ವಾಲ್ಮೀಕಿ ಸಮುದಾಯದ ನ್ಯಾಯಬದ್ಧ ಹಕ್ಕಿಗಾಗಿ ಧ್ವನಿ ಎತ್ತಿದ ಮಹೇಶ ಸಿಗಿಹಳ್ಳಿ…

ವಾಲ್ಮೀಕಿ ಸಮುದಾಯದ ನ್ಯಾಯಬದ್ಧ ಹಕ್ಕಿಗಾಗಿ ಧ್ವನಿ ಎತ್ತಿದ ಮಹೇಶ ಸಿಗಿಹಳ್ಳಿ..

ಬೆಳಗಾವಿ : ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಸಭಾ ಭವನದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಾಲ್ಮೀಕಿ ಜಯಂತಿ ನಿಮಿತ್ತ ಪೂರ್ವಭಾವಿ ಸಭೆ ಯಲ್ಲಿ ಭಾಗಿಯಾಗಿ ಸಮುದಾಯದ ಪರವಾದ ಪ್ರಮುಖ ಐದು ಬೇಡಿಕೆಗಳನ್ನು ಮುಂದಿಟ್ಟು, ಸರ್ಕಾರ ಹಾಗೂ ಅಧಿಕಾರಿಗಳ ಗಮನ ಸೆಳೆಯುವಲ್ಲಿ ಸಫಲರಾಗಿ, ಸಮುದಾಯದ ಕ್ಷೆಯೋಭಿವೃದ್ದಿಗೆ ಮುನ್ನುಡಿ ಹಾಡಿದ ಕರ್ನಾಟಕ ಪರಿಶಿಷ್ಠ ಪಂಗಡದ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಮಹೇಶ್ ಸಿಗಿಹಳ್ಳಿ..

ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ವಿಷಯಗಳು,,

  • ಎಲ್ಲಾ ಮಹಾನಯಕರ ಹೆಸರಿನಲ್ಲಿ ವೃತ್ತಗಳು ಮತ್ತು ಮೂರ್ತಿ ಪ್ರತಿಷ್ಠಾಪನೆ ಮಾಡಲು ಸುಲಭವಾಗಿ ಅವಕಾಶ ಮಾಡಿಕೊಡುವ ರೀತಿಯಲ್ಲಿ ವಾಲ್ಮೀಕಿ ಸಮುದಾಯದಲ್ಲಿ ಸಾವಿರಾರು ವೀರ ಪುರುಷರು ಮತ್ತು ಸ್ವಾತಂತ್ರ ಹೋರಾಟಗಾರರು ಮಹನಾಯಕರು ಕನ್ನಡಿಗರು, ದೇಶಪ್ರೇಮಿಗಳು ಇದ್ದಾರೆ ಅವರ ಹೆಸರಿನಲ್ಲಿ ವೃತ್ತಗಳು ಮತ್ತು ಮೂರ್ತಿ ಪ್ರತಿಷ್ಠಾಪನೆ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ, ಸರಕಾರದ ನಿಯಮಗಳನ್ನು ನಮಗೆ ಹೇಳುತ್ತೀರಿ ಬೇರೆಯವರಿಗೆ ಆ ನಿಯಮ ಯಾಕೆ ಇಲ್ಲ? ವಾಲ್ಮೀಕಿ ಸಮುದಾಯಕ್ಕೆ ಮಾತ್ರ ಯಾಕೆ ನಿಯಮಗಳು ಜಾರಿಯಾಗುತ್ತವೆಯೆ? ವಾಲ್ಮೀಕಿ ಸಮುದಾಯಕ್ಕೆ ಮಲತಾಯಿ ದೊರಣೆಯೆ? ನಮಗೂ ದೊಡ್ಡ ಇತಿಹಾಸವಿದೆ ನಮಗೂ ಅದೇ ರೀತಿ ಸರ್ಕಾರದ ಸಕಲ ಗೌರವಗಳು ಸ್ಥಾನಗಳು ಸಿಗಬೇಕು ಇಲ್ಲವಾದರೆ ನಮ್ಮ ಸಮಾಜ ಹೋರಾಟಕ್ಕೆ ರಸ್ತೆಗೆ ಇಳಿದರೆ ಇತಿಹಾಸ ಸೃಷ್ಟಿ ಆಗುತ್ತದೆ, ದಯವಿಟ್ಟು ಅದಕ್ಕೆ ಅವಕಾಶ ಮಾಡಿ ಕೊಡಬೇಡಿ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಸಿಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು..
  • ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗಿದೆ ವಾಲ್ಮೀಕಿ ಸಮುದಾಯದ ಮಕ್ಕಳಿಗೆ ಜನರಿಗೆ ಅದರ ಸದುಪಯೋಗ ಆಗುತ್ತಿಲ್ಲ ಬೇರೆಯವರು ಬೆಳೆ ಬೆಯಿಸಿಕೊಳ್ಳುತಿದ್ದಾರೆ… ಅಭಿವೃದ್ದಿ ಹೊಂದುತ್ತಿದ್ದಾರೆ, ಇದರ ಬಗ್ಗೆ ಕ್ರಮ ಜರುಗಿಸಿ ತಪ್ಪಿತಸ್ಥರ ವಿರುದ್ದ ಕೇಸು ದಾಖಲು ಮಾಡಿ ಶಿಕ್ಷೆ ವಿಧಿಸಿ ಎಂದು ಹೇಳಲಾಯಿತು.
  • ಪ್ರತಿ ಜಿಲ್ಲೆ, ತಾಲೂಕು, ಗ್ರಾಮ, ಹೋಬಳಿಗಳಲ್ಲಿ ವಾಲ್ಮೀಕಿ ಸಮುದಾಯ ಭವನ ಸಿಗುತ್ತಿದ್ದೆ ಒಂದೊಂದು ಕಡೆ, ವಾಲ್ಮೀಕಿ ಸಮುದಾಯ ಭವನದ ಜಾಗ ಬೇರೇಯವರು ಮತ್ತು ಕೆಲವು ಅಧಿಕಾರಿಗಳು ಆಕ್ರಮಣ ಮಾಡಿಕೊಳ್ಳುತ್ತಿದ್ದಾರೆ, ನಮಗೆ ಅನ್ಯಾಯ ಮಾಡುತ್ತಿದ್ದಾರೆ ಈ ವಿಷಯವಾಗಿ ತನಿಖೆ ಮಾಡಿ ಮತ್ತು ಪ್ರತಿ ಒಂದು ವಾಲ್ಮೀಕಿ ಸಮುದಾಯ ಭವನದಲ್ಲಿ ಗ್ರಂಥಾಲಯ ಮಾಡಿ ನಮ್ಮ ವಾಲ್ಮೀಕಿ ಸಮುದಾಯದ ಮಕ್ಕಳಿಗೆ ಓದಲು ಒಳ್ಳೆಯ ಅವಕಾಶ ಮತ್ತು ಉತ್ತಮ ಶಿಕ್ಷಣಕ್ಕೆ ಪ್ರಯೋಜನ ಆಗುತ್ತದೆ ಎಂಬ ಮನವಿ ಮಾಡಲಾಯಿತು.
  • ಸಮಾಜ ಕಲ್ಯಾಣ ಇಲಾಖೆಯಿಂದ ನಮ್ಮ ಜನರಿಗೆ ಸಿಗುವ ಸೌಲಭ್ಯಗಳು ಯೋಜನೆಗಳು ಮತ್ತು ಅದರ ಮಹತ್ವ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಸಭೆ ಎಲ್ಲ ಜಿಲ್ಲೆ, ತಾಲೂಕು, ಹೋಬಳಿ, ಆಯಾ ಹಳ್ಳಿ ಗ್ರಾಮಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಸಮುದಾಯ ಭವನಗಳಲ್ಲಿ ಪ್ರತಿ 3 ಅಥವಾ 6 ತಿಂಗಳಿಗೊಮ್ಮೆ ಸಭೆ ಆಗಲೇಬೇಕು ಎಂದು ಒತ್ತಾಯಿಸಲಾಯಿತು…
  • ಬೆಳಗಾವಿ ಸುವರ್ಣ ಸೌದದ ಎದುರು 5 ಮಹಾನನಾಯಕರ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ 2020 ರಲ್ಲಿ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಹೋರಾಟ ಮಾಡಲಾಗಿತ್ತು ಆದರೆ ಅದರಲ್ಲಿ ರಾಯಣ್ಣ. ಚನ್ನಮ್ಮ ಮಹಾನಯಕ ಅಂಬೇಡ್ಕರ್. ರವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ ಸಂತೋಷದ ವಿಷಯ ಗೌರವಿಸುತ್ತೇವೆ, ಆದ್ರೆ ಮಹರ್ಷಿ ವಾಲ್ಮೀಕಿ, ವಿಶ್ವ ಗುರು ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಲಿಲ್ಲ .. ಇದು ನೋವಿನ ಸಂಗತಿ ಅದಕ್ಕೆ ಸಂಬಂಧ ಪಟ್ಟ ಈಗಿನ ಸರ್ಕಾರದ ಜೊತೆ ಸಭೆ ಮಾಡಿ ಇನ್ನುಳಿದ ಮಹಾನಾಯಕರ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಲಾಯಿತು ….
  • ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಿಸಬೇಕು ಆಯಾ ಹಳ್ಳಿ ಗ್ರಾಮಗಳ ಯುವಕರು ಜಯಂತಿ ಆಚರಿಸಲು ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ಪರವಾನಿಗೆ ಕೇಳಲು ಹೋದರೆ ಕೆಲವು ಪೊಲೀಸ್ ಠಾಣೆಯ ಅಧಿಕಾರಿಗಳು ನಮ್ಮ ಸಮುದಾಯದ ಯುವಕರಿಗೆ ಜನರಿಗೆ ಏರು ದ್ವನಿಯಲ್ಲಿ ಮಾತನಾಡಿ ಸಂಜೆ 4 ರಿಂದ 7 ರ ವರೆಗೆ ಮೆರವಣಿಗೆ ಮಾಡಿ ಮುಗಿಸಬೇಕು ಎಂದು ಹೆದರಿಸುತ್ತಾರೆ ಇದು ನಿಲ್ಲಬೇಕು, ಆಯಾ ಠಾಣೆ ಪೊಲೀಸರಿಗೆ ಸಭೆ ಮಾಡಿ ಒಳ್ಳೆರಿತಿಯಲ್ಲಿ ಸ್ಪಂದಿಸುವಂತೆ ಮತ್ತು ಹೆದರಿಸುವ ಪ್ರಯತ್ನ ಬಿಡಬೇಕು, ಒಳ್ಳೆಯ ಅದ್ದೂರಿ ಜಯಂತಿಯ ಮೆರವಣಿಗೆ ಮಾಡಲು ಅವಕಾಶ ಕೊಡಬೇಕು ಎಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಲಾಯಿತು…

ಇದಕ್ಕೆ ಸ್ಪಂದಿಸಿದ ಮಾನ್ಯ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ…

ಮನವಿ ಹೇಳಿಕೊಂಡ ಈ ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಜಿಲ್ಲಾ ಎಸ್ಸಿ ಎಸ್ಟಿ ಸಮುದಾಯದ ಹಾಗೂ ಸಂಘಟನೆಯ ವಿವಿಧ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗಿಯಾಗಿದ್ದರು..

ವರದಿ ಪ್ರಕಾಶ ಕುರಗುಂದ..