ವೀರರಾದರೆ ಮಾತ್ರ ನಮಗೆ ಭದ್ರತೆ ದೊರಕಿ ವೀರಭದ್ರರಾಗುತ್ತೆವೆ…

ಬೆಳಗಾವಿಯಲ್ಲಿ ಸಂಚಲನ ಮೂಡಿಸಿದ ವೀರಭದ್ರೇಶ್ವರ ಜಯಂತ್ಯೋತ್ಸವ 2023..

ವೀರರಾದರೆ ಮಾತ್ರ ನಮಗೆ ಭದ್ರತೆ ದೊರಕಿ ವೀರಭದ್ರರಾಗುತ್ತೆವೆ..

ನಮ್ಮ ಸಮುದಾಯದಲ್ಲಿ ಒಗ್ಗಟ್ಟಿಲ್ಲದಿದ್ದರೂ, ಬುದ್ಧಿಶಕ್ತಿ ಇದೆ, ಹಗುರವಾಗಿ ತಿಳಿದುಕೊಳ್ಳಬೇಡಿ..

ಶ್ರೀಶೈಲ ಪೀಠಾಧಿಪತಿ ಸಿದ್ದರಾಮ ಶಿವಾಚಾರ್ಯರ ನುಡಿ..

ಬೆಳಗಾವಿ : ರವಿವಾರ ನಗರದ ಗಾಂಧಿ ಭವನದಲ್ಲಿ ನಡೆದ ಭವ್ಯ ವೀರಭದ್ರೇಶ್ವರ ಜಯಂತ್ಯೋತ್ಸವವು ವೀರಶೈವ ಲಿಂಗಾಯತ ಶಕ್ತಿ ಪ್ರದರ್ಶನದ ನಿದರ್ಶನವಾಗಿದ್ದು, ಜಿಲ್ಲೆಯಿಂದ ಬಂದ ಸಮುದಾಯದ ಜನಸಾಗರ ಸಮುದಾಯದ ಒಗ್ಗಟ್ಟನ್ನು ಪ್ರದರ್ಶನ ಮಾಡಿದಂತಿತ್ತು..

ವೀರಶೈವ ಲಿಂಗಾಯತ ಸಮುದಾಯದವರಿಂದ, ವೀರಭದ್ರೇಶ್ವರ ಜಯಂತಿ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸುವ ಪ್ರಮುಖ ಬೇಡಿಕೆಯೊಂದಿಗೆ ಈ ಸಭೆಯನ್ನು ಆಯೋಜನೆ ಮಾಡಿದ್ದು, ನಾಡಿನ ವಿವಿಧ ಮಠಾಧೀಶರು, ಸಂಸದರು, ಸಚಿವರು, ಶಾಸಕರು, ವಿವಿಧ ಕ್ಷೇತ್ರಗಳ ಪ್ರಮುಖರ ಸಮ್ಮುಖದಲ್ಲಿ ಈ ಹಕ್ಕೊತ್ತಾಯ ಮಾಡಲಾಯಿತು..

ಸಭೆಯಲ್ಲಿ ಪ್ರಾಸ್ತಾವಿಕ ಮಾತನಾಡಿದ ಮಾಜಿ ಎಂಎಲ್ಸಿ ಮಹಾಂತೇಶ್ ಕವಟಗಿಮಠ ಅವರು, ವೀರಶೈವ ಲಿಂಗಾಯತ ಜನಾಂಗಕ್ಕೆ ತನ್ನದೇ ಆದ ಇತಿಹಾಸವಿದೆ, ಈ ಸಮುದಾಯದ ಎಲ್ಲಾ ಉಪ ಪಂಗಡಗಳನ್ನು ರಾಜ್ಯದ ವರದಿ ಪಡೆದು, ಕೇಂದ್ರ ಸರ್ಕಾರ ಲ್ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು, ಈ ಬೇಡಿಕೆ ಬಹುದಿನಗಳಿಂದ ಇದ್ದಿದ್ದು, ಆದಷ್ಟು ಬೇಗ ಇಡೆರಬೇಕು, ವೀರಭದ್ರ ದೇವರು ಇರುವಲ್ಲಿ ವೀರಶೈವ ಸಮುದಾಯ ಇದ್ದೆ ಇರುತ್ತದೆ, ಎಲ್ಲಾ ಸಮುದಾಯದವರಿಗೂ ವೀರಭದ್ರ ಆರಾಧ್ಯ ದೈವ ಆಗಿದೆ ಎಂದರು..

ವೀರಶೈವರು ಲಿಂಗಾಯತರು ಇಬ್ಬರು ಒಂದೇ, ಸಮಾಜ ದೊಡ್ಡದಿದೆ ಆದರೆ ಸಂಘಟನೆಯ ಕೊರತೆ ಇದೆ, ಈಗ ನಾವು ಒಗ್ಗಟ್ಟಾಗುವ ಪರಿಸ್ಥಿತಿ ಒದಗಿಬಂದಿದೆ ಎಂದರು..

ಇನ್ನು ಉದ್ಘಾಟನಾ ಭಾಷಣ ಮಾಡಿದ ಪ್ರಕಾಶ ಹುಕ್ಕೇರಿ, ನಾವು ಎಲ್ಲರೂ ಒಂದಾದರೆ, ನಾವು ಒಬಿಸಿ ನೂ ಮಾಡಬಹುದು, ಏನೆಲ್ಲಾ ಮಾಡಬಹುದು, ಶ್ರೀಗಳು ಎಲ್ಲರನ್ನೂ ಒಂದುಗೂಡಿಸುವ ಕೆಲಸ ಮಾಡುತ್ತಾರೆ ಆದರೆ ನಾವು ಒಂದಾಗಿತ್ತಿಲ್ಲ, ಪಕ್ಷ ಯಾವುದೇ ಇರಲಿ ಸಮಾಜದ ವಿಷಯ ಬಂದಾಗ ನಾವೆಲ್ಲ ಒಂದಾಗಬೇಕು ಎಂದರು, ಸುಮಾರು ಎರಡು ಕೋಟಿ ಜನ ನಾವಿದ್ದೇವೆ, ನಮ್ಮ ಬೇಡಿಕೆ ಏನಿದ್ದರೂ ಈಡೇರಿಸಿಕೊಳ್ಳಬಹುದು ಆದರೆ ನಾವೆಲ್ಲ ಒಂದಾ ಅಷ್ಟೇ ಎಂದರು..

ಇನ್ನು ಈ ಸಮುದಾಯಕ್ಕೆ ಒಬಿಸಿ ಏಕೆ ಅವಶ್ಯಕವಿದೆ ಎಂಬ ವಿಷಯದ ಕುರಿತಾಗಿ ವಿಷಯ ಮಂಡನೆ ಮಾಡಿದ ಎಂ ಜೆ ಹಿರೇಮಠ ಅವರು, ಕೇಂದ್ರ ಒಬಿಸಿ ಮೀಸಲಾತಿಯಲ್ಲಿ ಶೇ 27 ರಷ್ಟು ಮೀಸಲಾತಿ ಇದೆ, ಈ ಒಬಿಸಿ ಮೀಸಲಾತಿ ಅಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಲ್ಪ ಅಂದರೆ ಶೇ 17 ಪ್ರಮಾಣದ ಸಮುದಾಯ ಮಾತ್ರ ಒಬಿಸಿ ಮೀಸಲಾತಿ ಲಾಭ ಪಡೆಯುತ್ತಿವೆ, ಉಳಿದ ಇನ್ನು ಬಹುತೇಕ ಉಪ ಪಂಗಡಗಳು ಆ ಮೀಸಲಾತಿಗೆ ಸೇರಬೇಕು, ಅದರಿಂದ ನಮ್ಮ ಸಮುದಾಯದ ಬಡ ಮಕ್ಕಳಿಗೆ ಅಮಾಕೂಲ ಆಗುತ್ತೆ, ವೀರಶೈವ ಲಿಂಗಾಯತ ಸಮುದಾಯ ಎಲ್ಲರಿಗೂ ಒಳ್ಳೇದೇ ಬಯಸುವ ಸಮುದಾಯ, ಎಲ್ಲರಿಗೂ ಮೀಸಲಾತಿ ಇದೆ, ನಮ್ಮ ಬಡ ಮಕ್ಕಳಿಗೂ ಸಿಗಲಿ ಎಂದು ಈ ಒಬಿಸಿ ಮೀಸಲಾತಿಯ ಬೇಡಿಕೆ ಎಂದರು.

ನಾವು ಎಲ್ಲಾ ವೀರಶೈವರು ಒಂದೇ, ಕೆಲವರಿಗೆ ಮೀಸಲಾತಿ ನೀಡಿ ಮತ್ತೆ ಕೆಲವರಿಗೆ ನೀಡದಿದ್ದರೆ ಬಡ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದರು..

ಇನ್ನು ಈ ಸಭೆಯಲ್ಲಿ ಶಿರಹಟ್ಟಿಯ ಜಗದ್ಗುರು ಶ್ರೀ ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಮಾತನಾಡಿ, ನಮ್ಮ ಸಮುದಾಯದ ವಿವಿಧ ಕ್ಷೇತ್ರದ ದೊಡ್ಡ ದೊಡ್ಡ ನಾಯಕರನ್ನು ಮೂಲೆಗುಂಪು ಮಾಡಿದರು, ಮಠಕ್ಕೆ ಸ್ವಾಮೀಗಳಿಗೆ, ರಾಜಕಾರಣಿಗಳಿಗೆ, ಕಲಾವಿದರಿಗೆ, ಸಮಾಜದವರು ರಕ್ಷಣೆ ನೀಡಬೇಕು, ಬೆಳಗಾವಿ ಚೆನ್ನಮ್ಮನ ನಾಡು, ಇಲ್ಲಿಯ ಹೆಣ್ಮಕ್ಕಳು ಒಬಿಸಿ ಮೀಸಲಾತಿ ಹೋರಾಟದ ಬಗ್ಗೆ ಜಾಗೃತಿ ಮೂಡಿಸಬೇಕು ಹೆಣ್ಮಕ್ಕಳು ಧೈರ್ಯದಿಂದ ಮುನ್ನುಗುವವರೆಗೂ ಯಾವ ಸಮಾಜವೂ ಪ್ರಗತಿ ಆಗುವದಿಲ್ಲ, ಆದ ಕಾರಣ ನಮ್ಮ ಹೆನ್ನುಕ್ಕಳು ಸಿಡಿದೆಳಬೇಕು ಎಂದರು..

ಸಮಯ ಬಂದರೆ ಎಲ್ಲಾ ವೀರಶೈವ ಲಿಂಗಾಯತರು ಒಂದಾಗಬೇಕು ಎಂದ ಅವರು, ಕಾರ್ಯಕ್ರಮವನ್ನು ಅತೀ ವ್ಯವಸ್ಥಿತ ಹಾಗೂ ಉತ್ತಮ ರೀತಿಯಲ್ಲಿ ಸಂಘಟನೆ ಮಾಡಿದ್ದಕ್ಕೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಗಳಿಗೆ ಹಾಗೂ ಆಯೋಜಕರಿಗೆ ಅಭಿನಂದನೆಯ ಶ್ಲಾಘನೆ ನೀಡಿದರು..

ಇನ್ನು ಶ್ರೀಶೈಲ ಮಹಾಪೀಠದ 1008 ಜಗದ್ಗುರು ಡಾ ಸಿದ್ದರಾಮ ಪಂಡಿತ್ಯರಾಧ್ಯ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಕೇಂದ್ರದ ಒಬಿಸಿ ಮೀಸಲಾತಿ ಪಡೆಯುವುದರಿಂದ ಸಮಾಜದ ಮಕ್ಕಳಿಗೆ ತುಂಬಾ ಅವಶ್ಯಕ, ವೀರಭದ್ರೇಶ್ವರರ ಆಶೀರ್ವಾದ ಈ ಸಮಾವೇಶಕ್ಕೆ ಇರುವುದರಿಂದಲೇ, ಈ ಸಭೆಯಲ್ಲಿ ವೀರಭದ್ರೇಶ್ವರ ಜಯಂತಿಯನ್ನು ಕೂಡಾ ಆಚರಣೆ ಮಾಡುತ್ತಿದ್ದೇವೆ,

ವೀರಭದ್ರ ಜಯಂತಿಯಾದ ಇಂದು, ನಾವು ವೀರರಾಗದೇ ಹೋದರೆ, ನಮಗೆ ಭದ್ರತೆ ಸಿಗುವದಿಲ್ಲ ಎಂದರು, ನಮಗೆ ಒಂದು ವಿಶ್ವಾಸ ಎಂದರೆ ನಮ್ಮ ಸಮಾಜ ಬಲಿಷ್ಠ ಆದರೆ ನಮ್ಮ ಮಠಗಳು ಬಲಿಷ್ಠ ಆಗುತ್ತವೆ, ಆ ಮೂಲಕ ಸಮಾಜದ ಮಕ್ಕಳು ಬಲಿಷ್ಠವಾಗಿ ಬೆಳೆಯುತ್ತಾರೆ ಎಂದರು..

ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಇದ್ದು, ಕೇಂದ್ರದಲ್ಲಿ ಇಲ್ಲಾ ಎಂದರೆ ಅದು ನಮ್ಮ ಸಮುದಾಯಕ್ಕೆ ಅನ್ಯಾಯ ಎಂದರ್ಥ, ಹಿಂದುಳಿದವರನ್ನು ಒಬಿಸಿ ಪಟ್ಟಿಗೆ ಸೇರಿಸುವುದು ಸಂಪ್ರದಾಯ, ಆದರೆ ಜಸ್ಟಿಸ್ ಚಿನ್ನಪ್ಪ ಅವರು ನೀಡಿದ ವರದಿ ಪ್ರಕಾರ ವೀರಶೈವ ಲಿಂಗಾಯತರು ಅತೀ ಹಿಂದುಳಿದವರು ಎಂಬ ವರದಿ ನೀಡಿದ್ದರೂ ಅದನ್ನು ಕೈಬಿಟ್ಟಿದ್ದು ನಮಗಾದ ಅನ್ಯಾಯ ಎಂದರು..

ರಾಜ್ಯ ಸರ್ಕಾರ ಇದರ ಶಿಪಾರಸ್ಸು ಮಾಡಬೇಕು, ಅದರ ಮೂಲಕ ಈ ಸಮಾಜಕ್ಕೆ ಅವರು ಮಾಡಿದ ಉಪಕಾರ ಎನ್ನುತ್ತೇವೆ, ರಾಜ್ಯ ಸರ್ಕಾರ ಈ ಶಿಪಾರಸ್ಸು ಮಾಡಲೇ ಬೇಕು ಎಂದು ಹಕ್ಕಿನಿಂದ ಕೇಳುತ್ತೇವೆ, ವೀರಶೈವರಲ್ಲಿ ಒಕ್ಕಟ್ಟಿಲ್ಲದೆ ಇರಬಹುದು ಆದರೆ ನಾವು ಬುದ್ದಿವಂತರು, ಯಾವುದೇ ಸರ್ಕಾರ ನಮಗೆ ಅನ್ಯಾಯ ಮಾಡಿದರು ಅದಕ್ಕೆ ನಾವು ತಕ್ಕ ಮಟ್ಟಿಗೆ ಬುದ್ದಿ ಕಲಿಸುತ್ತೇವೆ ಎಂದರು..

ಕಾಂತರಾಜ್ ವರದಿಯನ್ನು ನಾವು ತಿರಸ್ಕರಿಸಿದ್ದೇವೆ ಎಂದು ರಾಜ್ಯ ಸರ್ಕಾರಕ್ಕೆ ಈ ಸಭೆಯ ಮೂಲಕ ತಿಳಿಸುತ್ತೇವೆ, ಈ ವಿಷಯದಲ್ಲಿ ಯಾವ ಸ್ವಾಮೀಜಿಗಳಲ್ಲಿಯೂ ಭಿನ್ನಾಭಿಪ್ರಾಯ ಇಲ್ಲ, ನಾವೆಲ್ಲ ಒಂದೇ ಇದ್ದೇವೆ, ಒಂದಾಗಿಯೇ ಈ ಕೇಂದ್ರ ಒಬಿಸಿ ಮೀಸಲಾತಿಗಾಗಿ ಹೋರಾಟ ಮಾಡೋಣ ಎಂದು ಕರೆ ನೀಡಿದರು..

ವರದಿ ಪ್ರಕಾಶ ಕುರಗುಂದ..