ಶೋಷಿತ, ಹಿಂದುಳಿದ ಸಮುದಾಯಗಳು ಶಾಹು ಮಹಾರಾಜರನ್ನು ಎಂದೂ ಮರೆಯಬಾರದು..!!!

ಶೋಷಿತ, ಹಿಂದುಳಿದ ಸಮುದಾಯಗಳು ಶಾಹು ಮಹಾರಾಜರನ್ನು ಎಂದೂ ಮರೆಯಬಾರದು..!!!

ರಾಹುಲ್ ಜಾರಕಿಹೊಳಿ ಹೇಳಿಕೆ..!!!

ಬೆಳಗಾವಿ : ಮಂಗಳವಾರ ದಿನಾಂಕ 08/08/2023ರಂದು ಯುವ ಕಾಂಗ್ರೆಸ್ಸಿನ ನಾಯಕರಾದ ರಾಹುಲ್ ಜಾರಕಿಹೊಳಿ ಅವರು ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಮೀಸಲಾತಿಯ ಜನಕ, ಶಾಹೂ ಮಹಾರಾಜರ 149 ನೇ ಜಯಂತಿ ನಿಮಿತ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಳಗಾವಿ ವತಿಯಿಂದ ಹಮ್ಮಿಕೊಳ್ಳಲಾದ ‘ಸಂಕಲ್ಪ ಸಮಾವೇಶ’ ದಲ್ಲಿ ಭಾಗಿಯಾಗಿ ಈ ಮೇಲಿನಂತೆ ಹೇಳಿದ್ದಾರೆ..

ಡಾ . ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಅಡಿಯಲ್ಲಿ ಶೋಷಿತ ಸಮುದಾಯಗಳ ರಕ್ಷಣೆಯನ್ನು ನಾವು ಮಾಡಬೇಕಾಗಿದೆ, ಈ ನಿಟ್ಟಿನಲ್ಲಿ ನಮ್ಮ ತಂದೆಯವರಾದ ಸತೀಶ ಜಾರಕಿಹೊಳಿ ಅವರು ಮಾನವ ಬಂಧುತ್ವ ವೇದಿಕೆ ಎಂಬ ಸಂಘಟನೆ ಮುಖಾಂತರ ನಿರಂತರವಾಗಿ ಸಮಾಜಮುಖಿ ಕಾರ್ಯ‌ ಮಾಡುತ್ತಿದ್ದಾರೆ..

ಬುದ್ಧ, ಬಸವ, ಅಂಬೇಡ್ಕರ್ ಅವರ ಸಮಾನತೆಯ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಪ್ರತಿಯೊಂದು ಸಮುದಾಯದ ಏಳಿಗೆಗೆ ಶ್ರಮಿಸುತ್ತಿದ್ದಾರೆ, ಶೋಷಿತ ವರ್ಗದ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸತೀಶ ಜಾರಕಿಹೊಳಿ ಫೌಂಡೇಶನ್ ಮೂಲಕ ಉಚಿತ ವೃತ್ತಿಪರ ತರಬೇತಿಗಳನ್ನು ಹಾಗೂ ಶಿಕ್ಷಣ, ಸಾಂಸ್ಕೃತಿಕ, ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಹಕಾರ ನೀಡುತ್ತಿದ್ದಾರೆ‌.

ಇಂದು ನಾವೆಲ್ಲರೂ ಒಗ್ಗಟ್ಟಾಗಿ ಶೋಷಿತರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಡಾ, ಬಾಬಾಸಾಹೇಬರ ಕನಸುಗಳನ್ನು ನನಸಾಗಿ ಮಾಡೋಣ, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸೋಣ ಎಂದು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮೈಸೂರು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಯವರು, ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಸಮಿತಿಯ ರಾಜ್ಯ ಪದಾಧಿಕಾರಿಗಳು, ಪ್ರಮುಖ ಜಿಲ್ಲೆಗಳ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಸ್ಥಳೀಯ ಭೀಮಸೇನೆಯ ನೂರಾರು ಸದಸ್ಯರು, ಸಮುದಾಯದ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ ಪ್ರಕಾಶ ಕುರಗುಂದ..