ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಗೊಂದಲ ತಂದವರಿಗೆ ಬುದ್ಧಿವಾದ..
ಮಹಾಪುರುಷರ ವಿಷಯದಲ್ಲಿ ಯಾರೇ ಸಮಸ್ಯ ಮಾಡಿದರು ಸಹಿಸುವುದಿಲ್ಲ..
ಮಹೇಶ್ ಸಿಗಿಹಳ್ಳಿ ಗುಡುಗು..
ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಕಾಟಗಳಿ ಎನ್ನುವ ಪುಟ್ಟ ಗ್ರಾಮದಲ್ಲಿ 15 ದಿನಗಳ ಹಿಂದೆ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆಯನ್ನು ಮಾಡಲಾಗಿತ್ತು, ಆ ಸಮಯದಲ್ಲಿ ಪಂಚಾಯಿತಿ ಸದಸ್ಯರು ಮತ್ತು ಅಧ್ಯಕ್ಷರು ಒಪ್ಪಿಗೆ ಸೂಚಿಸಿದ್ದು, ಆ ಜಾಗೆಯ ಕಬ್ಜಾದಲ್ಲಿದ್ದ ಬೇರೆ ಸಮುದಾಯದ ಮಾಲೀಕರು ಕೂಡಾ ಮಹರ್ಷಿ ವಾಲ್ಮೀಕಿ ಅವರ ಮೇಲಿರುವ ಭಕ್ತಿಗೆ ಮಹರ್ಷಿ ವಾಲ್ಮೀಕಿ ದೇವಸ್ಥಾನ ಮತ್ತು ಸಮುದಾಯ ಭವನ ಕಟ್ಟಿಕೊಳ್ಳಲು ಸ್ಥಳ ನೀಡಿದ್ದರು.

ಆದರೆ ಈಗ ಮಹರ್ಷಿ ವಾಲ್ಮೀಕಿ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಆದಮೇಲೆ, ಪಂಚಾಯಿತಿಯ ಕೆಲವು ಸದಸ್ಯರು ಮತ್ತು ಈ ಜಾಗ ನನ್ನದೇ ಎಂದು ಹೇಳಿಕೊಂಡು ಬಂದಿರುವ ಪಕ್ಕದ ಜಾಗದ ಮಾಲೀಕ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಸ್ಥಳಕ್ಕೆ ಅಡ್ಡಿ ಪಡಿಸಿದ್ದರಿಂದ ಪಂಚಾಯಿತಿಯಿಂದ ವಿರೋಧ ವ್ಯಕ್ತವಾಗಿತ್ತು..
ಈ ವಿಷಯ ತಿಳಿದ ನಮ್ಮ ಸಮುದಾಯದ ಹಿರಿಯ ಮುಖಂಡರು ನಮಗೆ ಮಾಹಿತಿ ನೀಡಿದರು, ಸಮಸ್ಯೆಯಿರುವ ಸ್ಥಳಕ್ಕೆ ನಾವು ಬೇಟಿ ನೀಡಿ, ಪಂಚಾಯಿತಿ ಸದಸ್ಯರನ್ನು ಕರೆಸಿ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಕರೆ ಮುಖಾಂತರ ತಿಳಿಹೇಳಿ ಊರಿನ ಹಿರಿಯರನ್ನು ಕರೆಸಿ ಮಹರ್ಷಿ ವಾಲ್ಮೀಕಿ ಗುರುಗಳ ಮೂರ್ತಿಗೆ ಯಾರೂ ಅಡ್ಡಿ ಪಡಿಸದಂತೆ ನೋಡಿಕೊಳ್ಳಿ, ಎಲ್ಲರೂ ಪ್ರತಿ ಒಬ್ಬ ಮಹಾನನಾಯಕರಿಗೆ ಗೌರವ ಕೊಡಬೇಕು ಎಲ್ಲರನ್ನೂ ಗೌರವಿಸಬೇಕು, ಮಹರ್ಷಿ ವಾಲ್ಮೀಕಿ ಗುರುಗಳ ಮೂರ್ತಿಗೆ ಯಾರೇ ಅಡ್ಡಿ ಪಡಿಸಿದರೂ ಅಂತವರ ವಿರುದ್ದ ಅಗತ್ಯ ಕ್ರಮ ಜರಗಿಸುತ್ತೇವೆ..

ಪಂಚಾಯಿತಿ ಅಧಿಕಾರಿಗಳಿಗೆ, ಸದಸ್ಯರಿಗೆ ಹೋರಾಟದ ಮುಖಾಂತರ ಬುದ್ದಿ ಕಲಿಸುತ್ತೇವೆ, ಎಚ್ಚರವಿರಲಿ, ಎಂದು ಪ್ರತಿ ಒಬ್ಬರಿಗೂ ತಿಳಿಸಲಾಗಿ, ಸ್ಥಳದಲ್ಲೇ ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಒ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿಯನ್ನು ನೀಡಲಾಯಿತು.
ಇನ್ನು ಮುಂದೆ ಯಾವುದೇ ಸಮಸ್ಯೆಗೆ ಆಸ್ಪದ ನೀಡದೆ ಊರಿನ ಜನರು ಒಗ್ಗಟ್ಟಾಗಿ ಇರಬೇಕು ಎಂದು ತಿಳಿಸಲಾಯಿತು…

ಈ ಸಂದರ್ಭದಲ್ಲಿ ಕರ್ನಾಟಕ ಪರಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ)
(ರಾಜ್ಯಾಧ್ಯಕ್ಷರು/ ಮಹೇಶ ಶಿಗೀಹಳ್ಳಿ) 8553380854.8971633642
ಬೆಳಗಾವಿ ನಗರ ಉಪಾಧ್ಯಕ್ಷ ಸಚಿನ್.ಕೋ
ಬೆಳಗಾವಿ ನಗರ ಸಂಘಟನಾ ಕಾರ್ಯದರ್ಶಿ ಆಕಾಶ ಸರಿಕರ,
ಬೆಳಗಾವಿ ತಾಲೂಕಿನ ಸಹಕಾರ್ಯದರ್ಶಿ ವಿಶಾಲ್ ಶಿಗೀಹಳ್ಳಿ, ಮತ್ತಿತರರು ಭಾಗಿಯಾಗಿದ್ದರು..
ವರದಿ ಪ್ರಕಾಶ ಕುರಗುಂದ..