ಶಾಸಕರ 25 ಲಕ್ಷ ಅನುದಾನದಲ್ಲಿ ಪೊಲೀಸ್ ಸಿಬ್ಬಂದಿಗೆ 13 ಬೈಕ್ ವಿತರಣೆ..
ಪೊಲೀಸ್ ಸಿಬ್ಬಂದಿಗಳ ಶ್ರಮ ಪಟ್ಟು ಕರ್ತವ್ಯ ನಿರ್ವಹಿಸುತ್ತಾರೆ..
ಶಾಸಕ ಆಶಿಫ್ (ರಾಜು) ಸೇಠ್..
ಬೆಳಗಾವಿ : ಪೊಲೀಸರು ಸಾಕಷ್ಟು ಶ್ರಮಪಟ್ಟು ಕೆಲಸ ಮಾಡುತ್ತಾರೆ. ಅವರಿಗೆ ವಿನಾಕಾರಣ ಜನರು ದೂರುತ್ತಾರೆ. ಪೊಲೀಸರ ಸಮಸ್ಯೆಯನ್ನು ಆಲಿಸಬೇಕು. 25 ಲಕ್ಷ ರೂ. ನನ್ನ ಅನುದಾನದಲ್ಲಿ 13 ಬೈಕ್‌ಗಳನ್ನು ನಗರ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ್ದೇನೆ ಎಂದು ಶಾಸಕ ಆಸೀಫ್ ಸೇಠ್ ಹೇಳಿದರು.
ಸೋಮವಾರ ಬೆಳಗಾವಿ ನಗರ ಪೊಲೀಸ್ ಇಲಾಖೆಯ 13 ಸಿಬ್ಬಂದಿಗಳಿಗೆ ನೂತನ ಬೈಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗರ ಪ್ರದೇಶದಲ್ಲಿ ಬಂದೋಬಸ್ತ, ಗಸ್ತು ತಿರುಗಾಡಲು ಪೊಲೀಸರಿಗೆ ತೊಂದರೆಯಾಗುತ್ತದೆ. ನಮಗೆ ಬೈಕ್ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಪೊಲೀಸರ ಬೇಡಿಕೆಗೆ ಸ್ಪಂದಿಸಿ ಶಾಸಕರ ಅನುದಾನದಲ್ಲಿ 13 ಬೈಕ್ ನೀಡಿದ್ದೇನೆ.

ಪೊಲೀಸರ ಬೇಡಿಕೆ ಏನೇ ಇದ್ದರೂ ನನ್ನ ಗಮನಕ್ಕೆ ತಂದರೆ ಅದನ್ನು ಕೊಡುತ್ತೇನೆ ಎಂದು ಭರವಸೆ ನಿಡಿದರು.
ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಮಾತನಾಡಿ, ಶಾಸಕ ಆಸೀಫ್ ಸೇಠ್ ಅವರ 25 ಲಕ್ಷ ರೂ. ಅನುದಾನದಲ್ಲಿ 13 ಬೈಕ್‌ಗಳನ್ನು ನೀಡಿದ್ದಾರೆ. ಪೆಟ್ರೋಲಿಂಗ್, ಹೊಯ್ಸಳಾ ವಾಹನ ಚಿಕ್ಕ ಚಿಕ್ಕ ರಸ್ತೆಯಲ್ಲಿ ಹೋಗುವುದಿಲ್ಲ. 25 ಲಕ್ಷ ರೂ. ಅನುದಾನದಿಂದ ಪೊಲೀಸ್ ಸಿಬ್ಬಂದಿಗಳಿಗೆ 13 ಬೈಕ್ ನೀಡಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಡಿಸಿಪಿ ನಿರಂಜನರಾಜೆ ಅರಸ, ಎನ್.ವಿ. ಬರಮನಿ, ಎಸಿಪಿ ಸದಾಶಿವ ಕಟ್ಟಿಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.