್ತಿ, ತೋಗರೆ, ಶೇಂಗಾ, ಗೋವಿನ ಜೋಳ, ಭತ್ತ, ತರಕಾರಿಗಳಾದ ಟೊಮೆಟೊ, ಮೆಣಸಿನಕಾಯಿ, ಹೀರೆಕಾಯಿ ಸೌತೆಕಾಯಿ, ಕ್ಯಾಬಿಜ್ , ಅವರೆಕಾಯಿ, ಬೀನ್ಸ್ ಹಾಗೂ ಬದನೆ , ವಿವಿಧ ಜಾತಿಗಳ ಹೂಗಳನ್ನು ಸ್ವಯಂ ಚಾಲಿತ ಸೂಕ್ಷ್ಮ ನೀರಾವರಿ ಅಡಿ ಬೆಳೆಯಲಾಗಿದೆ ಎಂಬ ಮಾಹಿತಿ ನೀಡಿದ ಅವರು, ರಾಜ್ಯದ ಕರದಾತರ ಅಮೂಲ್ಯ ಬಂಡವಾಳ ಹೂಡಿಕೆಯನ್ನು ಸಾಫಲ್ಯಗೊಳಿಸಲು ಈ ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಯಶಸ್ವಿಗೊಳಿಸಬೇಕು ಎಂದರು..

ಕೃಷಿಯಲ್ಲಿ ಆಧುನಿಕ ಆವಿಷ್ಕಾರಗಳನ್ನು ಬಳಸಿ, ಉತ್ಪಾದನೆ ಮಟ್ಟವನ್ನು ಅಧಿಕ ಗೊಳಿಸುವ ಹಾಗೂ ನೆಲ, ಜಲದ ಸಾರವನ್ನು ಕಾಯುವ, ಸಂರಕ್ಷಿಸುವ ಕಾರ್ಯವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು, ರೈತರು ಸಾರ್ವಜನಿಕರು ಎಲ್ಲರೂ ಸೇರಿ ಮಾಡಬೇಕಾಗಿದೆ, ಈ ನಿಟ್ಟಿನಲ್ಲಿ ವಾಲ್ಮಿ ಸಂಸ್ಥೆಯು ಕಂಕಣಬದ್ದವಾಗಿದ್ದು, ರೈತ ಭಾಂದವರು ವಾಲ್ಮಿ ಸಂಸ್ಥೆಯಲ್ಲಿ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ, ಪ್ರಯೋಜನೆಗಳನ್ನು ಪಡೆದುಕೊಳ್ಳಬಹುದು ಎಂದರು..

ಈ ಸುದ್ದಿಗೋಷ್ಟಿಯಲ್ಲಿ ವಾಲ್ಮಿ ಸಂಸ್ಥೆಯ ಪದಾಧಿಕಾರಿಗಳು, ನೀರಾವರಿ ಇಲಾಖೆಯ ಅಧಿಕಾರಿಗಳು, ಅಭಿಯಂತರರು ಹಾಗೂ ಸಂಯೋಜಕರು ಭಾಗಿಯಾಗಿದ್ದರು..

ವರದಿ ಪ್ರಕಾಶ ಕುರಗುಂದ..