ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ..

ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ..

ನೇತ್ರ ತಪಾಸಣಾ ಶಿಬಿರ ಏರ್ಪಡಿಸಿದ ಅರ್ಥಪೂರ್ಣ ಕಾರ್ಯಕ್ರಮ..

ಕನ್ನಡ ನಾಡು, ನುಡಿ, ಸಂಸ್ಕೃತಿಯ ರಕ್ಷಣೆಯೇ ಸಂಘಟನೆಯ ಗುರಿ..

ಬೆಳಗಾವಿ : ರಾಜ್ಯದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ, ಜಲ ಹಾಗೂ ಕನ್ನಡಿಗರ ಭಾವನೆಗೆ ದಕ್ಕೆ ಆಗುವ ಯಾವುದೇ ಸಂಗತಿಯಿದ್ದರೂ ಅದರ ವಿರುದ್ಧವಾಗಿ ಹೋರಾಟಕ್ಕೆ ನಮ್ಮ “ವಿಜಯ ಕರ್ನಾಟಕ ರಕ್ಷಣಾ ವೇದಿಕೆ” ಯಾವಾಗಲೂ ಸದಾ ಸಿದ್ಧವಾಗಿರುತ್ತದೆ ಎಂದು ವೇದಿಕೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ಎಂ ವಿ ಮಹೇಶಕುಮಾರ ಅವರು ತಿಳಿಸಿದ್ದಾರೆ..

ಸೋಮವಾರ ದಿನಾಂಕ 02/12/2024ರಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ “ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ” ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ಕನ್ನಡಪರ ಸಂಘಟನೆಗಳು ಇವೆ, ಆದರೆ ನಮ್ಮ ಸಂಘಟನೆ ಸಮಾಜದ ಕಟ್ಟಕಡೆಯ ವ್ಯಕ್ತಿವರೆಗೂ ತಲುಪಿ, ಅವರ ಸಮಸ್ಯೆಗೆ ಸ್ಪಂಡಿಸುವಂತಹ ಕಾರ್ಯ ಮಾಡುತ್ತದೆ, ಇಲ್ಲಿ ವಯಕ್ತಿಕ ಹಿತಾಸಕ್ತಿ ಇರುವದಿಲ್ಲ, ಕನ್ನಡ ನಾಡು, ನುಡಿಯ ಹಾಗೂ ಕನ್ನಡಿಗರ ಸಮಸ್ಯೆಗೆ ನಮ್ಮ ಸಂಘಟನೆ ಟೊಂಕ ಕಟ್ಟಿ ನಿಂತು ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಇಂದು ಜಿಲ್ಲಾ ಮಟ್ಟದ ಪದಾಧಿಕಾರಿಗಳಿಗೆ ಸ್ಥಾನಮಾನ ನೀಡಿ, ಗುರುತಿನ ಚೀಟಿ ನೀಡುತ್ತಿದ್ದೇವೆ, ಈ ವೇಳೆ ಅವರಿಗೆ ಹೇಳುವುದೆಂದರೆ, ಎಲ್ಲಾ ಸಂಘಟನೆಗಳಲ್ಲಿ ಹೊಂದಾಣಿಕೆಯ ಸಮಸ್ಯೆ, ಸ್ವಲ್ಪ ಗುಂಪುಗಾರಿಕೆ ಇದ್ದೆ ಇರುತ್ತವೆ, ಅದೆಲ್ಲವನ್ನು ಮೀರಿ ನಾವು ಕನ್ನಡವನ್ನು ಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಿದಾಗ ಸಂಘಟನೆ ಜೊತೆ ನಾವು ಬೆಳೆಯುತ್ತೇವೆ, ಆಗ ನಮ್ಮನ್ನು ನಮ್ಮ ಸಂಘಟನೆಯನ್ನು ಬೇರೆಯವರು ಗೂರ್ತಿಸುತ್ತಾರೆ, ಆ ನಿಟ್ಟಿನಲ್ಲಿ ನಾವೆಲ್ಲಾ ಕೆಲಸ ಮಾಡಬೇಕು, ರಾಜ್ಯಾಧ್ಯಕ್ಷನಾಗಿ ನಾನು ತಮ್ಮ ಜೊತೆ ಸದಾ ಇರುತ್ತೇನೆ ಎಂದಿದ್ದಾರೆ..

ಇನ್ನು ವೇದಿಕೆ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಬಂದು ಮಾತನಾಡಿದ್ದು, ಸಂಘಟನೆಗೆ ಹಾಗೂ ಜಿಲ್ಲಾ ಹೊಸ ಪದಾಧಿಕಾರಿಗಳಿಗೆ ಶುಭ ಕೋರಿದ್ದು, ಸಂಘಟನೆಯಿಂದ ಕನ್ನಡದ ಕೆಲಸಗಳು ಹೆಚ್ಚಾಗಿ ಆಗಿ, ಕನ್ನಡಿಗರ ಮನಸನ್ನು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಗೆಲ್ಲುವಂತಾಗಲಿ ಎಂದು ಹರಸಿದರು..

ಇದೇ ವೇಳೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನೇತ್ರ ತಪಾಸಣಾ ಶಿಬಿರವನ್ನು ಕೂಡಾ ಆಯೋಜನೆ ಮಾಡಿದ್ದು ವಿಶೇಷವಾಗಿತ್ತು, ಡಾ ಅಗರ್ವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯ ಉದಯಕುಮಾರ ಕೋಲಕಾರ ಹಾಗೂ ಅವರ ಸಿಬ್ಬಂದಿಗಳ ಸಹಯೋಗದಲ್ಲಿ ಸುಮಾರು 120 ಜನರ ನೇತ್ರ ತಪಾಸಣೆಯನ್ನು ಮಾಡಲಾಗಿದೆ.

ಈ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಗುರುಮಾತೆ ಭಾರತಿ ಕುಡಚಿಮಠ, ವೇದಿಕೆಯ ರಾಜ್ಯಾಧ್ಯಕ್ಷರಾದ ಎಂ ವಿ ಮಹೇಶಕುಮಾರ, ನಿತಿನ್ ಚೌಗುಲೆ, ಕಲಮುದ್ದಿನಶಾ ಮಕಾಂದಾರ, ಬಾಬುಲ ಬಂಡಿ, ಮಹಾದೇವಿ ಹಿರೇಮಠ್, ಶಾಹಿದ್ ತಹಶೀಲ್ದಾರ್, ಬಾಲೇಶ್ ಉಳವಿ, ಮಲಿಕ್ ಗುಜರಾತಿ, ಗೋಕಾಕ ತಾಲೂಕಾಧ್ಯಕ್ಷರಾದ ಸುನೀಲ ತೆಗ್ಗಿನಮನಿ, ವಿವಿಧ ತಾಲೂಕಾ ಪದಾಧಿಕಾರಿಗಳು ಹಾಗೂ ವೇದಿಕೆಯ ಸದಸ್ಯರು ಭಾಗಿಯಾಗಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..