ಶಿಕ್ಷಣದ ಹಾಗೂ ಶಿಕ್ಷಕರ ಬೇಡಿಕೆಗಾಗಿ “ಭಾರತ ಯಾತ್ರೆ” ಅಭಿಯಾನ..
ಬಸವರಾಜ ಗುರಿಕಾರ ಹೇಳಿಕೆ..
ಬೆಳಗಾವಿ : ಬುಧವಾರ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದೇಶಾದ್ಯಂತ ನಾಲ್ಕು ಹಂತಗಳಲ್ಲಿ “ಭಾರತ ಯಾತ್ರೆ” ಅಖಿಲ ಭಾರತ ಶಿಕ್ಷಕರ ಫೇಡರೇಶನ್ ನವದೆಹಲಿ ವತಿಯಿಂದ ಆರಂಭವಾಗಿರುವ ಬಗ್ಗೆ ಎಐಪಿಟಿಎಫ್ ನ ಕಾರ್ಯಾಧ್ಯಕ್ಷರಾದ ಬಸವರಾಜ್ ಗುರಿಕಾರ ಮಾಹಿತಿ ನೀಡಿದ್ದಾರೆ..

ದೇಶದ ಶಿಕ್ಷಣದ ಹಾಗೂ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಸೆಪ್ಟೆಂಬರ್ 05 ರಿಂದ ಅಕ್ಟೋಬರ್ 05 ವರೆಗೆ, ಕನ್ಯಾಕುಮಾರಿಯಿಂದ ನಾಲ್ಕು ತಂಡಗಳಲ್ಲಿ ಈ ಯಾತ್ರೆ ಆರಂಭವಾಗಿ, ಅಕ್ಟೋಬರ್ 05 ರಂದು ನವದೆಹಲಿ ತಲುಪಿ ಕೊನೆಗೊಳ್ಳುವುದು ಎಂಬ ಮಾಹಿತಿ ನೀಡಿದ್ದಾರೆ, ಈ ಯಾತ್ರೆಯಲ್ಲಿ ಅಖಿಲ್ ಭಾರತ ಶಿಕ್ಷಕರ ಫೆಡರೇಶನ್ ಕಾರ್ಯಾಧ್ಯಕ್ಷರಾದ ಬಸವರಾಜ್ ಗುರಿಕಾರ ನೇತೃತ್ವ ವಹಿಸಲಿದ್ದು, ಖಜಾಂಚಿ ಹರಗೋವಿಂದನ್, ಉಪ ಮಹಾ ಕಾರ್ಯದರ್ಶಿ ರಂಗರಾಜನ್, ಭಾಗಿಯಾಗಿದ್ದು, ಇದೊಂದು ವಿಶೇಷ ಯಾತ್ರೆ ಆಗುತ್ತದೆ ಎಂದರು..
ಭಾರತ ಯಾತ್ರೆಯು ಕರ್ನಾಟಕದಲ್ಲಿ 17 ರಿಂದ 23 ರವರೆಗೆ ಏಳು ದಿನ ನಡೆಯಲಿದ್ದು, ಎಲ್ಲಾ ಶಿಕ್ಷಕರು ಇದರಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು, ಯಾತ್ರೆಯು ಪ್ರಮುಖ ಬೇಡಿಕೆಗಳೆಂದರೆ….

- ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು,
- ನೂತನ ಶಿಕ್ಷಣ ನಿತಿಯಲ್ಲಿಯ ಲೋಪದೋಷಗಳನ್ನು ಕೈಬಿಡುವ ಕುರಿತು,
- ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಬದಲಾಗಿ ಖಾಯಂ ಶಿಕ್ಷಕರ ನೇಮಕ ಮಾಡಿಕೊಳ್ಳುವದು,
- ರಾಷ್ಟ್ರದ ಎಲ್ಲಾ ನೌಕರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಂದು ಬೇಧಭಾವ ಮಾಡದೇ, ಏಕರೂಪದ ವೇತನ ಪದ್ಧತಿ ಜಾರಿಗೊಳಿಸಬೇಕು,
ಹೀಗೆ ಹಲವು ಬೇಡಿಕೆಗಳೊಂದಿಗೆ ಈ ಭಾರತ ಯಾತ್ರೆಯು ಆರಂಭಗೊಂಡಿದ್ದು, ಇದರಲ್ಲಿ ಎಲ್ಲಾ ಶಿಕ್ಷಕರು ಭಾಗಿಯಾಗಿ, ಈ ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು..
ವರದಿ ಪ್ರಕಾಶ್ ಕುರಗುಂದ..