ಶಾಖಾ ಕಚೇರಿಗಳಿಗೆ ಧಿಡೀರ್ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿರುವ ಆಯುಕ್ತರು..!!!
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಗೆ ಕಳೆದ ಕೆಲ ದಿನಗಳ ಹಿಂದೆ ಆಯುಕ್ತರಾಗಿ ಅಧಿಕಾರಕ್ಕೆ ಬಂದ ಅಶೋಕ್ ದುಡಗುಂಟಿ ಅವರು, ಬಂದಾಗಿನಿಂದ ತಮ್ಮ ಹೊಸ ಕ್ರಿಯಾಯೋಜನೆಗಳಿಂದ ಹಾಗೂ ಶಿಸ್ತಿನ ವೃತ್ತಿಪರತೆಯ ಸ್ವಭಾವದಿಂದ ಪಾಲಿಕೆಯ ಆಡಳಿತದಲ್ಲಿ ಹೊಸ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದ್ದಾರೆ..
ಬಂದ ಹೊಸತರಲ್ಲಿಯೇ ಪಾಲಿಕೆಯ ಮುಖ್ಯ ಕಚೇರಿಯ ಎಲ್ಲಾ ವಿಭಾಗಗಳಲ್ಲಿಯೂ ಸಂಚರಿಸಿ, ಆಗುಹೋಗುಗಳ ಮಾಹಿತಿ ಪಡೆದು, ಆಡಳಿತ ಸುಧಾರಣೆಗಾಗಿ ಹಲವಾರು ಮಾರ್ಪಾಡುಗಳ ಸೂಚನೆಯನ್ನೂ ನೀಡಿದ್ದರು..
ಅದೇ ರೀತಿ ಕಳೆದ ಎರಡ್ಮೂರು ದಿನಗಳಲ್ಲಿ ಅಶೋಕ್ ನಗರದಲ್ಲಿ ಇರುವ ಪಾಲಿಕೆಯ ಉತ್ತರ ವಲಯದ ಶಾಖಾ ಕಚೇರಿಗೆ, ಹಾಗೂ ಇಂದು ದಕ್ಷಿಣ ವಲಯದ ಶಾಖಾ ಕಚೇರಿಗೆ ಬೇಟಿ ನೀಡಿ, ಸಿಬ್ಬಂದಿಗಳಿಗೆ ಅಚ್ಚರಿ ಮೂಡಿಸಿದ್ದಾರೆ, ಜೊತೆಗೆ ಕಚೇರಿಗೆ ಸಂಬಂಧಿಸಿದ ವಿವಿಧ ವಿಭಾಗಗಳ ಕೆಲಸ ಕಾರ್ಯ ಪರಿಶೀಲಿಸಿ, ಬಾಕಿ ಇರುವ ಕಾರ್ಯವನ್ನು ನಿರ್ಧಿಷ್ಟ ಸಮಯದಲ್ಲಿ ಪೂರ್ಣಗೊಳಿಸುವಂತೆ ಆಯಾ ವಿಭಾಗದ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ..

ಅದೇ ರೀತಿ ಸಾರ್ವಜನಿಕರ ಕೆಲಸದಲ್ಲಿ ವಿನಾಕಾರಣ ವಿಳಂಬ ಮಾಡಬೇಡಿ, ತಮ್ಮ ಕಚೇರಿಯ ಪರಿಕರಗಳ ಕೊರತೆ ಇದ್ದರೆ ತಕ್ಷಣ ತಿಳಿಸಿ, ವ್ಯವಸ್ಥೆ ಮಾಡಲಾಗುವುದು, ಸಣ್ಣ ಪುಟ್ಟ ಕಾರಣದಿಂದ ಯಾವುದೇ ಕೆಲಸ ನಿಲ್ಲಬಾರದು, ನಿಗಧಿತ ಸಮಯದಲ್ಲಿ ಜನರ ಕೆಲಸ ಆಗಬೇಕೆಂದರು..
ಕಚೇರಿಯ ದಾಖಲೆಗಳನ್ನು ಹೊರಗಡೆ ಇಡದೆ, ಸುರಕ್ಷಿತವಾಗಿ ಪೆಟ್ಟಿಗೆ ಅಥವಾ ಟ್ರೆಜುರಿ ಅಲ್ಲಿ ವ್ಯವಸ್ಥಿತವಾಗಿ ಇಡಲು ಮತ್ತೆ ಅತೀ ಹಳೆಯ ಕಟ್ಟದಂತೆ ಕಾಣುವ ಕಚೇರಿಗೆ ಸುಣ್ಣ ಬಣ್ಣ ಹಚ್ಚಿ ಶಿಸ್ತಿನಿಂದ ಇಡೀ ಎಂಬ ಸಲಹೆ ನೀಡಿದರು..
ಕಂದಾಯ ವಿಭಾಗದ ಸಿಬ್ಬಂದಿಗಳು ತಾವು ಮಾಡುವ ಉತ್ತಮ ಕಾರ್ಯದಿಂದ ಜನರಿಗೆ ಅನುಕೂಲವಾಗಿ ಅವರ ಆಸ್ತಿ ದಾಖಲೆಗಳು, ಅಧಿಕೃತ ಮಾರ್ಗದಲ್ಲಿ ಅವರಿಗೆ ಲಭಿಸುವಂತೆ ಆಗಬೇಕು, ಅದರೊಂದಿಗೆ ಪಾಲಿಕೆಯ ತೇರಿಗೆ ಗಳಿಕೆ ಕೂಡಾ ವೃದ್ದಿಸಬೇಕು ಎಂಬ ಸಲಹೆ ನೀಡಿದರು..
ವರದಿ ಪ್ರಕಾಶ ಕುರಗುಂದ..