ವಿಠ್ಠಲಾಚಾರ್ಯ ಶಿವಣಗಿ ಪ್ರಾಥಮಿಕ ಶಾಲೆಯಲ್ಲಿ ಉತ್ಸಾಹದ ಕ್ರೀಡಾಕೂಟ…

ಶಾಲಾ ವಾರ್ಷಿಕ ಕ್ರೀಡಾಕೂಟಕ್ಕೆ ಸ್ಪೂರ್ತಿದಾಯಕ ಚಾಲನೆ..

ವಿಠ್ಠಲಾಚಾರ್ಯ ಶಿವಣಗಿ ಪ್ರಾಥಮಿಕ ಶಾಲೆಯಲ್ಲಿ ಉತ್ಸಾಹದ ಕ್ರೀಡಾಕೂಟ…

ಶಾಲಾ ಕ್ರೀಡಾಕೂಟವೇ ಪಿ,ಟಿ,ಉಷಾರಂತಹ ಮಹಾನ್ ಕ್ರೀಡಾಪಟುವಿಗೆ ಅಡಿಪಾಯವಾಗಿತ್ತು..

ಆರ್ ಪಿ ವಂಟಗೊಡಿ..

ಬೆಳಗಾವಿ, : ಮಂಗಳವಾರ ದಿನಾಂಕ 19/12/2023ರಂದು, ನಗರದ ಫೋರ್ಟ್ ರಸ್ತೆಯ, ಪಾಟೀಲ್ ಗಲ್ಲಿಯಲ್ಲಿರುವ, ಬಿಇ ಶಿಕ್ಷಣ ಸಂಸ್ಥೆಯ ವಿಠ್ಠಲಾಚಾರ್ಯ ಶಿವಣಗಿ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಅತ್ಯಂತ ಉತ್ಸಾಹ ಹಾಗೂ ಕ್ರೀಡಾಸ್ಪೂರ್ತಿಯಿಂದ ಉದ್ಘಾಟನೆ ಮಾಡಲಾಯಿತು.

ಬೆಳಿಗ್ಗೆ ಎಂಟು ಗಂಟೆಗೆ ಶಾಲಾ ಮೈದಾನದಲ್ಲಿ ಮಕ್ಕಳೆಲ್ಲ ಆಗಮಿಸಿದ್ದು, ಶಾಲಾ ಸಿಬ್ಬಂದಿಗಳು ಕ್ರೀಡಾಕೂಟದ ಉದ್ಘಾಟನೆಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಅತ್ಯಂತ ಲವಲವಿಕೆ ಹಾಗೂ ಉತ್ಸಾಹದಿಂದ ಎಲ್ಲಾ ಸಿದ್ಧತೆಯನ್ನು ಮಾಡುತ್ತಿದ್ದರು..

ಸಮಯಕ್ಕೆ ಸರಿಯಾಗಿ ಮೈದಾನದಲ್ಲಿರುವ ವೇದಿಕೆಗೆ ಗಣ್ಯರ ಆಗಮನವಾಗಿ, ದ್ವೀಪ ಬೆಳಗಿಸುವ ಹಾಗೂ ಪಾರಿವಾಳ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಾಯಿತು..

ನಂತರ ವೇದಿಕೆಯಲ್ಲಿ ಕ್ರೀಡಾಜ್ಯೋತಿಯನ್ನು ಬೆಳಗಿಸಿದ ಗಣ್ಯರು, ತಮ್ಮ ಮಾರ್ಗದರ್ಶನ ಹಾಗೂ ಹಿತನುಡಿಗಳಿಂದ ಮಕ್ಕಳಿಗೆ ಶುಭಹಾರೈಸಿದರು.

ಕ್ರೀಡಾಕೂಟ ಉದ್ಘಾಟಿಸಿ ವೇದಿಕೆಯಲ್ಲಿ ಮಾತನಾಡಿದ ಕಾರ್ಯಕ್ರಮದ ಅಥಿತಿ ಹಾಗೂ ದೈಹಿಕ ಶಿಕ್ಷಕರಾದ ಆರ್ ಪಿ ವಂಟಗೋಡಿ ಅವರು, ಇವತ್ತಿನ ದಿನ ಆಟೋಟಗಳು ಇಲ್ಲದೇ ಮಕ್ಕಳು ಕೊರಗುತ್ತಿದ್ದಾರೆ, ಮೋಬೈಲನಲ್ಲಿಯೆ ನಿರತರಾಗಿದ್ದಾರೆ, ಅದನ್ನು ತೊರೆದು ಆಟದ ಮೈದಾನದಲ್ಲಿ ಮಕ್ಕಳು ಆಡಬೇಕು, ಕ್ರೀಡೆಯಿಂದ ಮಕ್ಕಳಲ್ಲಿ ಅಡಗಿರುವ ವಿವಿಧ ಕೌಶಲ್ಯ ಹಾಗೂ ಪ್ರತಿಭೆಗಳು ಬೆಳಕಿಗೆ ಬರುತ್ತವೆ ಎಂದರು..

ಮಕ್ಕಳಲ್ಲಿ ಕ್ರೀಡಾಸ್ಪೂರ್ತಿ, ಕ್ರೀಡಾ ಉತ್ತೇಜನೆ ಹೆಚ್ಚಿಸಲು ಇಲ್ಲಿಯ ಶಿಕ್ಷಕಿಯರು ತುಂಬಾ ಪ್ರಯತ್ನ ಪಡುತ್ತಿದ್ದಾರೆ, ಅದೇ ರೀತಿ ಮಕ್ಕಳೂ ಕೂಡ ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಕ್ರೀಡಾಕೂಟವನ್ನು ಯಶಸ್ವಿಯಾಗಿಸಲಿ, ಇಲ್ಲಿ ಭಾಗಿಯಾದ ಎಲ್ಲಾ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸುತ್ತೇನೆ ಎಂದರು…

ಇನ್ನು ಶಾಲಾ ಮುಖ್ಯ ಶಿಕ್ಷಕಿಯವರಾದ ಮೀನಾಕ್ಷಿ ಒಡೆಯರ ಅವರು ಮಾತನಾಡಿ, ಮೂರು ದಿನಗಳವರೆಗೆ ನಡೆಯುವ ಈ ಕ್ರೀಡಾಕೂಟದಲ್ಲಿ ಎಲ್ಕೆಜಿಯಿಂದ ಏಳನೆಯ ತರಗತಿವರೆಗಿನ ವಿಧ್ಯಾರ್ಥಿನಿಗಳು ಭಾಗಿಯಾಗುತ್ತಿದ್ದು, ವಿವಿಧ ಬಗೆಯ ಕ್ರೀಡೆಗಳಲ್ಲಿ ಮಕ್ಕಳು ತುಂಬಾ ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು..

ಇನ್ನು ಈ ಕ್ರೀಡಾಕೂಟ ಹಾಗೂ ಮಕ್ಕಳ ಬಗ್ಗೆ ಶಾಲಾ ಶಿಕ್ಷಕಿಯರಾದ ಭಾರತಿ ಜೋಶಿ ಹಾಗೂ ಪ್ರಜ್ಞಾ ಜೋಶಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಗವರ್ನಿಂಗ್ ಚೇರ್ಮಣ್ಣರಾದ ಸುಹಾಸ ಹಂಗ್ರೇಕರ, ಶಾಲಾ ಶಿಕ್ಷಕಿಯರು, ಸಿಬ್ಬಂದಿಗಳು ಹಾಗೂ ವಿಧ್ಯಾರ್ಥಿನಿಗಳು ಭಾಗಿಯಾಗಿದ್ದರು..

ವರದಿ ಪ್ರಕಾಶ ಕುರಗುಂದ..