ಶುಕ್ರವಾರದ ರಾತ್ರಿ ಹಾಗೂ ಶನಿವಾರದ ಬೆಳಿಗ್ಗೆ ಸುರಿದ ಮಳೆ, ಮೋಡ ಬಿತ್ತನೆಯ ಫಲಶ್ರುತಿಯೇ ??

ಶುಕ್ರವಾರದ ರಾತ್ರಿ ಹಾಗೂ ಶನಿವಾರದ ಬೆಳಿಗ್ಗೆ ಸುರಿದ ಮಳೆ, ಮೋಡ ಬಿತ್ತನೆಯ ಫಲಶ್ರುತಿಯೇ ??

ಸಚಿವರ ನಿರೀಕ್ಷೆ ಮೊದಲ ದಿನವೇ ಸಾಫಲ್ಯವಾಯಿತೆ ?

ಬೆಳಗಾವಿ : ರಾಜ್ಯ ಹಾಗೂ ಜಿಲ್ಲೆಯ ಜನರ ಒಳಿತು ಹಾಗೂ ಕ್ಷೇಮಾಭಿವೃದ್ಧಿಯ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಮೊದಲಿನಿಂದಲೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು, ನಿನ್ನೆ ತಮ್ಮ ಒಡೆತನದ ಬೆಳಗಾವಿ ಶುಗರ್ಸ್ ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಮೊಡಬಿತ್ತನೆ ಕಾರ್ಯ ಕೈಗೊಂಡಿದ್ದಾರೆ..

ಈ ವರ್ಷ ಜಿಲ್ಲೆಯಲ್ಲಿ ನಿರೀಕ್ಷೆ ಮಟ್ಟದಲ್ಲಿ ಮಳೆ ಆಗದ ಕಾರಣ, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ, ರೈತರ ಬೆಳೆಗಾಗಿ, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮೊಡಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ್ದು, ದಿನಾಂಕ 29 ರಿಂದ 01ರ ವರೆಗೆ ಮೂರು ದಿನಗಳ ಕಾಲ ಈ ಮಹತ್ಕಾರ್ಯ ನಡೆಸುವ ಮೂಲಕ ಜಿಲ್ಲೆಯ ಜನರ ನೀರಿನ ಭವನೆಯನ್ನು ದೂರ ಮಾಡುವ ನಿರೀಕ್ಷೆಯನ್ನು ಸಚಿವರು ಹೊಂದಿದ್ದಾರೆ..

ಅವರ ನಿರೀಕ್ಷೆಯಂತೆಯೇ ಶುಕ್ರವಾರ ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಮೊಡಬಿತ್ತನೆ ಮಾಡಿದ್ದು, ಅಂದೇ ರಾತ್ರಿ ಬೆಳಗಾವಿ ನಗರ ಸೇರಿದಂತೆ ಕೆಲ ಭಾಗಗಳಲ್ಲಿ ಮಳೆ ಆಗಿದ್ದು, ಬೆಳಗಾವಿ ನಗರದಲ್ಲಿ ರಾತ್ರಿ ವೇಳೆ ಜೋರಾಗಿ ಸುರಿದ ಮಳೆಯು, ಶನಿವಾರದ ಬೆಳಗಿನವರೆಗೂ ಮುಂದುವರೆದಿತ್ತು..

ನಗರದ ಹೊರವಲಯದಲ್ಲಿ ಇರುವ ಗುಡ್ಡ, ಬೆಟ್ಟಗಳ ಮೇಲೆ ಮಳೆಯ ಮೋಡಗಳು ಆವರಿಸಿದ್ದು, ಹಿಂದಿನ ದಿನದ ಮೋಡ ಬಿತ್ತನೆಯ ಪರಿಣಾಮದಿಂದ ಈ ರೀತಿಯ ಮೋಡಗಳು ನಿರ್ಮಾಣವಾಗಿ, ಮಳೆಯ ರೂಪದಲ್ಲಿ ಭುವಿಗೆ ಇಳಿಯುವಂತೆ ಕಾಣುತ್ತಿತ್ತು..

ಒಟ್ಟಿನಲ್ಲಿ ಜನರ ಒಳಿತಿಗಾಗಿ ವಿವಿಧ ಚಟುವಟಿಕೆಗಳಲ್ಲಿ ನಿರತರಾಗಿರುವ ಜಿಲ್ಲೆಯ ಸರಳ ರಾಜಕಾರಣಿಯಾದ ಸತೀಶ ಜಾರಕಿಹೊಳಿ ಅವರ ಕಡೆಯಿಂದ ಇನ್ನೂ ಮತ್ತಷ್ಟು ಜನಪರ ಕಾರ್ಯಗಳು ನಡೆಯಲಿ, ಅದರ ಮೂಲಕ ಸಚಿವರಿಗೆ ಶಾಶ್ವತವಾದ ಜನಾಶೀರ್ವಾದ ದೊರಕಿ, ಯಶಸ್ಸು, ಕೀರ್ತಿ ಅವರ ಪಾಲಿಗೆ ಸದಾ ಲಭಿಸುವಂತಾಗಲಿ ಎಂಬುದು ಸಾರ್ವಜನಿಕರ ಅಭಿಮತವಾಗಿದೆ..

ವರದಿ ಪ್ರಕಾಶ ಕುರಗುಂದ..