ಶಾಸಕ ಅಭಯ ಪಾಟೀಲ, ಮಹಾಪೌರ ಹಾಗೂ ಉಪಮಹಪೌರರ ಮೇಲೆ ಕ್ರಮ ಜರುಗಿಸಿ..
ರಾಜದ್ರೋಹದ ಪ್ರಕರಣ ದಾಖಲಿಸಲು ನಗರ ಪೊಲೀಸ್ ಆಯುಕ್ತರಿಗೆ ಮನವಿ..
ಬೆಳಗಾವಿ : ಬೆಳಗಾವಿಯ ಅನಗೋಳ ಪ್ರದೇಶದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿ ಉದ್ಘಾಟನಾ ಮಾಡಲು ಜಿಲ್ಲಾಡಳಿತದಿಂದ ಅನುಮತಿ ಪಡೆಯದೇ, ಅನಧಿಕೃತ ಕಾರ್ಯಕ್ರಮದಲ್ಲಿ “ಜೈ ಮಹಾರಾಷ್ಟ್ರ” ಎಂಬ ಘೋಷಣೆ ಕೂಗಿದವರ ವಿರುದ್ಧ ಹಾಗೂ ಅದಕ್ಕೆ ಅವಕಾಶ ನೀಡಿ, ಕಾರ್ಯಕ್ರಮ ಆಯೋಜನೆ ಮಾಡಿದ ಶಾಸಕ ಅಭಯ ಪಾಟೀಲ್, ಪಾಲಿಕೆಯ ಮಹಾಪೌರರಾದ ಸವಿತಾ ಕಾಂಬಳೆ, ಉಪಮಹಪೌರರಾದ ಆನಂದ ಚೌವ್ಹಾಣ್ ಹಾಗೂ ಇತರ ನಗರ ಸೇವಕರ ಮೇಲೆ ರಾಜದ್ರೋಹದ ಪ್ರಕರಣ ದಾಖಲಿಸಬೇಕೆಂದು ಕರವೇ ಮನವಿ ಮಾಡಿಕೊಂಡಿದೆ.

ಕಾರ್ಯಕ್ರಮದ ಆಯೋಜಕರು ವಿರುದ್ಧ ಹಾಗೂ ನಾಡದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಸಂಬಂದಿಸಿದ ತಿಲಕವಾಡಿ ಪೊಲೀಸ್ ಠಾಣೆಯಲ್ಲೂ ದೂರು ನೀಡುವುದಾಗಿ, ಅಲ್ಲಿಯ ಪೊಲೀಸ್ ಸಿಬ್ಬಂದಿ ದೂರು ದಾಖಲಿಸಿಕೊಳ್ಳಲು ತಾವು ಸೂಚನೆ ನೀಡಬೇಕೆಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರ ನಾಯಕರು ಪದೇ ಪದೇ ಬೆಳಗಾವಿಗೆ ಬಂದು ಈ ರೀತಿಯ ಪ್ರಚೋದನಕಾರಿ ಘೋಷಣೆ ಕೂಗುವದರ ವಿರುದ್ಧ ಕರವೇ ಪ್ರತಿಸಲ ಅವರಿಗೆ ಬುದ್ಧಿ ಕಲಿಸುವ ಕಾರ್ಯ ಮಾಡುತ್ತಾ ಬಂದಿದೆ, ಪೊಲೀಸ್ ಇಲಾಖೆಯೂ ಕೂಡಾ ಕನ್ನಡಿಗರ ಬೆಂಬಲಕ್ಕೆ ನಿಂತು, ಕನ್ನಡಿಗರ ಭಾವನೆ ಕೆರಳಿಸುವಂತ ಇಂತಹ ಕೃತ್ಯ ಮಾಡುವವರನ್ನು ಮಟ್ಟ ಹಾಕಬೇಕೆಂದು ಕೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ದೀಪಕ್ ಗುಡಗನಟ್ಟಿ ಅವರ ಜೊತೆ ಕರವೇ ಕಾರ್ಯಕರ್ತರಾದ ಗಣೇಶ್ ರೋಖಡೆ, ಬಾಳು ಜಡಗಿ, ದಶರಥ ಬನೋಸಿ, ಸತೀಶ್ ಗುಡದವರ, ನಿಂಗರಾಜು ಗುಂಡ್ಯಾಗೊಳ್, ಸುಧೀರ್ ಪಾಟೀಲ್, ರಮೇಶ ಯರಗಣ್ಣವರ್, ಚೇತನ್ ಮಾಸ್ತಿಹೊಳಿ, ಜಗದೀಶ್ ಮಾಳಗಿ, ಮಾರುತಿ ಬಸ್ತವಾಡ್, ಶಾಂತಾ ಹಣಬರ, ಮಹಾದೇವಿ ಕುರಬೆಟ್, ರೂಪಾಲಿ ಬಾರಿಗಡ್ಡಿ, ಅರ್ಜುನ್ ಕಾಂಬಳೆ, ವಿನಾಯಕ್ ಭೋವಿ, ಲೋಕೇಶ್ ರಾಥೋಡ್, ರಾಜು ಮುಳಗುಂದ, ವೀರೇಶ್ ಹುಣಶಿಮರದ ಮತ್ತಿತರರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಸಪ್ಪ ಕುರಗುಂದ.