
ವಿಶ್ವಗುರು ಬಸವಣ್ಣನವರ ವಚನ ಕಂಠಪಾಠದಲ್ಲಿ ವಿದ್ಯಾರ್ಥಿಗಳ ಸಾಧನೆ..
180 ವಚನಗಳ ಪಠಣದೊಂದಿಗೆ ಪ್ರಥಮ ಸ್ಥಾನ ಪಡೆದ ಶ್ರೇಯಸ್ ಕುರಗುಂದಿ.
ಬೆಳಗಾವಿ : ಇತ್ತೀಚಿಗೆ ಜಾಗತಿಕ ಲಿಂಗಾಯತ ಮಹಾಸಭಾ ಮಹಾನಗರ ಹಾಗೂ ಬೆಳಗಾವಿ ತಾಲೂಕು ಘಟಕದ ವತಿಯಿಂದ ಆರ್, ಎನ್, ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಜರುಗಿದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆಯು ಜರುಗಿತ್ತು.

ಈ ಸ್ಪರ್ಧೆಯಲ್ಲಿ ಮುಚ್ಚಂಡಿ ಗ್ರಾಮದ ಶ್ರೇಯಸ್ ಕುರಗುಂದಿ 180 ವಚನಗಳನ್ನು ಹೇಳುವುದರೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಇದೇ ಗ್ರಾಮದ ಶ್ರವಣಕುಮಾರ ದೇವರಮನಿ 97 ಹಾಗೂ ಸುಪ್ರೀತಾ ಕುಂಬಾರ 96 ವಚನಗಳನ್ನು ಹೇಳಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೂದಿಹಾಳ ಸೇರಿದಂತೆ ಗ್ರಾಮಸ್ತರು, ಶಿಕ್ಷಕರು ಅಭಿನಂದಿಸಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ.