ವಿದ್ಯಾಪೋಷಕಾರದ ಸಚಿವ ಸತೀಶ ಜಾರಕಿಹೊಳಿ ಅವರಿಂದ ಎರಡು ಕೃತಿಗಳ ಲೋಕಾರ್ಪಣೆ…

ವಿದ್ಯಾಪೋಷಕಾರದ ಸಚಿವ ಸತೀಶ ಜಾರಕಿಹೊಳಿ ಅವರಿಂದ ಎರಡು ಕೃತಿಗಳ ಲೋಕಾರ್ಪಣೆ..

ರೈತಪರ ಕಾಳಜಿಯ ಕೃತಿ ಬಿಡುಗಡೆ ಖುಷಿ ನೀಡಿದೆ..

ಡಾ, ಬಿ ಆರ್ ಅಂಬೇಡ್ಕರ್ ಅವರ ಪುಸ್ತಕ ಪ್ರೇಮವೇ ಸಾಮಾಜಿಕ ಕ್ರಾಂತಿಗೆ ಕಾರಣ..

ಸಚಿವ ಸತೀಶ ಜಾರಕಿಹೊಳಿ..

ಗೋಕಾಕ : ರವಿವಾರ ದಿನಾಂಕ 16/06/2024ರಂದು, ಬೆಳಗಾವಿಯ ಶಿವಾ ಆಫಸೆಟ್ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ವತಿಯಿಂದ ಮುದ್ರಿತವಾದ ಹಾಗೂ ಡಾ ಸುನೀಲ್ ಪರೀಟ ಅವರ ಸ್ವರಚಿತದ ಎರಡು ಸಮಾಜಮುಖಿ ಕೃತಿಗಳನ್ನು ಜಿಲ್ಲೆಯ ಜನಪ್ರಿಯ ಸಚಿವರಾದ ಸತೀಶ ಜಾರಕಿಹೊಳಿ ಅವರು ಗೋಕಾಕಿನ ತಮ್ಮ ಸ್ವಗೃಹದಲ್ಲಿ ಲೋಕಾರ್ಪಣೆ ಮಾಡಿ, ಶುಭ ಕೋರಿದ್ದಾರೆ..

“ನನ್ನ ಅನ್ನದಾತ” ಮತ್ತು “ಓ ನನ್ನ ಕಂದ” ಎಂಬ ಎರಡು ಕೃತಿಯನ್ನು ಬಿಡುಗಡೆಗೊಳಿಸಿದ ಸಚಿವರು, ಕೃತಿಗಳ ರಚನೆಕಾರ ಹಾಗೂ ಸಂಪಾದಿತರಾದ ಡಾ ಸುನೀಲ್ ಪರೀಟ ಅವರಿಗೆ ಶುಭಕೋರಿದ್ದು, ಕೃತಿಗಳ ಗುಣಮಟ್ಟದ ಮುದ್ರಣ ಕಾರ್ಯಕ್ಕೆ, ಡಾ ಶಿವು ನಂದಗಾಂವ ಅವರನ್ನು ಅಭಿನಂದಿಸಿದ್ದಾರೆ..

ಶಿಕ್ಷಣ, ಪುಸ್ತಕ, ಓದು, ಹಾಗೂ ಜ್ಞಾನ ಹಿಂದಿನಿಂದಲೂ, ಇಂದಿನವರೆಗೂ ಎಷ್ಟು ಮಹತ್ವ ಪಡೆದಿದೆ ಎಂದು ನಾವು ತಿಳಿದುಕೊಳ್ಳಬೇಕು, ಸಚಿವರು ಸಾಮಾನ್ಯವಾಗಿ ಹೇಳುವಂತೆ, ಇತಿಹಾಸ ನಮಗೆ ಓದಿನ ಮಹತ್ವ ತಿಳಿಸಿದೆ, ಡಾ ಬಿ ಆರ್ ಅಂಬೇಡ್ಕರ್ ಅವರು ಪುಸ್ತಕ ಪ್ರೇಮಿ ಆಗಿದ್ದರಿಂದಲೇ ಸಾಮಾಜಿಕ ಕ್ರಾಂತಿ ಮಾಡಿದರು ಹಾಗೂ ಜಗತ್ತೇ ಮೆಚ್ಚುವ, ಸರ್ವರಿಗೂ ಸಮಾನ ನ್ಯಾಯ ನೀಡುವ “ಸಂವಿಧಾನ” ರಚನೆ ಮಾಡಿದರು ಎಂಬ ಅರ್ಥದಲ್ಲಿ ಮಾತನಾಡಿದರು..

ಗ್ರಾಮಗಳಲ್ಲಿ ಗುಡಿ, ಗುಂಡಾರಗಳಿಗಿಂತ ಮುಖ್ಯವಾಗಿ ಶಾಲೆಗಳು ತೆರೆಯಬೇಕು, ಆಗ ಶಕ್ತಿಯುತ ಸಮಾಜ ನಿರ್ಮಾಣವಾಗುವುದು ಎಂದು ಶಿಕ್ಷಣ, ಪುಸ್ತಕ ಹಾಗೂ ಜ್ಞಾನದ ಮಹತ್ವ ಸಾರುವ ವಿಚಾರಗಳನ್ನು ತಿಳಿಸಿದ ಸಚಿವ ಸತೀಶ ಜಾರಕಿಹೊಳಿ ಅವರು ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ..

ಇನ್ನು, ಕಲೆ, ಸಾಹಿತ್ಯ ಹಾಗೂ ಸಮಾಜ ಸೇವೆಗೆ ಯಾವಾಗಲೂ ಸಹಕಾರ ನೀಡುವ, ಬೆಳಗಾವಿಯ ಕೆಎಎಸ್ ಅಧಿಕಾರಿಯಾದ ಪರಶುರಾಮ ದುಡಗುಂಟಿ ಅವರ ಮುಂದಾಳತ್ವದಲ್ಲಿ ಸಚಿವರನ್ನು ಭೇಟಿಯಾಗಿ, ಕೃತಿ ಲೋಕಾರ್ಪಣೆ ಮಾಡುವ ಈ ಕಾರ್ಯ ಯಶಸ್ವಿಯಾಗಿ ನಡೆದಿದ್ದು, ಕೃತಿ ರಚನೆಕಾರರು ಹಾಗೂ ಮುದ್ರಿತರು ಪರಶುರಾಮ ದುಡಗುಂಟಿ ಅವರಿಗೆ ಕೃತಜ್ಞರಾಗಿದ್ದಾರೆ..

ಇನ್ನು ಈ ವಿಶೇಷ ಸಂದರ್ಭದಲ್ಲಿ ಪರಶುರಾಮ ದುಡಗುಂಟಿ, ಡಾ ಸುನೀಲ್ ಪರೀಟ, ಪ್ರಶಾಂತ ನಾಯಕ, ಅಶೋಕ ಈರಣ್ಣ ಚಂದರಗಿ, ಶಿವಾನಂದ ನಂದಗಾಂವಿ, ಮತ್ತಿತರರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..