ಶಿವಾಜಿ ಮಹಾರಾಜರ ಸಾಮಾಜಿಕ ಸಾಮರಸ್ಯವನ್ನು ಮರೆಯಬಾರದು.

ಛತ್ರಪತಿ ಶಿವಾಜಿ ಮಹಾರಾಜರು” ದಿ ಗ್ರೇಟ್ ಇಂಡಿಯನ್”..

ಶಿವಾಜಿ ಮಹಾರಾಜರ ಸಾಮಾಜಿಕ ಸಾಮರಸ್ಯವನ್ನು ಮರೆಯಬಾರದು.

ಸಚಿವ ಸತೀಶ ಜಾರಕಿಹೊಳಿ..

ಬೆಳಗಾವಿ : ಛತ್ರಪತಿ ಶಿವಾಜಿ ಮಹಾರಾಜರ ದೇಶಪ್ರೇಮ ದೇಶದ ರಕ್ಷಣೆಗಾಗಿ ಶತ್ರುಗಳೊಂದಿಗೆ ಮಾಡಿದ ಹೋರಾಟಗಳು, ಯುದ್ಧತಂತ್ರ, ಸರ್ವಜನರ ಏಳಿಗೆಗಾಗಿ ಉತ್ತಮ ಆಡಳಿತ, ಬೇದಭಾವವಿಲ್ಲದ ಸಾಮಾಜಿಕ ಸಾಮರಸ್ಯದ ಸಂಬಂಧ, ಮರಾಠಾ ಮುಸ್ಲಿಂಮರು ಸಹೋದರರಂತೆ ಇದ್ದಿದ್ದು, ದೇಶದ ರಕ್ಷಕರಾಗಿ ಸಾಮ್ರಾಜ್ಯ ವಿಸ್ತರಣೆ ಜೊತೆಗೆ ಸಾಮಾಜಿಕ ಸಾಂಸ್ಕೃತಿಕ ಮಾನವೀಯತೆ ಬಾಂದವ್ಯ ಬೆಳಸಿದ ಶಿವಾಜಿ ಮಹಾರಾಜರು ಕೇವಲ ದಿ ಗ್ರೇಟ್ ಮರಾಠಾ ಅಲ್ಲಾ, ಅವರು ದಿ ಗ್ರೇಟ್ ಇಂಡಿಯನ್ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದ್ದಾರೆ..

ರವಿವಾರ ದಿನಾಂಕ 18/05/2025 ರಂದು ನಗರದ ಕನ್ನಡ ಭವನದಲ್ಲಿ ಡಾ. ಸರಜೂ ಕಾಟ್ಕರ್ ಅವರ “ಛತ್ರಪತಿ ಶಿವಾಜಿ ದಿ ಗ್ರೇಟ್ ಮರಾಠಾ” ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಚಿವರು, ಛತ್ರಪತಿ ಶಿವಾಜಿ ಮಹಾರಾಜರ ದಿ ಗ್ರೇಟ್ ಮರಾಠಾ ಅನುವುದಕ್ಕಿಂತ ದಿ ಗ್ರೇಟ್ ಇಂಡಿಯನ್‌ ಎಂದು ಕರೆಯಬೇಕು. ಅವರು, ಶ್ರೇಷ್ಠ ಸಮಾಜ ಸೇವಕರಾಗಿದ್ದರು. ದೇಶದಲ್ಲಿ ತಮ್ಮ ಸಾಮ್ರಾಜ್ಯವನ್ನು ಬಲಿಷ್ಠಗೊಳಿಸಿಕೊಂಡು, ಬಹಳಷ್ಟು ದೇಶಾಭಿಮಾನ ಇಟ್ಟುಕೊಂಡು ಬ್ರಿಟಿಷರ ವಿರುದ್ಧ ಎದೆಗೆ ಎದೆಯೊಡ್ಡಿ ಹೋರಾಟ ಮಾಡಿದವರು ಶಿವಾಜಿ ಮಹಾರಾಜರು.

ಅಫ್ಜಲ್ ಖಾನನ ಕ್ರೂರ ಆಡಳಿತದಿಂದ ಬೆಸತ್ತ ಕೆಲವರು ಮುಸ್ಲಿಂ ಸಮುದಾಯದವರು, ಅಫ್ಜಲ್ ಖಾನ್ ಮುಗಿಸಲು ಶಿವಾಜಿ ಮಹಾರಾಜರೊಂದಿಗೆ ಕೈ ಜೋಡಿಸಿದ್ದು ಇತಿಹಾಸ. ಶಿವಾಜಿ ಜೊತೆಗೆ ಹಿಂದೂಗಳಿಗಿಂತ ಮುಸ್ಲಿಮರೇ ಹೆಚ್ಚಾಗಿದ್ದು, ಶಿವಾಜಿಯ ರಕ್ಷಣೆಗೆ ನಿಂತವರು ಮುಸ್ಲಿಂ ಸಮುದಾಯದವರು, ಅಫ್ಜಲ್ ಖಾನನ್ನು ಮುಗಿಸಲು ಮುಸ್ಲಿಮರ ಸಹಾಯ ಇದೆ. ಇದನ್ನು ತಿರುಚುವ ಪ್ರಯತ್ನ ಆಗಬಾರದು, ಅದು ಸಮಾಜಕ್ಕೆ ಮಾರಕ, ಮೋಘಲರಿಂದ ದೇಶವನ್ನು ರಕ್ಷಿಸುವ ಪ್ರಯತ್ನ ಮಾಡಿದವರು ಶಿವಾಜಿ ಮಹಾರಾಜರು, ಬ್ರಿಟಿಷರು, ಡಚ್ಚರು ಹಾಗೂ ಪೋರ್ಚುಗಿಸರೊಂದಿಗೆ ಹೋರಾಡಿದರು, ಇಂತಹ ಶಿವಾಜಿ ಮಹಾರಾಜರ ಇತಿಹಾಸವನ್ನು ಜಗತ್ತಿಗೆ ಪರಿಚಯಿಸಿದವರು ಜ್ಯೋತಿ ಬಾಪುಲೆ ಅವರು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಶಿವಾಜಿ ಮಹಾರಾಜರು ದೂರದೃಷ್ಟಿಯ ನಾಯಕರಾಗಿದ್ದರು. ಶೂದ್ರ ಎನ್ನುವ ಕಾರಣಕ್ಕೆ ಅವರಿಗೆ ಪಟ್ಟಾಭಿಷೇಕ ಮಾಡಲು ತಡೆಯಲಾಗಿತ್ತು. ಹೆಸರು ಮಾಡುತ್ತಾನೆ ಎಂದು ಸಮಾಧಿಯನ್ನು ಮುಚ್ಚಿಡಲಾಗಿತ್ತು. ಇಂದು ಅವರ ಪರವಾಗಿರುವವರೇ ಅಂದು ಅವರ ವಿರೋಧಿಗಳಾಗಿದ್ದರು. ನಿಜವಾದ ಇತಿಹಾಸ ತಿಳಿದುಕೊಳ್ಳುವವರೆಗೆ ಗೊಂದಲ, ಹೊಡೆದಾಟ ಇದ್ದೇ ಇರುತ್ತದೆ ಎಂದು ಮಾರ್ಮಿಕವಾಗಿ ಹೇಳಿದ ಅವರು, ಡಾ ಸರಜು ಕಾಟ್ಕರ ಅವರು ತಾವು ರಚಿಸಿದ “ಶಿವಾಜಿ ದಿ ಗ್ರೇಟ್ ಮರಾಠಾ” ಪುಸ್ತಕದ ಮೂಲಕ ಶಿವಾಜಿ ಮಹಾರಾಜರ ಕುರಿತಾಗಿ ನೈಜವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ, ದೇಶದ ಇತಿಹಾಸ ತಿಳಿಯಲು ಇಂತಹ ಪುಸ್ತಕಗಳ ಅವಶ್ಯವಿದೆ ಎಂದು ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಕೃತಿ ರಚಣೆಕಾರ ಡಾ.ಸರಜೂ ಕಾಟ್ಕರ ಕೃತಿ ರಚನೆ ಕುರಿತು ಮಾತನಾಡಿದ್ದು, ರಾಮಕೃಷ್ಣ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಅಧ್ಯಕ್ಷತೆಯನ್ನು ಡಾ.ಮನು ಬಳಿಗಾರ ವಹಿಸಿದ್ದರು. ಡಾ. ಗುರುದೇವಿ ಹುಲೆಪ್ಪನವರಮಠ, ಯ.ರು. ಪಾಟೀಲ ಕೃತಿ ಪರಿಚಯದ ಕುರಿತಾಗಿ ಮಾಡಿದರು.
ಡಾ.ರಾಮಕೃಷ್ಣ ಮರಾಠೆ ಸ್ವಾಗತಿಸಿದರೆ ಬಸವರಾಜ ಕುಪ್ಪಸಗೌಡರ ನಿರೂಪಿಸಿದರು, ಪತ್ನಿ ಸುಮಾ ಕಾಟ್ಕರ ವಂದಿಸಿದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ.