ವಿದ್ಯಾದಾನ ಕೇಂದ್ರಕ್ಕೆ ನೆಲೆನಿಡಿ, ಮತ್ತೊಮ್ಮೆ ವಿದ್ಯಾಪೋಷಕರಾದ ಸಚಿವ ಸತೀಶ ಜಾರಕಿಹೊಳಿ..!!!

ವಿದ್ಯಾದಾನ ಕೇಂದ್ರಕ್ಕೆ ನೆಲೆನಿಡಿ, ಮತ್ತೊಮ್ಮೆ ವಿದ್ಯಾಪೋಷಕರಾದ ಸಚಿವ ಸತೀಶ ಜಾರಕಿಹೊಳಿ..!!!

ಬಡ, ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕಾಗಿ 10 ಎಕರೆ ಜಮೀನು ನೀಡಲು ಮುಂದಾದ ಮಾನವತಾವಾದಿ..!!!

ಅಂಬೇಡ್ಕರ ವಸತಿ ಶಾಲೆಯ ಸ್ವಂತ ಕಟ್ಟಡಕ್ಕೆ ಸಚಿವ ಸತೀಶ ಜಾರಕಿಹೊಳಿ ಸಾಥ..!!!

ಬೆಳಗಾವಿ : ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರಾದ ಸಚಿವ ಸತೀಶ ಜಾರಕಿಹೊಳಿ ಅವರು ಇತರ ರಾಜಕಾರಣಿಗಳಿಗಿಂತ ವಿಶೇಷ ವ್ಯಕ್ತಿತ್ವ ಹಾಗೂ ವಿಚಾರ ಹೊಂದಿದವರಾಗಿದ್ದು, ಅವರು ಹೋದ ಕಡೆಯಲ್ಲೆಲ್ಲಾ ಹೊಸ ಸಂಚಲನ ಹಾಗೂ ಚೈತನ್ಯ ಮೂಡಿಸುವ ಸ್ವಭಾವದವರು ಎಂಬುವದು ತಿಳಿದ ವಿಷಯ.

ಯಾವುದೇ ಅಧಿಕಾರ ಇದ್ದರೂ, ಅವರ ಸರಳತೆಯ ನಡೆ, ಸಮಾಜಮುಖಿ ಚಿಂತನೆ, ಬಡವ, ಹಿಂದುಳಿದ, ಶೋಷಿತರ ಪರವಾಗಿ ಧ್ವನಿಯೇತ್ತುವ, ಅವರಿಗೆ ನ್ಯಾಯ ನೀಡುವ ಸತತ ಪ್ರಯತ್ನದಲ್ಲಿರುತ್ತಾರೆ, ಆ ಕಾರಣಕ್ಕೆ ಅವರು ಹೋದ ಕಡೆಗೆಲ್ಲಾ ಜನ ಸಾಗರವೇ ಸೇರಿರುತ್ತದೆ, ತಮಗೆ ಗೊತ್ತಿರುವ, ಗೊತ್ತಿರದ ಯಾವುದೇ ಜನ ಬಂದರು, ಅವರ ಸಮಸ್ಯ ಆಲಿಸಿ, ಪರಿಹಾರ ನೀಡುವ ಕರುಣಾಮಯಿ ಗುಣ ಹೊಂದಿದ ಇವರು ನಿಜವಾದ ಜನನಾಯಕರಾಗಿದ್ದಾರೆ..

ಸಮಾಜದ ಬಹುತೇಕ ಕ್ಷೇತ್ರದಲ್ಲಿ ಜನರಿಗೆ ಅನುಕೂಲ ಆಗುವಂತ ಕಾರ್ಯ ಮಾಡಿದ್ದು, ಈಗ ಶಿಕ್ಷಣ ಕ್ಷೇತ್ರದಲ್ಲಿ, ಬಡ ಪ್ರತಿಭಾವಂತ ವಿಧ್ಯಾರ್ಥಿಗಳ, ವ್ಯವಸ್ಥಿತ ವಿದ್ಯಾರ್ಜನೆಗಾಗಿ ಹತ್ತು ಎಕರೆ ಜಾಗವನ್ನು ನೀಡುತ್ತಿದ್ದಾರೆ ಎಂಬ ಮಾಹಿತಿ ಇದ್ದು, ಹುಕ್ಕೇರಿ ತಾಲೂಕಿನ, ಯಮಕನಮರಡಿ ಕ್ಷೇತ್ರದಲ್ಲಿ ಈ ಹತ್ತು ಎಕರೆ ಜಾಗವನ್ನು ನೀಡುವ ತಯಾರಿ ನಡೆದಿದೆ..

ಬೆಳಗಾವಿಯ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ, ಕಾಕತೀಯ ಮುರಾರ್ಜಿ ಅಂಬೇಡ್ಕರ ವಸತಿ ಶಾಲೆಯ ಸ್ವಂತ, ಹೊಸ ಕಟ್ಟಡದ ನಿರ್ಮಾಣಕ್ಕಾಗಿ, ಬಸಾಪುರ ಹಾಗೂ ಅರಳಿಕಟ್ಟಿ ಗ್ರಾಮದ ಪಕ್ಕದಲ್ಲಿ ಹತ್ತು ಎಕರೆ ಜಮೀನನ್ನು ನೀಡುವುದಾಗಿ ಜಿಲ್ಲಾ ಮಂತ್ರಿಯಾದ ಸತೀಶ ಜಾರಕಿಹೊಳಿ ಅವರು ಯೋಚಿಸಿದ್ದು, ಅದಕ್ಕೆ ಸಂಭಂದಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಮ್ಮ ಸಿಬ್ಬಂದಿಯೊಂದಿಗೆ ತೆರಳಿ ಸ್ಥಳ ವೀಕ್ಷಣೆ ಕೂಡಾ ಮಾಡಿ ಬಂದಿದ್ದಾರೆ..

ಎಲ್ಲವೂ ಅಂದುಕೊಂಡಂತೆ ಆದರೆ, ಮೂರ್ನಾಲ್ಕು ತಿಂಗಳಲ್ಲಿ ಕಟ್ಟಡದ ನಿರ್ಮಾಣ ಕಾರ್ಯ ಪ್ರಾರಂಭವಾಗಿ, ಎರಡ್ಮೂರು ವರ್ಷಗಳಲ್ಲಿ ಸ್ವತಃ ಹೊಸ ಕಟ್ಟಡ ನಿರ್ಮಾಣವಾಗಿ, ಮಕ್ಕಳಿಗೆ ಸುವ್ಯವಸ್ಥಿತವಾದ ಅಧ್ಯಯನ ಹಾಗೂ ವಸತಿ ಕೇಂದ್ರವಾಗಿ ಮಕ್ಕಳ ಭವಿಷ್ಯದ ಬಾಳಿನಲ್ಲಿ ಬೆಳಕಾಗುತ್ತದೆ ಎಂಬ ವಿಶ್ವಾಸ ಸಾರ್ವಜನಿಕರಲ್ಲಿದೆ..

ಇನ್ನು, ತಮ್ಮ ಮನೆ, ಮಕ್ಕಳು, ಸಂಬಂಧಿಕರು, ಆಸ್ತಿ, ಪಾಪ ಪುಣ್ಯ, ಮೇಲು ಕೀಳು, ಎಂದು ಹೇಳಿಕೊಂಡು, ಎಲ್ಲಾ ಇದ್ದೂ ಸಮಾಜಕ್ಕಾಗಿ ಏನೂ ಮಾಡದೇ ಇರುವ ಮಹಾ ಮೇಧಾವಿಗಳ ಮಧ್ಯ,, ಮಕ್ಕಳ ಶಿಕ್ಷಣಕ್ಕಾಗಿ, ಸಮಾಜದ ಒಳಿತಿಗಾಗಿ, ಜ್ಞಾನದ ಬೆಳವಣಿಗೆಗಾಗಿ ಈ ರೀತಿಯ ದೊಡ್ಡಮಟ್ಟದ ಸಹಾಯ ಮಾಡುವ ಗುಣ ಕೆಲವರಿಗೆ ಮಾತ್ರ ಇರುತ್ತದೆ, ಅಂತಹ ಸಮಾಜ ಚಿಂತಕ ಸತೀಶ ಜಾರಕಿಹೊಳಿ ಅವರು ನಮ್ಮ ನಿಮ್ಮೆಲ್ಲರ ಮಧ್ಯ ಇರುವದು ಹೆಮ್ಮೆಯ ವಿಚಾರ..

ವರದಿ ಪ್ರಕಾಶ ಕುರಗುಂದ..