ವಾಲ್ಮೀಕಿ ರಾಜ್ಯ ಯುವಘಟಕದ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ..
ವಾಲ್ಮೀಕಿ ಸಮುದಾಯಕ್ಕೆ ಯಾರೇ ಅನ್ಯಾಯ ಮಾಡಿದರು ಸಹಿಸುವುದಿಲ್ಲ..
ಮಹೇಶ ಸಿಗಿಹಳ್ಳಿ, ರಾಜ್ಯಾಧ್ಯಕ್ಷರು, ವಾಲ್ಮೀಕಿ ರಾಜ್ಯ ಯುವ ಘಟಕ ಸಂಘಟನೆ..
ಬೆಳಗಾವಿ : ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯ
(ರಾಜ್ಯಾಧ್ಯಕ್ಷರು
ಮಹೇಶ ಶಿಗಿಹಳ್ಳಿ) ನೇತೃತ್ವದಲ್ಲಿ ಸಂಘಟನೆಯ ಸವದತ್ತಿ, ಬೈಲಹೊಂಗಲ, ಯರಗಟ್ಟಿ, ರಾಯಬಾಗ, ಖಾನಾಪುರ, ಕಿತ್ತೂರು, ಬೆಳಗಾವಿ ತಾಲೂಕು ಮತ್ತು ಗ್ರಾಮೀಣ ಬೆಳಗಾವಿ ನಗರ ಕಮಿಟಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪದಗ್ರಹಣ ಮಾಡಲಾಯಿತು..
ಇದೇ ವೇಳೆ ವಾಲ್ಮೀಕಿ ಅಬಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ಭ್ರಷ್ಟಾಚಾರ ವಿಷಯವಾಗಿ ಸಭೆಯಲ್ಲಿ ಚರ್ಚೆ ಮಾಡಿ ನಿಗಮದಲ್ಲಿ ಇರುವ ಅಧಿಕಾರಿಗಳು ಮತ್ತು ಕೆಲವು ರಾಜಕಾರಣಿಗಳ ಹೆಸರನ್ನು ಡೆತ್ ನೋಟಿನಲ್ಲಿ ಬರೆದಿಟ್ಟು ಮೃತಪಟ್ಟ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಡೆತ್ ನೋಟಿನಂತೆ ಸರಿಯಾಗಿ ತನಿಖೆ ಆಗಬೇಕು.

ತಪ್ಪಿತಸ್ಥರ ಮೇಲೆ ಸರಿಯಾದ ಕ್ರಮ ಕೈಗೊಂಡು ಯಾವುದೇ ಬಲಿಷ್ಠ ರಾಜಕಾರಣಿ ಆಗಿರಲಿ ಅಧಿಕಾರಿಯಾಗಿರಲಿ ಅವರ ಮೇಲೆ ಯಾವುದೇ ಮುಲಾಜಿಲ್ಲದೆ ತನಿಖೆ ಮಾಡಿ ಶಿಕ್ಷೆ ನೀಡಲಿ ಆ ಮೂಲಕ ವಾಲ್ಮೀಕಿ ನಾಯಕ ಸಮುದಾಯಕ್ಕೆ ನ್ಯಾಯ ಸಿಗಬೇಕು ಎಂದಿದ್ದಾರೆ..
ಅದೇ ರೀತಿ 187 ಕೋಟಿ ಭ್ರಷ್ಟಾಚಾರ ಹಣವನ್ನು ವಾಪಸ್ಸು ನಿಗಮಕ್ಕೆ ವಿನಿಯೋಗ ಮಾಡಲೇಬೇಕು ಇಲ್ಲವಾದರೆ ಸರಕಾರದ ವಿರುದ್ಧ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ..

ಈ ಸಭೆಯಲ್ಲಿ ಮುಂದಿನ ಹೋರಾಟಗಳ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಿದ್ದು, ಇನ್ನು ಪರಿಣಾಮಕಾರಿಯಾಗಿ ಸಂಘಟನೆಯ ಕಾರ್ಯಗಳು ಸಾಗಿ, ರಾಜ್ಯ ಹಾಗೂ ಜಿಲ್ಲೆಯಾದ್ಯಂತ ಸಮುದಾಯದ ಸಮಸ್ಯೆಗಳನ್ನು ಸರಿಪಡಿಸಿ, ಜನರ ಬೆಳವಣಿಗೆಯತ್ತ ಹೆಜ್ಜೆಯಿಡುವ ಇಚ್ಚೆಯನ್ನು ಕೈಗೊಳ್ಳಲಾಗಿದೆ..
ಈ ಸಂದರ್ಬದಲ್ಲಿ ಬೆಳಗಾವಿ ಜಿಲ್ಲೆ ಮತ್ತು ತಾಲೂಕು ಮತ್ತು ಗ್ರಾಮೀಣ ಬೆಳಗಾವಿ ನಗರ ಪದಾಧಿಕಾರಿಗಳು ಉಪಸ್ಥಿತರಿದ್ದರು..

ಮಹೇಶ ಎಸ್ ಶೀಗೀಹಳ್ಳಿ
(ರಾಜ್ಯಾಧ್ಯಕ್ಷರು)
ಮಲ್ಲೇಶ ಮೂಳಗಸಿ
(ರಾಜ್ಯ ಸಂಘಟನಾ ಕಾರ್ಯದರ್ಶಿ)
ರಾಮ್ ಪೂಜಾರಿ
(ಬೆಳಗಾವಿ ಜಿಲ್ಲಾ ಗೌರವ ಅದ್ಯಕ್ಷರು)
ಶಕ್ತಿ ಶೀಗೀಹಳ್ಳಿ
(ಬೆಳಗಾವಿ ತಾಲೂಕು ಉಪಾಧ್ಯಕ್ಷರು)
ಮಂಜು ಸೀತಿಮನಿ
(ಬೆಳಗಾವಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ)
ಮಂಜು ತಳವಾರ್
(ಬೈಲಹೊಂಗಲ ತಾಲೂಕು ಅದ್ಯಕ್ಷರು)
ಬಸವರಾಜ್ ಪೂಜೇರಿ
(ಸವದತ್ತಿ ತಾಲೂಕಿನ ಅಧ್ಯಕ್ಷ)
ಮೇಘರಾಜ ಬೈಲವಾಡ
(ಯರಗಟ್ಟಿ ತಾಲೂಕು ಅಧ್ಯಕ್ಷ)
ಆನಂದ್ ಊದಿ
(ಖಾನಾಪುರ ತಾಲೂಕಿನ ಅಧ್ಯಕ್ಷರು)
ಹಾಗೂ ಇನ್ನುಳಿದ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..