ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಜ್ಯಾದ್ಯಂತ ಶೌರ್ಯ ಜಾಗರಣ ಯಾತ್ರೆ…

ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಜ್ಯಾದ್ಯಂತ ಶೌರ್ಯ ಜಾಗರಣ ಯಾತ್ರೆ..

ಬೆಳಗಾವಿ : ಗುರುವಾರ ನಗರದ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಶ್ವ ಹಿಂದೂ ಪರಷತ್ ಹಾಗೂ ಬಜರಂಗ ದಳ ಸಂಘಟನೆಯ ಪ್ರಮುಖರು, ರಾಜ್ಯದಲ್ಲಿ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 14 ರ ವರೆಗೆ ಪ್ರಮುಖ ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲಿ ಹಿಂದೂ ಜಾಗೃತಿಗಾಗಿ ಶೌರ್ಯ ಜಾಗರಣ ಯಾತ್ರೆ ನಡೆಯುವದು ಎಂಬ ಮಾಹಿತಿ ನೀಡಿದ್ದಾರೆ..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ತಿನ ಹಾಗೂ ಬಜರಂಗ ದಳದ ಪ್ರಮುಖರಾದ ಸ್ತಾನುಮಾಲಯನ್ ಅವರು ಮಾತನಾಡಿ, ಭಜರಂಗ ದಳದ ಸ್ಥಾಪನೆಯ ಉದ್ದೇಶ, ಮೊದಲಿನಿಂದಲೂ ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿಯೇ, ಅದು ಈಗ ಪೂರ್ಣಗೊಂಡಿದೆ, ಇಂದು ದೇಶದಲ್ಲಿ ರಾಷ್ಟ್ರ ವಿರೋಧಿ, ದೇಶವಿರೋಧಿ, ಧರ್ಮವಿರೋಧಿ, ಶಕ್ತಿಗಳು ಒಂದಾಗಿ ದೇಶದಲ್ಲಿ ಆತಂಕವಾದ, ನೆಕ್ಷಲೈಟ್, ಜಾತಿವಾದ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಗೋಹತ್ಯಾ, ಡ್ರಗ್ ಮಾಫಿಯಾ, ಮತಾಂತರ, ಜನಸಂಖ್ಯಾ ಅಸಮತೋಲನ ಹೀಗೆ ಅನೇಕ ಪ್ರಕಾರದ ಕಾರ್ಯಗಳಿಂದ ಹಿಂದೂ ಸಮಾಜ ಒಡೆಯುವ ತಂತ್ರ ನಡೆದಿದೆ ಎಂದರು..

ಧರ್ಮಕ್ಕಾಗಿ ಜಯ ಮತ್ತು ಅಧರ್ಮಗಳ ನಾಶಕ್ಕಾಗಿ ಈ ನಮ್ಮ ಹೋರಾಟ, ಕರ್ನಾಟಕ ಉತ್ತರ ಪ್ರಾಂತ್ಯದಲ್ಲಿ ಸೆಪ್ಟೆಂಬರ್ 30ರಿಂದ, ಎಲ್ಲಾ ವಿಭಾಗಗಳಲ್ಲಿ ಏಕಕಾಲದಲ್ಲಿ ರಥ ಯಾತ್ರೆ ಪ್ರಾರಂಭವಾಗಿ, ಎಲ್ಲಾ ತಾಲೂಕು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಾಗಿ ಅಕ್ಟೋಬರ್ 14 ಶನಿವಾರ ಬ್ರಹತ್ ಸಾರ್ವಜನಿಕ ಸಮಾರಂಭದೊಂದಿಗೆ ಈ ರಥಯಾತ್ರೆ ಮುಕ್ತಾಯ ಆಗುವದು ಎಂಬ ಮಾಹಿತಿ ನೀಡಿದ್ದಾರೆ..

ವರದಿ ಪ್ರಕಾಶ ಕುರಗುಂದ..