ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಸೇವಾ ರತ್ನ ಪ್ರಶಸ್ತಿ ಪ್ರಧಾನ..

ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಸೇವಾ ರತ್ನ ಪ್ರಶಸ್ತಿ ಪ್ರಧಾನ..

ಸಮಾಜ ಸೇವಕ ಯಲ್ಲಪ್ಪ ಕೋಳೇಕರ ಅವರಿಗೆ ‘ಮಹರ್ಷಿ ವಾಲ್ಮೀಕಿ ಸೇವಾ ರತ್ನ’ ಪ್ರಶಸ್ತಿ..

ಬಾವುಕಣ್ಣ ಬಂಗ್ಯಾಗೋಳ ಅವರ ಸಮಾಜ ಸೇವೆಗೆ “ಸೇವಾರತ್ನ” ಪ್ರಶಸ್ತಿ ಪ್ರಧಾನ..

ಬೆಂಗಳೂರು : ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಮಾಜಿ ತಾಲೂಕ ಪಂಚಾಯತ್ ಸದಸ್ಯರು ಮತ್ತು ಸಮಾಜ ಸೇವಕರು ಆದ ಯಲ್ಲಪ್ಪ ಕೋಳೇಕರ ಅವರಿಗೆ ಅವರ ಸಮಾಜಸೇವೆ ಮತ್ತು ಸಾಮಾಜಿಕ ಸಾಧನೆ ಗಮನಿಸಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ನಿಮಿತ್ಯ ಮಹರ್ಷಿ ಶ್ರೀವಾಲ್ಮೀಕಿ ಗುರುಪೀಠ ರವರು ಕೊಡುವ 2024 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಸೇವಾರತ್ನ ಪ್ರಶಸ್ತಿಯನ್ನು ಇತ್ತೀಚಿಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಪ್ರದಾನ ಮಾಡಲಾಗಿದೆ.

ಸಮಾರಂಭದಲ್ಲಿ ಮಹರ್ಷಿ ವಾಲ್ಮೀಕಿ ಗುರುಪೀಠದ ಮಹರ್ಷಿ ವಾಲ್ಮೀಕಿ ಬ್ರಹ್ಮಾನಂದ ಗುರೂಜಿ ಮಹಾಸ್ವಾಮಿಗಳು, ಯಲ್ಲಪ್ಪ ಕೋಳೇಕರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು, ಸಮಾರಂಭದಲ್ಲಿ ಗುರುಪೀಠದ ರಾಜ್ಯಾಧ್ಯಕ್ಷರಾದ ಪಿ.ಮೋಹನ ಕಿಶೋರ ಸೇರಿದಂತೆ ಗುರು ಪೀಠದ ರಾಜ್ಯ ಸಂಘದ ಪದಾಧಿಕಾರಿಗಳು ಸಮಾಜ ಬಾಂಧವರು ಉಪಸ್ಥಿತರಿದ್ದರು.

ಇದೇ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯ ವಾಲ್ಮೀಕಿ ಸಮಾಜದ ಸಮಾಜ ಸೇವಕ ಭಾವುಕಣ್ಣ ಭಂಗ್ಯಾಗೊಳ ಅವರಿಗೂ ಅವರ ಸಮಾಜ ಸೇವೆ ಗುರುತಿಸಿ ‘ ಮಹರ್ಷಿ ವಾಲ್ಮೀಕಿ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವರದಿ ಪ್ರಕಾಶ ಬಸಪ್ಪ ಕುರಗುಂದ..